ಮಾಧ್ಯಮಗಳು ಯುವಕರಿಗೆ ಜ್ಞಾನ ಸಂಪಾದನೆಯ ಉದ್ಯಮವಾಗಿದೆ: ಶಾಸಕ ಸೈಲ್

0
48
loading...

ಕಾರವಾರ : ಮಾಧ್ಯಮಗಳು ಯುವ ಜನತೆಗೆ ಜ್ಞಾನಗಳನ್ನು ಸಂಪಾದಿಸುವ ಉದ್ಯಮವಾಗಿದೆ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೇಳಿದರು.
ಪತ್ರಿಕಾ ದಿನಾಚರಣೆಯ ನಿಮಿತ್ತ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ತಾಲೂಕಿನ ಪ್ರೀಮಿಯರ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆ ಹಾಗೂ ದೃಷ್ಯ ಮಾಧ್ಯಮಗಳು ಅನೇಕ ಸಮಸ್ಯೆಗಳನ್ನು ಮನಗಂಡ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ವಾರ್ತಾಧಿಕಾರಿ ಆಧುನಿಕ ಯುಗದಲ್ಲಿ ಎಲ್ಲ ಮಾಧ್ಯಮಗಳು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದೆ. ಅಲ್ಲದೇ ವಾಟ್ಸ್‍ಆಪ್, ಫೆಸ್‍ಬುಕ್‍ಗಳಂತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳನ್ನು ತಕ್ಷಣ ಹೊತ್ತೋಯ್ಯುವಂತದ್ದಾಗಿದೆ. ಇಂದು ಮಾಧ್ಯಮಗಳು ಉಳಿವಿಗೆ ಸ್ಪರ್ಧೆಗಳು ಅನಿವಾರ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರೀಮಿಯರ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಎಸ್. ಜಿ. ಕಾಮತ್, ರಾಸಾಯನಿಕ ಶಾಸ್ತ್ರ ಉಪನ್ಯಾಸಕ ಆರ್. ಗೋವಿಂದಪ್ಪ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕರ್ನಾಟಕದ ಜರ್ನಲಿಸ್ಟ್ ಯೂನಿಯನ್ ಸಂಘದ ಜಿಲ್ಲಾಧ್ಯಕ್ಷ ಕಡತೋಕಾ ಮಂಜು ಅಧ್ಯಕ್ಷತೆ ವಹಿಸಿದ್ದರು.
ಲೇಖಕ ಸಿದ್ಧಲಿಂಗ ಸ್ವಾಮಿ ವಸ್ತ್ರದ ಪತ್ರಿಕಾ ದಿನಾಚರಣೆಯ ಉಪನ್ಯಾಸಕರಾಗಿ ಪಾಲ್ಗೊಂಡು ವಿದೇಶಿರಾಗಿದ್ದ ಹರ್ಮನ್ ಮೋಗ್ಲಿಂಗ್ ಅವರು ಕರ್ನಾಟಕದಲ್ಲಿ ಪತ್ರಿಕೋದ್ಯಮದ ಜನಕರಾಗಿದ್ದರು ಎಂದರೆ ತಪ್ಪಾಗಲಾರದು. ಪಾದ್ರಿಯಾಗಿದ್ದ ಅವರು ಕನ್ನಡ ಕಲಿತು ಕನ್ನಡ ಪತ್ರಿಕೆಯನ್ನು ಹೊರತಂದಿದ್ದರು. ಅದು ಅವರು ಕನ್ನಡಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ ಎಂದರು.
ಇಂದು ಪತ್ರಕರ್ತ ತನ್ನ ಸಮಸ್ಯೆಗಳನ್ನು ಮರೆತು ಇತರರಿಗೆ ನಗಣ್ಯ ಎನ್ನುವಂಥ ವಿಷಯದತ್ತ ಗಮನ ಸೇಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅಲ್ಲದೇ ಇಂದು ಮಾಧ್ಯಮಗಳು ನಮ್ಮನ್ನು ಸುಶಿಕ್ಷಿತರನ್ನಾಗಿಸುತ್ತಿದೆ ಎಂದ ಅವರು ಮಾಧ್ಯಮದಲ್ಲಿನ ಸಮಸ್ಯೆ, ಒಳಿತು, ಕೆಡಕುಗಳ ಸೂಕ್ಷ್ಮತೆಗಳ ಬಗ್ಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಬಳಿಕ ಪತ್ರಿಕೋದ್ಯಮದ ಜನಕ ಎಂದು ಹೆಸರುವಾಸಿಯಾಗಿರುವ ಹರ್ಮನ್ ಮೋಂಗ್ಲಿಂಗ್ ಅವರ ನೆನಪಿನಾರ್ಥ ಪ್ರಶಸ್ತಿಯನ್ನು ಹಿಂದುಳಿದ ತಾಲೂಕು ಜೊಯಿಡಾದ ಪತ್ರಕರ್ತ ಪಾಂಡರಂಗ ಪಟಗಾರ್ ಅವರಿಗೆ ನೀಡಿ ಸನ್ಮಾನಿಸಲಾಯಿತು. ಗಿರೀಶ್ ನಾಯ್ಕ ನಿರೂಪಿಸಿದರು. ದೀಪಕ್ ಗೋಕರ್ಣ ಅತಿಥಿಗಳ ಪರಿಚಯ ನೀಡಿದರು. ದೀಪಕ್ ಶೇಣ್ವಿ ವಂದಿಸಿದರು.

loading...

LEAVE A REPLY

Please enter your comment!
Please enter your name here