ಶೀಗ್ರವೇ ನೂತನ ರಾಜಕೀಯ ಪಕ್ಷ ಸ್ಥಾಪನೆ: ಎಸ್.ಆರ್.ಹಿರೇಮಠ

0
30

loading...

ಬೆಳಗಾವಿ:3 ನೂತನ ರಾಜಕೀಯ ಪಕ್ಷ ಸ್ಥಾಪನೆಯ ಸಾಧ್ಯತೆಯ ಹೊಳಹನ್ನು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹೀರೆಮಠ ಹೊರಹಾಕಿದ್ದಾರೆ.
ಅವರು ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಒಳ್ಳೆಯ ಜನ ಮುಂದೆ ಬಂದರೆ ಹೊಸ ಪಕ್ಷ ರಚನೆಯ ಸಾಧ್ಯತೆ ಇದೆ ಎಂದರು. ಹೊಸ ಪಕ್ಷದ ಸಾಧ್ಯತೆಯನ್ನು ತಳ್ಳಿ ಹಾಕುವುದಿಲ್ಲ. ಆದರೆ ಈ ಬಗ್ಗೆ ದೀರ್ಘ ಚಿಂತನೆ ಅಗತ್ಯವಿದೆ ಎಂದರು.
ಕೇವಲ ಚುನಾವಣೆ ಬಗ್ಗೆ ಆಲೋಚನೆ ಮಾಡುವುದರಿಂದ ರಾಜಕೀಯ ಬದಲಾವಣೆ ತರಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಸಮಗ್ರ ಬದಲಾವಣೆ ತರುವುದು ತಮ್ಮ ಉದ್ಧೇಶವಾಗಿದೆ. ಇಂದು ದೇಶ ಹಾಗೂ ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ಸಂಕೀರ್ಣ ಪರಿಸ್ಥಿತಿಯು ಅಪಾಯಕಾರಿ ಮಟ್ಟವನ್ನು ತಲುಪಿದೆ. ರಾಜಕೀಯ ಹದಗೆಟ್ಟಿದೆ. ಪ್ರಜಾಪ್ರಭುತ್ವ ಹೈಜಾಕ್ ಆಗಿದೆ ಎಂದು ಅವರು ಹೇಳಿದರು.
ರಾಜಕಾರಣದ ಜನತಾಂತ್ರೀಕರಣ, ಚುನಾವಣೆ ಸುಧಾರಣೆ ಹಾಗೂ ಜನ ಸಾಮಾನ್ಯರೇನು ಮಾಡಬಹುದು ಎಂಬ ದಿಶೆಯಲ್ಲಿ ಚಿಂತನೆ ಅಗತ್ಯವಾಗಿದೆ ಎಂದು ಎಸ್.ಆರ್.ಹೀರೆಮಠ ಹೇಳಿದರು. ಈ ದಿಶೆಯಲ್ಲಿ ಜುಲೈ 9 ಮತ್ತು 10 ರಂದು ಧಾರವಾಡದಲ್ಲಿ ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸಾಮಾಜಿಕ ಹೋರಾಟಗಾರ ರವಿ ಕೃಷ್ಣಾರೆಡ್ಡಿ ಮಾತನಾಡಿ, ಜೆಸಿಬಿ(ಜೆಡಿಎಸ್ ಕಾಂಗ್ರೆಸ್ ಬಿಜೆಪಿ) ಮಧ್ಯೆ ರಾಜಕೀಯ ಪರ್ಯಾಯ ಗೋಚರಿಸುತ್ತಿಲ್ಲ ಎಂದರು. ಜೆಸಿಬಿಗೆ ಪರ್ಯಾಯವಾಗಿ ಜನಪರ್ಯಾಯ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಲಾಗುವುದು. ಇದಕ್ಕಾಗಿ ದೇವನೂರು ಮಹಾದೇವ, ಕೆ.ಎಸ್.ಪುಟ್ಟಣ್ಣಯ್ಯ ಮುಂತಾದವರ ಜತೆ ಚರ್ಚೆ ಮಾಡಲಾಗುತ್ತಿದೆ. ಲೋಕ ಉಮದುವಾರ ಪರಿಕಲ್ಪನೆಯಿಂದ ಕಾರ್ಯ ಯೋಜನೆ ರೂಪಿಸಲಾಗುವುದು. ಈ ದಿಶೆಯಲ್ಲಿ ಆಯೋಜಿಸಲಾಗುವ ಜನಪರ್ಯಾಯ ಸಾಧ್ಯತೆಗಳ ಚಿಂತನಾ ಸಮಾವೇಶದಲ್ಲಿ ದೇಶದ ವಿವಿದೆಡೆಯಿಂದ ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದರು.

*******

ಯಡಿಯೂರಪ್ಪ, ಡಿಕೆ ಶಿವಕುಮಾರ, ಆರ್ ವಿ ದೇಶಪಾಂಡೆ ಇಂದಲ್ಲ ನಾಳೆ ಕಂಬಿ ಎಣಿಸಲೇ ಬೇಕು. ಆ ದಿನ ದೂರವಿಲ್ಲ ಎಂದು ಎಸ್.ಆರ್.ಹೀರೆಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂತೋಷ ಹೆಗಡೆ ವರದಿಯನ್ನು ಸರ್ಕಾರ ಜಾರಿ ಮಾಡಿಲ್ಲ. ಇದರಿಂದ ಜೈಲಿಗೆ ಸೇರಬೇಕಾಗಿದ್ದ ಭ್ರಷ್ಟರು ಹೊರಗೆ ಓಡಾಡಿಕೊಂಡಿz್ದÁರೆ. ಲೋಕಾಯುಕ್ತ ವ್ಯವಸ್ಥೆಗೆ ಅತಿ ದೊಡ್ಡ ಹಾನಿ ಮಾಡಿದ್ದು ಸಿದ್ದರಾಮಯ್ಯ. ಸ್ವತ: ಸೋನಿಯಾ ಗಾಂಧಿ ಕಿಕ್ ಔಟ್ ಮಾಡಿದ್ದ ಸಂತೋಷ ಲಾಡ್ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಂಡಿz್ದÁರೆ. ಲೋಕಾಯುಕ್ತ ಸಂಸ್ಥೆ ಮೂರಾಬಟ್ಟೆ ಮಾಡಿ ಅವರ ಅಧಿಕಾರ ಕಸಿದುಕೊಂಡು ಸಿದ್ದರಾಮಯ್ಯ ಭ್ರಷ್ಟ ರಾಜಕಾರಣಿ ಸಾಲಿನಲ್ಲಿ ಸೇರಿz್ದÁರೆ ಎಂದು ಎಸ್.ಆರ್.ಹೀರಮಠ ಆರೋಪಿಸಿದರು.

loading...

LEAVE A REPLY

Please enter your comment!
Please enter your name here