ಮಸ್ಜಿದ್-ಎ-ಫುರ್‍ಖಾನ್ ನಲ್ಲಿ ಈದ್-ಉಲ್-ಫಿತರ್ ಪ್ರಾರ್ಥನೆ

0
15
loading...

ಕಾರವಾರ : ಕೋಡಿಬಾಗದ ಅಬಕಾರಿ ಕಚೇರಿ ಹತ್ತಿರವಿರುವ ಮಸ್ಜಿದ್-ಎ-ಫುರ್‍ಖಾನ್ ದಲ್ಲಿ ಈದ್-ಉಲ್-ಫಿತರ್ ನಿಮಿತ್ತ ಬೆಳಿಗ್ಗೆ 7.00 ಗಂಟೆಗೆ ಸರಿಯಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಮೌಲಾನಾ ಮುನೀರ್ ಎಮ್.ಷರೀಫ್‍ರವರು ನಮಾಝನ್ನು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ದೇಶದ ಶಾಂತಿಗಾಗಿ ಸಮೃದ್ಧಿಗಾಗಿ ಹಾಗೂ ಒಗ್ಗಟ್ಟಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಸ್ಜಿದ್-ಎ-ಫುರ್‍ಖಾನ್ ನ ಮಾಜಿ ಅಧ್ಯಕ್ಷ ಮೊಹ್ಮಮದ್ ರಫೀಕ್ ಮಿರ್‍ಜಾನ್‍ಕರ್, ರಾಷ್ಟ್ರಪ್ರಶಸ್ತಿ ವಿಜೇತರಾದ ನಜೀರ್ ಅಹಮದ್ ಯು.ಶೇಖ್, ವಕೀಲರಾದ ಎಸ್.ಎ.ಖಾಜಿ, ಡಾ|| ನಯೀಮ್ ಮುಕಾದಮ್, ನಿಸಾರ್ ಖಾನ್, ಫೈಸಲ್ ಮುಕಾದಮ್, ರಿಯಾಜ್ ಮಿರ್ಜಾನ್‍ಕರ್, ರಾಷ್ಟ್ರಯುವ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಹಸನ್ ಶೇಖ್ ಮತ್ತು ಆಝಾದ್ ಯುಥ್ ಕ್ಲಬ್‍ನ ಕೋಶಾಧ್ಯಕ್ಷ ಮೊಹಮ್ಮದ್ ಉಸ್ಮಾನ್ ಶೇಖ್ ಮತ್ತಿತರರು ಉಪಸ್ಥಿತರಿದ್ದರು.
ಮಹಿಳೆಯರಿಗೂ ಪ್ರತ್ಯೇಕವಾದ ಸ್ಥಳದ ವ್ಯವಸ್ಥೆಯನ್ನು ಮಾಡಲಾಗಿದ್ದು, ಪರದೆಯ ಒಳಗಿದ್ದು ಅವರೂ ಸಹ ಈದುಲ್ ಫಿತರ್‍ನ ನಮಾಝನ್ನು ನೆರವೇರಿಸಿದರು.

loading...

LEAVE A REPLY

Please enter your comment!
Please enter your name here