ಯೋಗ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ

0
19
loading...

ಮುನವಳ್ಳಿ 01: ಬೆಂಗಳೂರಿನ ಎಸ್.ಜಿ.ಎಸ್. ಇಂಟರನ್ಯಾಶನಲ್ ಯೋಗಾ ಫೌಂಡೇಶನ್ ಆ್ಯಂಡ ರಿಸರ್ಚ ಸೆಂಟರ್ ವತಿಯಿಂದ ಆಯೋಜಿಸಿದ್ದ ಎರಡನೇ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಸ್ಥಳೀಯ ಜನತಾ ಶಿಕ್ಷಣ ಪ್ರಸಾರಕ ಸಂಘದ ರೇಣಮ್ಮತಾಯಿ ಯಲಿಗಾರ ಕನ್ನಡ ಕಾನ್ವೆಂಟ ಶಾಲೆಯ ವಿದ್ಯಾರ್ಥಿ ಗೀತಾ ನಲವಡೆ (ಪ್ರಥಮ), ರಾಜೇಶ್ವರಿ ಕದಂ (ದ್ವಿತೀಯ), ಶ್ರೀಶೈಲ ಶಿಂತ್ರಿ (ತೃತೀಯ) ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ ಚೇರಮನ್ ಪಿ.ಎಫ್.ಕಾಮಣ್ಣವರ, ಕಾರ್ಯದರ್ಶಿ ವಿ.ಎಸ್.ಯಕ್ಕುಂಡಿ, ನಿವೃತ್ತ ಪ್ರಾಚಾರ್ಯ ಎಸ್.ಪಿ.ಬಾಳಿ, ಮುಖ್ಯೋಪಾಧ್ಯಾಯಿನಿ ಎಂ.ಜಿ.ಹೊಸಮಠ, ಯೋಗ ತರಬೇತುದಾರ ಎಂ.ಎ.ಕಮತಗಿ, ಸಂಘದ ಸದಸ್ಯರು ಹಾಗೂ ಶಿಕ್ಷಕರು ಶ್ಲಾಘಿಸಿದ್ದಾರೆ.

loading...

LEAVE A REPLY

Please enter your comment!
Please enter your name here