ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ

0
165
loading...

ಚಿಂಚಲಿ 22: ರಾಯಬಾಗ ತಾಲೂಕಿನಲ್ಲಿ 2016ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಪ್ರಮುಖ ಬೆಳೆಯನ್ನು ಗ್ರಾಮ ಪಂಚಾಯತ ಮಟ್ಟಕ್ಕೆ ಉಳಿದ ಬೆಳೆಗಳನ್ನು ಹೊಬಳಿ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ರಾಯಬಾಗ ಸಹಾಯಕ ಕೃಷಿ ನಿರ್ದೇಶಕರಾದ ಎಂ.ಸಿ ಮನ್ನಿಕೇರಿ ಹೇಳಿದರು.
ಶುಕ್ರವಾರ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಯಬಾಗ ತಾಲೂಕಿನಲ್ಲಿ 2016 ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಭೀಮಾ ( ವಿಮಾ) ಯೋಜನೆಯ ಅಧಿಸೂಚಿತ ಗ್ರಾ.ಪಂ ಮಟ್ಟಕ್ಕೆ ಗೋವಿನ ಜೋಳ ಇರುತ್ತದೆ. 2016ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಭೀಮಾ (ವಿಮಾ) ಯೋಜನೆಯ ಅಡಿ ಅಧಿಸೂಚಿತ ಬೆಳೆಗಳ ಪಟ್ಟಿ ಈ ರೀತಿ ಇರುತ್ತದೆ.
ಕುಡಚಿ ಹೋಬಳಿ: ಮುಸುಕಿನ ಜೋಳ, ಜೋಳ, ಸೂರ್ಯಕಾಂತಿ, ಸೋಯಾಬೀನ್, ಸಜ್ಜೆ
ರಾಯಬಾಗ ಹೋಬಳಿ : ಮುಸುಕಿನ ಜೋಳ, ಜೋಳ (ನೀರಾವರಿ), ಜೋಳ, ಸೂರ್ಯಕಾಂತಿ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಸೋಯಾಬೀನ್ ( ನೀರಾವರಿ), ಸೊಯಾಬೀನ್ (ಮಳೆ ಆಶ್ರಿತ) , ಸಜ್ಜೆ, ತೊಗರಿ (ಮಳೆ ಆಶ್ರಿತ), ಹುರಳಿ (ಮಳೆ ಆಶ್ರಿತ), ಶೇಂಗಾ (ನೀರಾವರಿ), ಶೇಂಗಾ (ಮಳೆ ಆಶ್ರಿತ), ಹತ್ತಿ (ನೀರಾವರಿ), ಅರಷಿನ್ (ನೀರಾವರಿ).
ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಭೀಮಾ (ವಿಮಾ) ಜೊತೆಗೆ ಏಕಿಕೃತ ವಿಮಾ ಯೋಜನೆ ಪ್ಯಾಕೇಜ ಸಹಾಯಧನ ಪಡೆಯಲು, ಇದರ ಜೊತೆಗೆ ಎರಡು ಯೋಜನೆಗಳನ್ನು ಕಡ್ಡಾಯ ಮಾಡಿಸಬೇಕಾಗುತ್ತದೆ. ವೈಯಕ್ತಿಕ ಅಪಘಾತ ವಿಮೆ (ಪ್ರಧಾನ ಮಂತ್ರಿ ಸುರಕ್ಷ ವಿಮಾ ಯೋಜನೆ), ಜೀವ ವಿಮೆ. ಕೃಷಿ ಪಂಪಸೆಟ್‍ಗಳಿಗೆ ವಿಮೆ, ವಿಧ್ಯಾರ್ಥಿ ಸುರಕ್ಷಾ ವಿಮೆ ಮತ್ತು ಕೃಷಿ ಟ್ರ್ಯಾಕ್ಟರಗಳಿಗೆ ವಿಮೆ.
ಮುಂಗಾರಿ ಹಂಗಾಮಿನಲ್ಲಿ ಬೆಳೆ ಸಾಲ ಪಡೆದ ರೈತರಿಗೆ ಕಡ್ಡಾಯವಾಗಿದ್ದು, ಬೆಳೆ ಸಾಲ ಪಡೆಯದ ರೈತರಿಗೂ ಸಹ ಈ ಬೆಳೆ ವಿಮಾ ಯೋಜನೆಯಲ್ಲಿ ಪಾಲ್ಗೊಳ್ಳಲು ಜುಲೈ 30 ಕೊನೆಯ ದಿನಾಂಕವಾಗಿದು. ಹೆಚ್ಚಿನ ಮಾಹಿತಿಗಾಗಿ ಸ್ಥಳಿಯ ಬ್ಯಾಂಕ, ಸಹಕಾರಿ ಸಂಘಗಳು, ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಎಮ್.ಸಿ ಮನ್ನಿಕೇರಿ, ಸಹಾಯಕ ಕೃಷಿ ನಿರ್ದೆಶಕರು, ರಾಯಬಾಗ ರೈತ ಬಾಂದವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here