ಸಕ್ಕರೆ ದರ ಹೆಚ್ಚಿದರೂ ಕಬ್ಬಿನ ಬೆಲೆ ಹೆಚ್ಚಳ ಮಾಡದ ಕಾರ್ಖಾನೆಗಳು

0
32
loading...

ಶಿವಾನಂದ ಪದ್ಮಣ್ಣವರ
ಚಿಕ್ಕೋಡಿ : ಕಳೆದೆರಡು ಹಂಗಾಮಿನಿಂದ ಸಂಕಷ್ಟದಲ್ಲಿದ್ದ ಸಕ್ಕರೆ ಉದ್ಯಮ, ದರ ಏರಿಕೆಯಿಂದ ಚೇತರಿಕೆ ಕಂಡರೂ ಕಬ್ಬು ಬೆಳೆ ಬೆಳೆದ ರೈತರಿಗೆ ಹೆಚ್ಚಿನ ದರ ನೀಡದೇ ಸಕ್ಕರೆ ಕಾರಖಾನೆಗಳು ಸರಕಾರ ನಿಗದಿಪಡಿಸಿದ ಎಫ್‍ಅರ್‍ಪಿ ದರವನ್ನೇ ನೀಡಿ ಕೈತೊಳೆದುಕೊಂಡಿವೆ.
ಕೇಂದ್ರ ಸರಕಾರ ಕಾರಖಾನೆಗಳ ಸಕ್ಕರೆ ಇಳುವರಿ ಆಧಾರದ ಮೇಲೆ ನಿಗದಿಪಡಿಸುವ ಫೇರ ಆ್ಯಂಡ ರೇಮುನರೇಟಿವ್ಹ್ ಪ್ರೈಸ್ ನಿಯಮದ ಪ್ರಕಾರ ಕಬ್ಬಿನ ಬೆಲೆಯನ್ನು ನೀಡುತ್ತ ಬರುತ್ತಿವೆ. ಕೆಲವೊಂದು ಸಕ್ಕರೆ ಕಾರಖಾನೆಗಳು ಇಳುವರಿ ಪ್ರಮಾಣ 9 ರಿಂದ 10.50 ಪ್ರತಿಶತದಷ್ಟಿದ್ದರೆ, ಕೆಲವೊಂದು ಸಕ್ಕರೆ ಕಾರಖಾನೆಗಳ ಕಬ್ಬಿನಲ್ಲಿಯ ಸಕ್ಕರೆ ಅಂಶದ ಪ್ರಮಾಣ 11 ರಿಂದ 14 ಪ್ರತಿಶತದಷ್ಟಿದೆ. ಹೆಚ್ಚು ಪ್ರತಿಶತ ಸಕ್ಕರೆ ಅಂಶ ಹೊಂದಿರುವ ಸಕ್ಕರೆ ಕಾರಖಾನೆಗಳು ಹೆಚ್ಚಿನ ದರ ನೀಡಿದರೆ, ಕಡಿಮೆ ಪ್ರತಿಶತ ಹೊಂದಿರುವ ಕಾರಖಾನೆಗಳು ಕಡಿಮೆ ದರ ನೀಡುತ್ತಿವೆ. ಇದು ಕಾರಖಾನೆಗಳ ನಡುವಿನ ದರ ವ್ಯತ್ಯಾಸಕ್ಕೆ ಕಾರಣವಾಗಿದೆ.
ಕರ್ನಾಟಕದ ಬಹುತೇಕ ಸಕ್ಕರೆ ಕಾರಖಾನೆಗಳು ಪ್ರತಿ ಟನ್ ಕಬ್ಬಿಗೆ 1800-2200 ದರ ನೀಡಿ ರೈತರ ಮನಸ್ಸು ಘಾಸಿಗೊಳಿಸಿದ್ದರೆ, ಮಹಾರಾಷ್ಟ್ರದ ಸಕ್ಕರೆ ಕಾರಖಾನೆಗಳು ಕಬ್ಬಿಗೆ 2300-2600 ದರ ನೀಡಿ ರೈತರಿಗೆ ಸಿಹಿ ಉಣಿಸಿವೆ. ಕನಿಷ್ಟ 9 ರಿಂದ 11 ಪ್ರತಿಶತದಷ್ಟು ಇಳುವರಿ ಹೊಂದಿರುವ ಕಾರಖಾನೆಗಳು ಎಫ್‍ಆರ್‍ಪಿ ಅನ್ವಯ 1800 ರಿಂದ ಕ್ರಮವಾಗಿ ಅನ್ವಯವಾಗುವ ದರ ನೀಡಿ ರೈತರ ಆಕ್ರೋಶಗಳಿಗೆ ಕರ್ನಾಟಕದ ಸಕ್ಕರೆ ಕಾರವಾಗಿದ್ದರೆ, ಹೆಚ್ಚಿನ ಇಳುವರಿ ಅಂದರೆ 11 ರಿಂದ 14 ಪ್ರತಿಶತದಷ್ಟು ಸಕ್ಕರೆ ಅಂಶ ಹೊಂದಿರುವ ಸಕ್ಕರೆ ಕಾರಖಾನೆಗಳು ಟನ್ ಕಬ್ಬಿಗೆ 2100 ರಿಂದ 2500 ರವರೆಗೆ ದರ ನೀಡಿವೆ.
ಗಡಿಭಾಗದಲ್ಲಿರುವ ಕರ್ನಾಟಕದ ಕೆಲವೊಂದು ರೈತರು ಮಹಾರಾಷ್ಟ್ರದ ಸಕ್ಕರೆ ಕಾರಖಾನೆಗಳಿಗೆ ಕಬ್ಬು ಕಳುಹಿಸಿ ಲಾಭ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರದ ಕೆಲವೊಂದು ರೈತರು ಕರ್ನಾಟಕದ ಕಾರಖಾನೆಗಳಿಗೆ ಕಬ್ಬು ಕಳುಹಿಸಿ ನಷ್ಟ ಅನುಭವಿಸಿದಂತಾಗಿದೆ. ಮಹಾರಾಷ್ಟ್ರದ ಸಕ್ಕರೆ ಕಾರಖಾನೆಗಳು ಕಬ್ಬು ಕಳುಹಿಸಿದ ರೈತರಿಗೆ 2500 ಕ್ಕಿಂದ ಹೆಚ್ಚಿನ ಬಿಲ್ ನೀಡುವ ಬಗ್ಗೆ ಆಶ್ವಾಸನೆ ನೀಡಿವೆ. ಇದರಿಂದ ರೈತ ವಲಯದಲ್ಲಿ ಕರ್ನಾಟಕದ ಸಕ್ಕರೆ ಕಾರಖಾನೆ ಆಡಳಿತ ಮಂಡಳಿಗಳ ವಿರುದ್ಧ ಒಳಬೇಗುದಿ ಉಂಟಾಗಿದೆ.

