ಸದೃಡ ಶರೀರ ಪಡೆಯಲು ಕ್ರೀಡೆ ಸಹಕಾರಿ: ಡಿ.ಎಸ್ ಡಿಗ್ರಜ್

0
21
loading...

ಹಾರೂಗೇರಿ 29: ಕ್ರೀಡಾಕೂಟಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳುವ ಮೂಲಕ ರಾಷ್ಟ್ರಮಟ್ಟದ ಆಟಗಾರರಾಗಿ ಹೊರಹೊಮ್ಮಬೇಕೆಂದು ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎಸ್ ಡಿಗ್ರಜ್ ಅಭಿಮತ ವ್ಯಕ್ತಪಡಿಸಿದರು.
ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದ ವಸಂತರಾವ ಪಾಟೀಲ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ. ಸನ್ 2016-17ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಬರಮಾಡಿಕೊಳ್ಳುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡಾಕೂಟಗಳು ಯಶಸ್ವಿಯಾಗಬೇಕಾದರೆ ನಿರ್ಣಾಯಕರ ಪಾತ್ರ ತುಂಬಾ ಮುಖ್ಯ, ಆರ್.ಎಮ್ ಪಾಟೀಲ ಮಾತನಾಡಿ ಕ್ರೀಡಾಳುಗಳು ಕ್ರೀಡಾ ನಿಯಮಗಳಿಗೆ ಮನ್ನಣೆ ನೀಡುವುದೇ ಲಕ್ಷಣ, ಶರೀರ ಸಂಪತ್ತು ಹೆಚ್ಚಿಸಿ ಸ್ನೇಹದ ಬಾಂಧವ್ಯ ಬೆಸೆಯುವುದೇ ಕ್ರೀಡೆಯಾಗಿದೆ, ಕ್ರೀಡೆ ಪ್ರತಿಯೊಬ್ಬರಲ್ಲಿ ಉಲ್ಲಾಸ, ಉತ್ಸಾಸವನ್ನು ಹೆಚ್ಚಿಸುವ ಮೂಲಕ ಮಾನವನ ಬದುಕಿನ ಸಂಜೀವಿನಿಯಾಗಿದೆ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ್ಯ ರಾಮಚಂದ್ರ ಬೆಳಗಲಿ ಕ್ರೀಡಾ ದ್ವಜಾರೋಹಣ ನೇರವೇರಿಸಿದರು.
ಈ ಸಂದರ್ಭಧಲ್ಲಿ ಸಾಕ್ಷರ ಭಾರತ ತಾಲೂಕಾ ಸಂಯೋಜಕ ಕೆ.ಆರ್ ಶಿಂಗೆ, ಸಿಆರ್‍ಪಿಗಳಾದ ಶ್ರೀಧರ ಗುಡಿ, ಎಸ್.ಬಿ ಹನಸಿ, ಪ್ರಭು ಕಂದಾರೆ, ಜಿ.ಎಸ್ ಹುಬ್ಬಳ್ಳಿ, ಪಿ,ಬಿ ಪೂಜಾರಿ, ಪಿ.ವೈ ಮಾದರ, ಎಸ್,ಬಿ ಕ್ಯಾಸ್ತಿ, ರಾಮಚಂದ್ರ ಭಜಂತ್ರಿ, ಜೋತೆಪ್ಪಾ ಹಿಪ್ಪರಗಿ, ಬಿ,ಎಸ್ ಬಾಳಪ್ಪಗೋಳ, ಭಾರತಿ ಹಳೆಪ್ಪಗೋಳ, ಭೀಮರಾವ ಘಂಟಿ, ಉಮಾ ಪೋಲಿಸ, ಪ್ರಾಚಾರ್ಯ ಬಿ.ಎಸ್ ಹೊಸಟ್ಟಿ, ಪ್ರವೀಜ ಇನಾಮದಾರ, ರಾಮಚಂದ್ರ ದಾಸರ, ರಾಜು ತೇರದಾಳ, ಎಮ್,ಎಸ್ ಶಿಂಗೆ, ಡಿ.ಎಸ್ ಬಸರಗಿ, ಕೆ.ಎಸ್ ಹುಣಸಿಕಟ್ಟಿ, ಶ್ರೀಕಾಂತ ರಾಯಮಾನೆ, ಸುರೇಶ ಚೌಗಲೆ, ರಮೇಶ ಹಳೆಪ್ಪಗೋಳ, ಪಿ.ಎಸ್ ಕೊರಡ್ಡಿ, ಎಮ್,ಪಿ ಮುಲ್ಲಾ, ವೈ.ಬಿ ಸಣ್ಣಕ್ಕಿನವರ, ಗೀರೀಶ ಗಲಗಲಿ, ಎಮ್,ವ್ಹಿ ಆಂಟೀನ್, ಎಸ್,ಸಿ ಠಕ್ಕಣ್ಣವರ, ಎಮ್,ಡಿ ನಾಯಿಕ, ಎಸ್.ಬಿ ಕ್ಯಾಸ್ತಿ, ಬಿ.ಎಲ್ ಘಂಟಿ, ವರ್ಣಾ ದಳವಾಯಿ, ಶ್ರೀಕಾಂತ ರಾಯಮಾನೆ, ಸುಸಿಆರ್‍ಪಿ ಎಸ್,ಎಸ್ ಪೋಲಿಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here