ಶಾಂತತೆಯನ್ನು ಕಾಪಾಡಿ: ಡಾ. ವಿಶ್ವನಾಥ ಪಾಟೀಲ

0
19
loading...

ಬೈಲಹೊಂಗಲ 27: ರಾಜ್ಯ ಸರ್ಕಾರ 7.5 ಟಿಎಂಸಿ ಕುಡಿಯುವ ನೀರಿಗಾಗಿ ನ್ಯಾಯಾಧಿಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ವಾದಗಳನ್ನು ಪರಿಶೀಲಿಸಿ ನ್ಯಾಯಾಧೀಕರಣ ಸರ್ಕಾರದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದೆ. ಇದು ಮಧ್ಯಂತರ ಅರ್ಜಿಯಾಗಿದ್ದರಿಂದ ಕರ್ನಾಟಕದ ಪರ ತೀರ್ಪು ಬರುವ ವಿಶ್ವಾಸವಿದೆ ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಶಾಖಾಮೂರುಸಾವಿರಮಠದಲ್ಲಿ ಪ್ರತಿಭಟನಾಕಾರನ್ನು ಉದ್ದೇಶಿಸಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಈ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶ ಇರುವದರಿಂದ ಪಕ್ಷದ ರಾಜ್ಯ ನಾಯಕರ ಮೂಲಕ ಕೇಂದ್ರ ಮುಖಂಡರ ಮೇಲೆ ಒತ್ತಡ ಹೇರಲಾಗುವದು ಎಂದರಲ್ಲದೆ ಜನತೆ ಶಾಂತತೆಯನ್ನು ಕಾಪಾಡಬೇಕೆಂದು ಮನವಿ ಮಾಡಿದರು.
ಕೂಡಲೇ ರಾಜ್ಯ ಸರ್ಕಾರ ನ್ಯಾಯಾಧಿಕರಣದ ತೀರ್ಪನ್ನು ಪರಿಶೀಲಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಹೋರಾಟ ಸಮೀತಿ ಮುಖಂಡರಾದ ಶಿವರಂಜನ ಬೋಳನ್ನವರ, ಶ್ರೀಶೈಲ ಬೋಳನ್ನವರ, ಮಹಾಂತೇಶ ತುರಮರಿ, ಸಿ.ಕೆ.ಮೆಕ್ಕೇದ, ಮಹಾಂತೇಶ ಮತ್ತಿಕೊಪ್ಪ, ಮಡಿವಾಳಪ್ಪ ಹೋಟಿ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮುರುಗೇಶ ಗುಂಡ್ಲೂರ, ಮಹೇಶ ಹರಕುಣಿ, ಬಾಬುಸಾಬ ಸುತಗಟ್ಟಿ, ಶಂಕರ ಮಾಡಲಗಿ, ಫಕೀರಗೌಡ ಸಿದ್ದನಗೌಡರ ಮಾತನಾಡಿ, ಈ ನಾಡಿನ ಜನತೆ ಕುಡಿಯುವ ನೀರಿಗಾಗಿ ಕಳೆದ ಒಂದು ವರ್ಷದಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ. ರಾಜ್ಯದ ಜನತೆಯ ಒತ್ತಾಯದ ಮೇರೆಗೆ ಸರ್ಕಾರ ನ್ಯಾಯಾಧೀಕರಣಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಇದು ರಾಜ್ಯದ ಪರವಾಗಿ ಬರುತ್ತದೆ ಎಂದು ಆಶಾಭಾವನೆ ಇಟ್ಟುಕೊಂಡು ಕಾದು ಕುಳಿತಿದ್ದರು ಧೀಡಿರನೆ ಇಂದು ರಾಜ್ಯ ಸರ್ಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ತೀರಸ್ಕಾರ ಮಾಡಿರುವದು ತುಂಬಾ ನಿರಾಸೆ ಉಂಟು ಮಾಡಿದೆ. ಕೂಡಲೇ ರಾಜ್ಯ ಸರ್ಕಾರ ನ್ಯಾಯಾಧಿಕರಣದ ತೀರ್ಪನ್ನು ಪರಿಶೀಲಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಶಾಖಾಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ ಸಾನಿಧ್ಯ ವಹಿಸಿ ಮಾತನಾಡಿ, ಈ ನಾಡಿನ ಜನತೆಯ ಕಳೆದ ನಾಲ್ಕು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದರು ಸರ್ಕಾರಗಳು ಇಚ್ಚಾಶಕ್ತಿ ಪ್ರದರ್ಶಿಸುತ್ತಿಲ್ಲ. ಕುಡಿಯುವ ನೀರಿಗಾಗಿ ಈ ಭಾಗದ ಜನತೆ, ಮಠಾಧೀಶರು, ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಬಂದ, ಬೀದಿಗಿಳಿದು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ಯೋಜನೆ ಅನುಷ್ಠಾನಗೊಳಿಸಲು ಬದ್ದರಾಗಬೇಕೆಂದರು.
ಈ ಸಂದರ್ಭದಲ್ಲಿ ಕುಮಾರ ದೇಶನೂರ, ಸೋಮನಾಥ ಸೊಪ್ಪಿಮಠ, ರಾಜು ಸೊಗಲ, ಚಂದ್ರಕಾಂತ ಮೆಲಗೇರಿ, ಮಲ್ಲಿಕಾರ್ಜುನ ಹುಂಬಿ, ಶಿವಾನಂದ ಕೋಲಕಾರ, ವಿಠ್ಠಲ ಅಂದಾನಿ, ಶ್ರೀಶೈಲ ಹಂಪಿಹೊಳಿ, ಚಂದ್ರಶೇಖರ ಚಿನಿವಾಲರ, ವಿರುಪಾಕ್ಷಯ್ಯ ಕೋರಿಮಠ, ಸಯ್ಯದ ಸುಭಾನಿ, ಮಹಾಂತೇಶ ಅಕ್ಕಿ, ಸುಭಾಷ ತುರಮರಿ, ವಿರುಪಾಕ್ಷ ವಾಲಿ, ವಿಠ್ಠಲ ಕಡಕೋಳ, ಶ್ರೀಕಾಂತ ಶಿರಹಟ್ಟಿ, ರಫೀಕ ಬಡೇಘರ, ಮಾರ್ತಾಂಡ ಕೋಟಗಾರ, ರಾಜು ನರಸನ್ನವರ, ಗುರು ಮೆಟಗುಡ್ಡ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here