ಮುದ್ರಣ ಮಾಧ್ಯಮ ಸಮಾಜ, ಮನುಷ್ಯರನ್ನು ಮುಖಾಮುಖಿಗೊಳಿಸುತ್ತದೆ: ಡಾ.ಗಣೇಶ

0
128
loading...

ಧಾರವಾಡ : ಜಗತ್ತು ಮುದ್ರಣ ಮಾಧ್ಯಮ ಹಾಗೂ ಅಕ್ಷರ ಮಾಧ್ಯಮಗಳಿಂದ ಡಿಜಿಟಲ್ ತಂತ್ರ ಜ್ಞಾನದೆಡೆಗೆ sಸಾಗುತ್ತಿರುವ ಈ ಮಹಾ ಸಂಕ್ರಮಣ ಕಾಲದಲ್ಲಿ ಪತ್ರಿಕಾ ಮಾಧ್ಯಮ ಕಾಣೆಯಾಗುವ ಗಂಭೀೀರವಾದ ಆತಂಕವನ್ನು ಎದುರಿಸುತ್ತದೆ ಎಂದು ಭಾಷಾ ವಿಜ್ಞಾನಿ ಡಾ. ಗಣೇಶ ಎನ್ ದೇವಿ ಅಭಿಪ್ರಾಯಪಟ್ಟರು.
ಆಲೂರು ವೆಂಕಟರಾವ್ ಸಭಾಭವನದಲ್ಲಿ ತ್ರಿಜ್ಯಾ ಚಿಂತನಾ ವೇದಿಕೆ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂಗ್ಲಂಡಿನ ಇಂಡಿಪೆಚಿಡಂಟ್ ದಂತಹ ನೂರು ವರುಷ ಇತಿಹಾಸವಿರುವ ಪತ್ರಿಕೆ ನಿಂತು ಹೋಗಿದ್ದು ಒಂದು ಜೀವಂತ ಚರಿತ್ರೆ ಸ್ತಬ್ಧವಾದಂತಾಗಿದೆ. ಎಲ್ಲ ಮಿತಿಗಳ ನಡುವೆಯೂ ಅಕ್ಷರ ಮತ್ತು ಮುದ್ರಣ ಮಾಧ್ಯಮಗಳು ಸಮಾಜವನ್ನು, ಮನುಷ್ಯರನ್ನು ಮುಖಾಮುಖಿಗೊಳಿಸುವ ಬೆಸೆಯುವ ಜವ್ಹಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದವು. ಆದರೆ ದಿಜಿಟಲ್ ಮಾಧ್ಯಮ ಮನುಷ್ಯರನ್ನು ಮಾತು ಕಸಿದುಕೊಂಡು ಮೌನಕ್ಕೆ ಶರಣಾಗಿಸುತ್ತಿದೆ. ಮನುಷ್ಯರು ಎದುರಿಗೆ ನಿಂತುಕಂಡೇ ಮೆಸ್ಸೇಜ್ ಮಾಡುವ ಸ್ಥಿತಿ ತಲುಪಿದೆ ಎಂದರು.
ಮಾಧ್ಯಮ ಡಿಜಿಟಲ್ ತಂತ್ರ ಜ್ಞಾನದಿಂದ ಅಳಿದು ಹೋಗುವ ಭಯ ಸೃಷ್ಟಿಯಾಗಿದ್ದು ಉಳಿಯುವ ದಾರಿಗಳನ್ನು ಶೋಧಿಸಿಕೊಳ್ಳುವದು ಇಂದಿನ ತುರ್ತಾಗಿದೆ. ಭಾರತದ ಸ್ವಾತಂತ್ರ ಹೋರಾಟವನ್ನು ನಿರ್ವಹಿಸಲು ಹಾಗೂ ತಮ್ಮ ಚಿಂತನೆ ಸಿದ್ಧಾಂತಗಳನ್ನು ಪ್ರತಿಪಾದಿಸಲು ಗಾಂಧೀ, ಟಿಳಕ್, ಅಂಬೇಡ್ಕರ್ ಮೊದಲಾದವರು ಪತ್ರಿಕೆಗಳನ್ನು ಆರಂಭಿಸಿದ್ದನ್ನು ಸ್ಮರಿಸಿದರು.

loading...

LEAVE A REPLY

Please enter your comment!
Please enter your name here