ರಸ್ತೆ ಅಪಘಾತ: ಬೈಕ್ ಸವಾರ ಸಾವು

0
19
loading...

ಖಾನಾಪುರ 02: ಇಂದಿರಾ ನಗರ ಬಡಾವಣೆಯಿಂದ ಪಟ್ಟಣದ ಕಡೆ ಬರುತ್ತಿದ್ದ ಬೈಕ್ ಗೆ ಪ್ರಯಾಣಿಕರ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಬೆಳಗಾವಿ ಪಣಜಿ ಹೆದ್ದಾರಿಯ ಮರಾಠಾ ಮಂಡಳ ಕಾಲೇಜು ಬಳಿ ಶುಕ್ರವಾರ ಸಂಜೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ಇಂದಿರಾನಗರ ಹಲಕರ್ಣಿ ನಿವಾಸಿ ನಾಗೇಶ ಗೋವಿಂದ ಹೆಬ್ಬಾಳಕರ (30) ಎಂದು ಗುರುತಿಸಲಾಗಿದ್ದು, ಇವರು ಎಂದಿನಂತೆ ಶಾಲೆಗೆ ತೆರಳಿದ್ದ ತಮ್ಮ ಮಗನನ್ನು ಶಾಲೆಯಿಂದ ಮರಳಿ ಮನೆಗೆ ಕರೆತರಲು ಹೊರಟಿದ್ದರು ಎನ್ನಲಾಗಿದೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here