2013-14 ಹಾಗೂ 2014-15ರ ಹಂಗಾಮಿನಲ್ಲಿ ಸಕ್ಕರೆ ದರ ಗಣನೀಯ ಇಳಿಕೆಯಾಗಿತ್ತು. ಎಫ್‍ಆರ್‍ಪಿ ದರ ರೈತರಿಗೆ ನೀಡಿದ್ದರಿಂದಾಗಿ ಸಕ್ಕರೆ ಕಾರಖಾನೆಗಳು ನಷ್ಟ ಅನುಭವಿಸುವಂತಾಗಿತ್ತು. ಇದರಿಂದಾಗಿ ಪ್ರಥಮ ಕಂತಿನಲ್ಲಿಯೇ ಹೆಚ್ಚಿನ ಕಬ್ಬಿನ ದರ ನಿಗದಿಪಡಿಸಿ ಬಹುತೇಕ ಸಕ್ಕರೆ ಕಾರಖಾನೆಗಳು ಕೈಸುಟ್ಟುಕೊಂಡಿದ್ದವು. ಆಗ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿ ದೇಶದ ಸಕ್ಕರೆ ಉದ್ಯಮಕ್ಕೆ ಬಹುದೊಡ್ಡ ಹೊಡೆತ ಬಿದ್ದಿತ್ತು. ಇದರಿಂದ ಸಕ್ಕರೆ ದರ 1700 ರಿಂದ 2200 ಸೀಮಿತಗೊಂಡಂತಾಗಿತ್ತು. ಆಗ ಸಕ್ಕರೆ ಉದ್ಯಮವನ್ನು ಪೋಷಿಸುವ ಸಲುವಾಗಿ ಕೇಂದ್ರ ಸರಕಾರ ಸಕ್ಕರೆ ಕಾರಖಾನೆಗಳಿಗೆ ಸಾಫ್ಟ ಲೋನ ನೀಡಿ ಉದ್ಯಮ ಚೇತರಿಕೆಗೆ ಉತ್ತೇಜನ ನೀಡಿತ್ತು.
ಈದೀಗ ಮಾರುಕಟ್ಟೆಯಲ್ಲಿ ಸಕ್ಕರೆ ದರ ಹೆಚ್ಚಳ ಕಂಡಿದೆ. ಅಲ್ಲದೇ ಪ್ರಸಕ್ತ ವರ್ಷ ವಿದೇಶಿ ಮಾರುಕಟ್ಟೆಯಲ್ಲಿ ಸಕ್ಕರೆಗೆ ತುಂಬಾ ಬೇಡಿಕೆ ಕಂಡುಬಂದಿದೆ. ಹೀಗಾಗಿ ಸಕ್ಕರೆ ದರದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಪ್ರಸ್ತುತ ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ದರ ಪ್ರತಿ ಕ್ವಿಂಟಲ್‍ಗೆ 3400-3800 ರಷ್ಟಿದ್ದು, ಅಲ್ಲದೇ ವಿದೇಶಕ್ಕೆ ರಪ್ತಾಗುವ ಸಕ್ಕರೆ ದರ 3800-4200 ಕ್ಕಿಂತ ಹೆಚ್ಚಾಗಿದೆ. ರಪ್ತಾಗುವ ಸಕ್ಕರೆ ದರ ಗುಣಮಟ್ಟದ ಮೇಲೆ ನಿಗದಿಯಾಗುತ್ತದೆ. ಸಕ್ಕರೆ ದರ ನಿಯಂತ್ರಿಸುವ ಸಲುವಾಗಿ ಸರಕಾರ ರಪ್ತಿನ ಮೇಲೆ ಹೆಚ್ಚಿನ ಸುಂಕ ಆಕರಣೆ ಮಾಡುತ್ತಿದೆ. ಈ ಮೂಲಕ ಸಕ್ಕರೆ ದರ ಮೇಲೆ ನಿಯಂತ್ರಣ ಹೇರಲು ಮುಂದಾಗಿದ್ದು, ಸಕ್ಕರೆ ದರದಲ್ಲಿ ಇನ್ನೂ ಏರಿಕೆ ಕಾಣಬಹುದೆಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಡಿಭಾಗದಲ್ಲಿ ಕಬ್ಬು ಬೆಳೆಯುವ ರೈತರು ಕರ್ನಾಟಕ ಹಾಗೂ ಮಹಾರಾಷ್ಟ್ರ ಉಭಯ ರಾಜ್ಯಗಳ ಕಾರಖಾನೆಗಳಿಗೆ ಕಬ್ಬು ಪೂರೈಕೆ ಮಾಡುತ್ತಾರೆ. ಕಳೆದ ಹಲವು ವರ್ಷಗಳ ಕಬ್ಬಿನ ದರವನ್ನು ಹೋಲಿಕೆ ಮಾಡಿದರೆ ಮಹಾರಾಷ್ಟ್ರದ ಕಾರಖಾನೆಗಳು ದರ ನೀಡುವಲ್ಲಿ ಮುಂಚೂಣಿಯಲ್ಲಿವೆ. ಕರ್ನಾಟಕದ ಕಾರಖಾನೆಗಳು ಕಡಿಮೆ ದರ ನೀಡಿದ ಪಟ್ಟಿಯಲ್ಲಿ ಸೇರಿಕೊಂಡಿವೆ.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕಬ್ಬು ಕಳುಹಿಸಿದ ರೈತರು ಸಿಹಿ ಸಂಭ್ರಮದಲ್ಲಿದ್ದರೆ, ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕದ ಸಕ್ಕರೆ ಕಾರಖಾನೆಗಳಿಗೆ ಕಬ್ಬು ಕಳುಹಿಸಿದ ರೈತರು ಕಹಿಯ ಅನುಭವಾಗಿದೆ. ಇದರಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಾರಖಾನೆಗಳ ನಡುವೆ ನಡೆಯುತ್ತಿರುವ ದರ ವ್ಯತ್ಯಾಸದಿಂದಾಗಿ ಮಹಾರಾಷ್ಟ್ರದ ಸಕ್ಕರೆ ಕಾರಖಾನೆಗಳಿಗೆ ಕಬ್ಬು ನೀಡಲು ಕರ್ನಾಟಕದ ರೈತರು ಹೆಚ್ಚಿನ ಉತ್ಸುಕತೆ ತೋರುತ್ತಿದ್ದಾರೆ.
ಕಬ್ಬಿನ ದರದ ಸಲುವಾಗಿ ಸರಕಾರ ನಿಗದಿಪಡಿಸಿರುವ ಎಫ್‍ಆರ್‍ಪಿ ನಿಯಮ ನೋಡಿ ಕಬ್ಬಿನ ದರ ಕೊಟ್ಟರೆ, ಕರ್ನಾಟಕದ ಸಕ್ಕರೆ ಕಾರಖಾನೆಗಳು 2016-17ರ ಹಂಗಾಮಿನಲ್ಲಿ ಕಬ್ಬಿನ ಕೊರತೆ ಎದುರಿಸುವ ಸಾಧ್ಯತೆಗಳಿವೆ. ಕರ್ನಾಟಕದ ಸಕ್ಕರೆ ಕಾರಖಾನೆಗಳು ಈ ಸವಾಲನ್ನು ಯಾವ ರೀತಿ ಎದುರಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ.

loading...

LEAVE A REPLY

Please enter your comment!
Please enter your name here