ಶ್ರೀಪಾದಂಗಳವರ ಭವ್ಯ ಶೋಭಾ ಯಾತ್ರೆ

0
22
loading...

28ATN1ಅಥಣಿ 29: ಶ್ರೀಮನ್ ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ಹಾಗೂ ಶ್ರೀ ಮದುತ್ತರಾದಿಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಭವ್ಯ ಶೋಭಾ ಯಾತ್ರೆ ಹರಿದಾಸ ಕೀರ್ತನೆ, ಭಜನೆ ಮತ್ತು ಸಕಲ ವಾದ್ಯಗಳೊಂದಿಗೆ ವಿಜ್ರಂಭಣೆಯಿಂದ ಸತ್ತಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗುರುವಾರ ಸಂಜೆ ಜರುಗಿತು.
ಆಕರ್ಷಕ ಝಾಂಚ ಪಥಕ್, ಕರಡಿ ಮಜಲು, ಡೊಳ್ಳು ಕುಣಿತ, ನಾಸಿಕ್ ಡೊಲ್, ಸಂಬಳವಾದ್ಯ, ಬಾಜಾ ಭಜಂತ್ರಿ ಸೇರಿದಂತೆ ಶ್ರೀ ಸುಧಾ ಭಜನಾ ಮಂಡಳ, ಶ್ರೀರಾಮ ಭಜನಾ ಮಂಡಳ, ಶ್ರೀ ವಿಷ್ಣುತೀರ್ಥ ಭಜನಾ ಮಂಡಳ, ಹರಿದಾಸ ಸೇವಾ ಸಂಘದ ಭಜನಾ ಮಂಡಳದಿಂದ ನಿರಂತರ ಶ್ರೀಹರಿಯ ಭಜನೆ, ಹೆಣ್ಣು ಮಕ್ಕಳ ಕೋಲಾಟ ಇವುಗಳ ಮಧ್ಯೆ ಶ್ರೀ ಸತ್ಯಾತ್ಮತೀರ್ಥರನ್ನು ರಾಜ ಮರ್ಯಾದೆಯ ಅಲಂಕೃತ ಐದು ಕುದುರೆಗಳ ತೆರೆದ ವಾಹನದಲ್ಲಿ ಶ್ರೀಗಳನ್ನು ಮತ್ತು ಸರ್ವ ಮೂಲಗೃಂಥಗಳೊಂದಿಗೆ ಅಪಾರ ಪ್ರಮಾಣದಲ್ಲಿ ಸೇರಿದ್ದ ವಿಪ್ರಬಾಂಧವರ ಹಾಗೂ ಭಕ್ತರ ಮಧ್ಯೆ ಶ್ರೀಗಳ ಪುರಪ್ರವೇಶದಿಂದ ಚಾತುರ್ಮಾಸ್ಯ ಸಂಕಲ್ಪ ಪ್ರಾರಂಭಿಸಲಾಯಿತು.
ಶೋಭಾ ಯಾತ್ರೆ ಸಂಚರಿಸುವ ರಸ್ತೆ ಉದ್ದಗಲಕ್ಕೂ ಎರಡೂ ಬದಿ ತಳಿರು, ತೋರಣ, ಅಲಂಕೃತ ಕೇಸರಿ ಬಣ್ಣದ ಧ್ವಜಗಳು, ಶ್ರೀಗಳ ಸ್ವಾಗತ ಕೋರಿದ ಡಿಜಿಟಲ್ ಬ್ಯಾನರ್‍ಗಳು ಮತ್ತು ಸ್ವಾಗತ ಕಮಾನಗಳು, ಮನೆ ಮುಂದೆ ವಿವಿಧ ಬಣ್ಣಗಳಿಂದ ಅಲಂಕೃತಗೊಂಡ ರಂಗೋಲಿ ಶೋಭಾ ಯಾತ್ರೆಯನ್ನು ಮತ್ತಷ್ಟು ವಿಶೇಷಗೊಳಿಸಿತ್ತು. ಶ್ರೀಗಳು ಸಂಚರಿಸುವ ಪ್ರತಿಯೊಂದು ಬೀದಿಯಲ್ಲಿ ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಲಾಯಿತು. ಮಾರುಕಟ್ಟೆಯ ಪ್ರಮುಖ ಬೀದಿಯಲ್ಲಿ ಜಯಘೋಷಣೆಗಳು, ಭಜನಾ ಮಂಡಳದ ಸದಸ್ಯರ ಹಾಡಿಗೆ ತಕ್ಕಂತೆ ಕುಣಿತ ಶೋಭಾ ಯಾತ್ರೆಗೆ ಮತ್ತಷ್ಟು ಮೆರಗು ನೀಡಿದವು.
ಸತ್ತಿ ಗ್ರಾಮಕ್ಕೆ ಆಗಮಿಸುವಂತೆ ಶ್ರೀಗಳು ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ, ತಟದಲ್ಲಿರುವ ಶ್ರೀರಾಮ ಮಂದಿರದ ದರ್ಶನ ಪಡೆದು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಭಾರತೀಯ ವೇಷÀ, ಭೂಷಣಗಳನ್ನು ಉಟ್ಟಿದ್ದ ಸಕಲ ವಿಪ್ರ ಬಾಂಧವರು ಭಾಗವಹಿಸಿದ್ದ ಭವ್ಯ ಶೋಭಾ ಯಾತ್ರೆ ಜಿ.ಎನ್.ಕೆ ಶಾಲಾ ಆವರಣದಿಂದ ಪ್ರಾರಂಭವಾಗಿ, ಶ್ರೀಗಳಿಗಾಗಿ ವಿಶೇಷವಾಗಿ ತಯಾರಿಸಲಾದ ಪೆಂಡಾಲ್‍ಗೆ ಆಗಮಿಸಿ ಸಮಾರೋಪಗೊಂಡಿತು.
ಶ್ರೀಗಳ ಶೋಭಾ ಯಾತ್ರೆಯಲ್ಲಿ ಅಥಣಿ, ಜಮಖಂಡಿ, ವಿಜಯಪೂರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಮುಂಬೈ, ತಮಿಳುನಾಡಿನ ತಿರಕೊಯ್ಲೂರು, ಬಿಹಾರದ ಗಯಾ, ಉತ್ತರಪ್ರದೇಶದ ಅಲಹಾಬಾದ, ಕಾಶಿ ಸೇರಿದಂತೆ ವಿವಿಧ ಪಟ್ಟಣಗಳಿಂದ ಆಗಮಿಸಿದ್ದು ವಿಶೇಷವಾಗಿತು

loading...

LEAVE A REPLY

Please enter your comment!
Please enter your name here