ಬೆಲ್ಲದ ಬಾಗೇವಾಡಿಯಲ್ಲಿ ಮಳೆಗಾಗಿ ಕುಂಭ ಮೆರವಣಿಗೆ

0
29
loading...

ಹುಕ್ಕೇರಿ 04: ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಳೆಗಾಗಿ ಪರ್ಜನ್ಯಯಾಗವನ್ನು ರೈತರು ಮತ್ತು ಮಹಿಳೆಯರು ಹಮ್ಮಿಕೊಂಡಿದ್ದರು.
ಗ್ರಾಮದ ಜುಲೈ ತಿಂಗಳ ಆಗಮನವಾದರೂ ಮಳೆ ಕೊರತೆ ಉಂಟಾಗಿ ಕಂಗಾಲಾಗಿರುವ ರೈತರು ಎಲ್ಲ ದೇವಸ್ಥಾನಗಳಿಗೆ ನಿರಂತರ 11 ದಿನ ನೀರು ನೀಡುವುದರ ಜೊತೆಗೆ ಕಟ್ಟುನಿಟ್ಟಾಗಿ ವಾರ ಪಾಲಿಸಿದರು. ರೈತ ಧರೆಪ್ಪಾ ಚೌಗಲಾ ಮತ್ತು ಸತ್ತೆಪ್ಪಾ ಮುನ್ನೋಳಿ ಮಾತನಾಡಿ, ಮಾಜಿ ಸಂಸದ, ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಮತ್ತು ಶಾಸಕ ಉಮೇಶ ಕತ್ತಿ ಅವರ ಹಾಗೂ ಗ್ರಾಮದ ಹಿರಿಯರ ಮಾರ್ಗದರ್ಶನದಂತೆ ದೇವರಲ್ಲಿ ಪ್ರಾರ್ಥಿಸಿ ರೈತ ಸಮೂಹಕ್ಕೆ ಹಾಗೂ ನಾಡಿನ ಜನರ ಬದುಕಿಗೆ ಅವಶ್ಯವಾಗಿರುವ ಮಳೆಗಾಗಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಪರ್ಜನ್ಯಯಾಗ ಹಮ್ಮಿಕೊಂಡಿದ್ದೇವೆ ಎಂದರು.ಸೋಮವಾರ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ನೀರು ನೀಡಿದ ರೈತರು ಮತ್ತು ಯುವಕರು,ಮಹಿಳೆಯರು ನಂತರ ಪರ್ಜನ್ಯ ಯಾಗದ ನಿಮಿತ್ಯ ಕುಂಭ ಮೆರವಣಿಗೆ ಸಹಿತ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ದೇಶ್ವರ ದೇವಸ್ಥಾನ ತಲುಪಿ ಯಾಗದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಸುಧೀರ ಕತ್ತಿ,ಬಾಹುಬಲಿ ಮುನ್ನೋಳಿ,ಪ್ರಕಾಶ ಆಲಕನೂರ,ರಾಜು ಖೇಮಲಾಪೂರೆ, ಅಜಿತ ಮುನ್ನೋಳಿ,ನಿಂಗನಗೌಡ ಪಾಟೀಲ ಸೇರಿದಂತೆ ನೂರಾರು ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
********
ರಮೇಶ ಕತ್ತಿ
ಅಧ್ಯಕ್ಷರು ಡಿ.ಸಿ.ಸಿ ಬ್ಯಾಂಕ ಬೆಳಗಾವಿ
ನಮ್ಮ ಹಿರಿಯರು ಬರಗಾಲ ಉಂಟಾದಾಗ ಯಾಗ, ಹೋಮ ಹವನದ ಮೂಲಕ ದೇವರ ಪ್ರಾರ್ಥಿಸುತ್ತಿದ್ದರೆಂಬುದು ಇತಿಹಾಸ.ವಿಜ್ಞಾನಿಗಳ ಅಭಿಪ್ರಾಯದಂತೆ ಈ ವರ್ಷ ಮಳೆ ಚೆನ್ನಾಗಿ ಆಗುತ್ತದೆ ಎಂದು ತಿಳಿಸಿರುವರು. ಜುಲೈ ಪ್ರಾರಂಭವಾದರೂ ಮಳೆ ಕೊರತೆಯಿಂದ ಹಳ್ಳ-ಕೊಳ್ಳ,ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಆದ್ದರಿಂದ ಹಿರಿಯರ ಆಚರಣೆಯಂತೆ ದೇವರ ಮೊರೆ ಹೋಗಬೇಕಾಗಿದೆ.
ಭವಿಷ್ಯತ್ತಿನಲ್ಲಿ ಮಳೆ ಕೊರತೆ ನೀಗಿಸಲು ಗಿಡಮರ ಬೇಳೆಸುವುದು ಅನಿವಾರ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಜನ್ಮ ದಿನದಂದು ಒಂದೊಂದು ಸಸಿ ನೆಟ್ಟು ಅವುಗಳ ಪಾಲನೆ ಮಾಡಬೇಕು. ಅದರಿಂದ ತಾಪಮಾನ ಕಡಿಮೆಯಾಗಿ ನೀರಿನ ಅಂಶ ಇರುವ ಮೋಡಗಳ ಆಕರ್ಷಣೆ ಹೆಚ್ಚಾಗಿ ಮಳೆ ಸುರಿಯುತ್ತದೆ ಎಂದು ಹೇಳಿದರು.

loading...

LEAVE A REPLY

Please enter your comment!
Please enter your name here