ಶಾರ್ಟ್ ಸೆಕ್ರ್ಯೂಟ್ ನಿಂದಾಗಿ ಸುಟ್ಟು ಭಸ್ಮ: ಲಕ್ಷಾಂತರ ಬೆಲೆಯ ವಸ್ತುಗಳು ನಾಶ

0
29
loading...

ಭಟ್ಕಳ : ನಗರದ ನವಾಯತ್‍ ಕಾಲೋನಿಯ ತಂಝೀಮ್‍ಜಾಮಿಯಾ ಮಸೀದಿ ಬಳಿ ಇರುವ ಅನ್ಫಾಲ್ ಗ್ರೂಪ್ ಆಫ್ ಕಂಪನಿಗೆ ಸೇರಿದ ಕಚೇರಿಯಲ್ಲಿ ಶಾರ್ಟ್ ಸೆಕ್ರ್ಯೂಟ್ ನಿಂದಾಗಿ ಬೆಂಕಿ ತಾಗಿಕೊಂಡಿದ್ದು ಲಕ್ಷಾಂತರರೂ ಮೌಲ್ಯದ ವಸ್ತುಗಳು ಸುಟ್ಟು ನಾಶಗೊಂಡಿರುವ ಘಟನೆ ಸೋಮವಾರ ಬೆಳಗಿನ ಜಾವ 3.30ರ ಸುಮಾರುಜರಗಿದೆ. ಅಗ್ನಿ ಶಾಮಕ ದಳದ ಸಮಯ ಪ್ರಜ್ಞೆಯಿಂದಾಗಿ ಅಕ್ಕಪಕ್ಕದ ಅಂಗಡಿ, ಕಚೇರಿಗಳು ಬೆಂಕಿಯಿಂದ ಸುರಕ್ಷಿತ ಗೊಂಡಾಂತಾಗಿದೆ.
ಲಭ್ಯ ಮಾಹಿತಿಯಂತೆ ಭಟ್ಕಳ ನಗರಠಾಣೆಯ ಪಿ.ಎಸ್.ಐ ಕುಡಗುಂಟೆ ತಮ್ಮ ಸಿಬ್ಬಂಧಿಯೊಂದಿಗೆ ಗಸ್ತಿನಲ್ಲಿದ್ದಾಗ ಸದ್ರಿಕಚೇರಿಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೆ ಸಂಬಂಧಿಸಿದ ಕಚೇರಿಯ ಮಾಲಿಕರನ್ನುದೂರವಾಣಿ ಮೂಲಕ ಸಂಪರ್ಕಿಸಿದ್ದು ನಂತರ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಪ್ರಧಾನ ಕಾರ್ಯದರ್ಶಿ ಅಲ್ತಾಫ್‍ಖರೂರಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಕೂಡಲೆ ಅಗ್ನಿ ಶಾಮಕ ದಳವನ್ನು ಕರೆಸಿಕೊಂಡು ಉಂಟಾಗುವ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.ಈ ಬೆಂಕಿ ದುರ್ಘಟನೆಯಲ್ಲಿ ಕಚೇರಿಯಲ್ಲಿನ ಲಕ್ಷಾಂತರ ರೂಗಳ ವಸ್ತು ನಾಶಗೊಂಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೂರುಗಣಕ ಯಂತ್ರಗಳು, ಒಂದು ಏ.ಸಿ.ಸಿಸಿಟಿವಿ ಕ್ಯಾಮರ, ಟೇಬಲ್ ಕುರ್ಚಿ, ಸೋಫಾ ಸೆಟ್ ಸೇರಿದಂತೆ ಸುಮಾರು ಐದು ಲಕ್ಷಕ್ಕೂಅಧಿಕ ಮೌಲ್ಯದ ವಸ್ತುಗಳು ನಾಶಗೊಂಡಿವೆ ಎಂದು ಅಂದಾಜಿಸಲಾಗಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಅನ್ಫಾಲ್ ಸೂಪರ್ ಮಾರ್ಕೆಟ್ ನ ಮಾಲಿಕರಾದಅನ್ಫಾಲ್‍ರುಕ್ನುದ್ದೀನ್, ಇಮ್ತಿಯಾಝ್‍ರುಕ್ನುದ್ದೀನ್, ಅಫ್ಝಾನ್‍ರುಕ್ನುದ್ದೀನ್ ಸಮೇತತಂಝಿಮ್ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಮುಹಿದ್ದೀನ್‍ಖರೂರಿ ಸ್ಥಳಕ್ಕೆ ಧಾವಿಸಿ ಬಂದಿದ್ದು ಬೆಂಕಿಯನ್ನು ನಂದಿಸುವಲ್ಲಿ ಸಹಕರಿಸಿದ್ದಾರೆ.
ನಗರಠಾಣೆಯ ಪಿ.ಎಸ್.ಐ. ಕುಡಗುಂಟೆ, ಪೊಲೀಸ್ ಸಿಬ್ಬಂಧಿ ಹಾಗೂ ಅಗ್ನಿ ಶಾಮಕದಳದವರು ಸಮಯಪ್ರಜ್ಞೆಯಿಂದಾಗಿ ಭಾರಿಅನಾಹುತವೊಂದುತಪ್ಪಿದಂತಾಗಿದೆ.

loading...

LEAVE A REPLY

Please enter your comment!
Please enter your name here