ವಿವಿಧ ಬೇಡಿಕೆ: ಛಾಯಾಗ್ರಾಹಕರಿಂದ ಪ್ರತಿಭಟನೆ

0
17
loading...

ಗೋಕಾಕ 02: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶನಿವಾರದಂದು ರಾಜ್ಯಾದಂತ್ಯ 1 ದಿನದ ಶಾಂತಿಯುತ ಛಾಯಾಗ್ರಹಣ ಬಂದ ಕರೆ ನೀಡಿದ ನಿಮಿತ್ಯ ಬೆಂಬಲ ವ್ಯಕ್ತಪಡಿಸಿ ಗೋಕಾಕ ತಾಲೂಕಾ ವೃತ್ತಿ ನಿರತ ಛಾಯಾಚಿತ್ರಗಾಹಕರ ಸಂಘವು ಛಾಯಾಗ್ರಹಣ ಬಂದ ಮಾಡಿ ಪ್ರತಿಭಟನೆ ನಡೆಸಿ ತಹಶೀಲದಾರ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕಿನ ಎಲ್ಲ ಛಾಯಾಗ್ರಾಹಕರು ಮತ್ತು ಲ್ಯಾಬ್ ಮಾಲಕರು ತಮ್ಮ ಸ್ಟುಡಿಯೋ ಮತ್ತು ಲ್ಯಾಬ್‍ಗಳನ್ನು ಬಂದ ಮಾಡಿ ಇಲ್ಲಿಯ ಸಂಗೋಳ್ಳಿ ರಾಯಣ್ಣಾ ವೃತ್ತದಲ್ಲಿ ಸೇರಿ ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.
ಕರ್ನಾಟಕ ರಾಜ್ಯದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಛಾಯಾಗ್ರಾಹಕರು ಇದ್ದು ಅವರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಸ್ಪಂದಿಸಿ ಪರಿಹರಿಸಲು ಮುಂದಾಗಬೇಕು. ರಾಜ್ಯದ ಛಾಯಾ ಮತ್ತು ವೀಡಿಯೋ ಚಿತ್ರೋದ್ಯಮ ಹಲವಾರು ದಶಕಗಿಳಿಂದ ನಿಂತ ನೀರಾಗ ಬಿಟ್ಟಿದೆ. ಸಮಸ್ಯೆಗಳಿಗೆ ನಮ್ಮ ಸ್ವಯಂ ಬಲದಿಂದ ಪರಿಹಾರ ಮಾಡಿಕೊಂಡು ಮುಂದುವರಿಯುತ್ತಿರುವ ನಮಗೆ ಸರ್ಕಾರದ ಬಲ ಬೆಂಬಲ ಬೇಕು, ನಮ್ಮ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸಿ ರಾಜ್ಯದ ಜನತೆಗೆ ಹೆಚ್ಚಿನ ಮಟ್ಟದಲ್ಲಿ ಸೇವೆ ಸಲ್ಲಿಸುವುದಕ್ಕೆ ಅನುವು ಮಾಡಿಕೊಂಡಬೇಕೆಂದು ಆಗ್ರಹಿಸಿದ್ದರು.
ಪ್ರತಿಭಟನೆಯಲ್ಲಿ ಲೋಳಸೂರ ಗ್ರಾಮ ಪಂಚಾಯತಿ ಸದಸ್ಯರು ಆನಂದ ಮಗದುಮ್, ಸಂಘದ ಅಧ್ಯಕ್ಷ ರವಿ ಉಪ್ಪಿನ. ಉಪಾಧ್ಯಕ್ಷ ವಿರೇಶ ಕೊಳದೂರ, ಕಾರ್ಯದರ್ಶಿ ಮಲ್ಲಿಕಾರ್ಜುನ ಕೆ.ಆರ್. ಖಜಾಂಚಿ ಲಕ್ಷ್ಮಣ ಯಮಕನಮರಡಿ, ನಿರ್ದೇಶಕರಾದ ಗಂಗಾಧರ ಕಳ್ಳಿಗುದ್ದಿ, ರಾಜಶೇಖರ ರಜಪೂತ, ಮುಖೇಶ ಹಾಗರಗಿ, ವೈಭವ ಜರತಾರಕರ, ರಾಘವೇಂದ್ರ ಮಾಲದಿನ್ನಿ, ಆನಂದ ವಣ್ಣೂರ, ಮಧುಸೂದನ ಸೋನಗೋಜಿ, ಬಸವರಾಜ ಹಿರೇಮಠ, ಸೇರಿದಂತೆ ತಾಲೂಕಿನ ಎಲ್ಲ ಛಾಯಾಗ್ರಾಹಕರು ಭಾಗವಹಿಸಿದ್ದರು.

 

loading...

LEAVE A REPLY

Please enter your comment!
Please enter your name here