ಮರಳು ದಂಧೆಯಂತೆ ಮೊರಂ (ಮಣ್ಣು) ದಂಧೆ ಆರಂಭವಾಗಿದೆ ಕರಿಗಾರ

0
22
loading...

ಧಾರವಾಡ : ಮುಂಗಾರು ಹಂಗಾಮಿನ ಬೆಳೆಗಳಿಗೆ ಬಾಧಿಸುವ ಕೀಟಗಳ ನಿರ್ವಹಣೆ ಕುರಿತು ಕೃಷಿಕರಿಗೆ ಹೆಚ್ಚು ಮಾಹಿತಿ ಒದಗಿಸುವುದು, ಸಮರ್ಪಕವಾಗಿ ಕೃಷಿ ಪರಿಕರಗಳ ವಿತರಣೆಗೆ ಕ್ರಮಕೈಗೊಳ್ಳುವುದು, ವನಮಹೋತ್ಸವದಡಿ ನೆಡಲಾದ ಗಿಡಗಳಿಗೆ ರಕ್ಷಣೆ ಒದಗಿಸುವುದು, ಕೂಲಿ ಕಾರ್ಮಿಕರಿಗೆ ತ್ವರಿತವಾಗಿ ವೇತನ ಪಾವತಿಸುವುದು ಹಾಗೂ ಬ್ಯಾಹಟ್ಟಿ ಭಾಗದಲ್ಲಿ ನಡೆಯುತ್ತಿರುವ ಮೊಹರಂ ಸಾಗಣೆ ಕುರಿತು ತನಿಖೆ ನಡೆಸುವ ಕುರಿತು ಜಿಲ್ಲಾ ಸಭಾಂಗಣದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಶಿರೂರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ವರ್ಷದ ಜೂನ್-ಜುಲೈ ತಿಂಗಳಿಗೆ ಹೋಲಿಸಿದಾಗ ಈ ಬಾರಿ ಶೇ.5ರಷ್ಟು ಹೆಚ್ಚು ಮಳೆಯಾಗಿದೆ. ಅಣ್ಣಿಗೇರಿ ಭಾಗದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆ ಇದೆ. ಬಿತ್ತನೆ ಕಾರ್ಯಗಳು ಪ್ರಗತಿಯಲ್ಲಿದ್ದು, ಇನ್ನು ಶೇ.20 ರಷ್ಟು ಬಿತ್ತನೆ ಮಾತ್ರ ಬಾಕಿ ಉಳಿದಿದೆ. ಯೂರಿಯಾ ಸೇರಿದಂತೆ ರಸಗೊಬ್ಬರದ ದಾಸ್ತಾನು ಸಾಕಷ್ಟಿದೆ. ಈಗಾಗಲೇ ಸುಮಾರು 13 ಸಾವಿರ ಟನ್‍ಗಳಷ್ಟು ರಸಗೊಬ್ಬರ ರೈತರಿಗೆ ಪೂರೈಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ವಿವರಿಸಿದರು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 39.73 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗೆ ಒಪ್ಪಿಗೆ ದೊರೆತಿದೆ. ಇದರಲ್ಲಿ 2014-15ನೇ ಸಾಲಿನ ಮುಂದುವರೆದ ಕಾಮಗಾರಿಗಳಿಗಾಗಿ 24.15 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಉಳಿದ ಅನುದಾನದಲ್ಲಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಔಷಧಿಗಳು ಸದಾಕಾಲ ಲಭ್ಯ ಇರುವಂತೆ ಏರ್ಪಾಡುಗಳಾಗಬೇಕು. ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು, ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸಬೇಕು. ಎಲ್ಲ ತರಗತಿಗಳಿಗೂ ಕನಿಷ್ಟ ಒಬ್ಬ ಶಿಕ್ಷಕರನ್ನಾದರೂ ಒದಗಿಸಿ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು ಎಂದು ಸೂಚಿಸಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ, ಯೋಜನಾ ನಿರ್ದೇಶಕ ಕೆಂಚಣ್ಣವರ, ಯೋಜನಾಧಿಕಾರಿ ಶಿವಶಂಕರರೆಡ್ಡಿ ಸಭೆಯಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here