ಶ್ರೀಗಳ ಜನ್ಮದಿನದ ನಿಮಿತ್ಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ

0
25
loading...

ಚಿಕ್ಕೋಡಿ: ಚರಮೂರ್ತಿಮಠದ ಸಂಪಾದನ ಮಹಾಸ್ವಾಮಿಗಳು ಜನ್ಮದಿನದ ನಿಮಿತ್ಯ ಪಟ್ಟಣದ ಭಕ್ತಾಧಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಎಸ್.ವೈ.ಹಂಜಿ ಮಾತನಾಡಿ, ಇಂದಿನ ಕಾಲದಲ್ಲಿ ಹುಟ್ಟು ಹಬ್ಬದ ನಿಮಿತ್ಯ ಅದ್ದೂರಿ ಕಾರ್ಯಕ್ರಮ ಆಚರಿಸುವದು ಸರ್ವೇ ಸಾಮಾನ್ಯವಾಗಿದೆ. ಆದರೆ ಸ್ವಾಮಿಗಳು ತಮ್ಮ ಹುಟ್ಟು ಹಬ್ಬದ ನಿಮಿತ್ಯ ಭಕ್ತಾಧಿಗಳು ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿ ರೋಗಿಗಳ ಯೋಗಕ್ಷೇಮ ವಿಚಾರಿಸಿ ಸರಳ ಜನ್ಮ ದಿನಾಚರಣೆ ಆಚರಿಸಿಕೊಳ್ಳುವುದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಸಹಕಾರಿ ದುರೀಣ ಆರ್.ಆರ್.ಪಾಟೀಲ ಮಾತನಾಡಿ, ಬಸವ ಸರ್ಕಲದ ವ್ಯಾಪಾರಿ ಮಳಿಗೆ ಬಳಗದವರಿಂದ ರೋಗಿಗಳಿಗೆ ಹಣ್ಣು ವಿತರಿಸಿ ಶ್ರೀಗಳ ಹುಟ್ಟು ಹಬ್ಬವನ್ನು ಅತೀ ಸರಳವಾಗಿ ಆಚರಿಸಲಾಗುತ್ತಿದೆ. ಅದರಂತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಬಡ ಮಕ್ಕಳನ್ನು ಗೌರವಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ಸಂಪಾದನ ಮಹಾಸ್ವಾಮಿಗಳು ಮಾತನಾಡಿ, ತಮ್ಮ 48 ನೆಯ ಹುಟ್ಟು ಹಬ್ಬದ ನಿಮಿತ್ಯ ಭಕ್ತಾಧಿಗಳು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸುವುದರಿಂದ ತಮಗೆ ಅತೀವ ಸಂತಸ ಮೂಡಿದೆ. ಇದೇ ರೀತಿ ಮುಂದೆಯು ಸಾಮಾಜಿಕ ಕಾರ್ಯದಲ್ಲಿ ಪ್ರತಿಯೊಬ್ಬರು ತೋಡಗಿಕೊಳ್ಳಬೇಕು ಎಂದರು.
ಜಿಎಸ್‍ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಮಗದುಮ್ಮ, ನ್ಯಾಯವಾದಿ ಎಂ.ಕೆ ಚೌಗಲಾ, ಡಾ. ವಿವೇಕ ಹೊನ್ನಳ್ಳಿ, ಡಾ. ಗಡೇದ, ಡಾ.ಲಕ್ಷ್ಮೀಕಾಂತ ಕಡ್ಲೇಪಗೋಳ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here