ಸಮಾಜ ಕಟ್ಟುವ ಕಾರ್ಯ ಯುವಕರ ಮಾಡಬೇಕು: ಶಾಸಕ ಸತೀಶ

0
27
loading...

ಗೋಕಾಕ 23: ದೇಶದಲ್ಲಿ ಜಾತಿ, ಧರ್ಮ, ಭಾಷೆ ಮತ್ತು ದೇವರ ಹೆಸರಿನಲ್ಲಿ 6500 ಜಾತಿಗಳನ್ನು ಒಡೆದು ಆಳುವ ನೀತಿ ಇಂದಿಗೂ ಜಾರಿಯಲ್ಲಿದ್ದು, ಈ ಎಲ್ಲ ಜಾತಿಗಳನ್ನು ಒಗ್ಗೂಡಿಸಿ ದೇಶ ಮತ್ತು ಸಮಾಜ ಕಟ್ಟುವ ಮಹತ್ತರ ಜವಾಬ್ದಾರಿ ನಮ್ಮ ಯುವಕರ ಮೇಲೆ ಇದ್ದು, ಯುವಕರು ಮಹಾನ್ ಪುರುಷರ ವಿಚಾರ, ಚಿಂತನೆ ಮತ್ತು ಇತಿಹಾಸವನ್ನು ಅರಿತು ಈ ದಿಸೆಯಲ್ಲಿ ಮುಂದೆ ಬರಬೇಕು ಎಂದು ಮಾಜಿ ಸಚಿವ ಹಾಗೂ ಯಮಕನಮರ್ಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರಸಭೆ ಸಮುದಾಯ ಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ ಯುವ ದಲಿತ ಸಮಿತಿ ಉದ್ಘಾಟನೆ ಹಾಗೂ ಕಾರ್ಯಕರ್ತರ ಅಧ್ಯಯನ ಶಿಬಿರ ಮತ್ತು ಸಂಸ್ಕøತಿಕ ಕಾರ್ಯಕ್ರಮದ ಮಾತನಾಡಿದ್ದರು.
ನಾವು ದೇಶದ ಇತಿಹಾಸ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇತಿಹಾಸ ರಚಿಸಲು ಸಾಧ್ಯವಿಲ್ಲ. ಹಾಗಾಗಿ ಈ ದೇಶದ ಜೀವನಾಡಿಯಾಗಿರುವ ಯುವಕರು ಇತಿಹಾಸವನ್ನು ಅರ್ಥ ಮಾಡಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಕುತಂತ್ರವಾದಿಗಳಿಂದ ಹಂಚಿ ಹರಿದು ಹೋಗಿರುವ ಜಾತಿಗಳನ್ನು ಒಂದುಗೂಡಿಸಿ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಯುವಕರು ಕಂಕಣಬದ್ಧರಾಗಬೇಕೆಂದು ಶಾಸಕರು ಹೇಳಿದರು.
ಅಂದು ಅಂಬೇಡ್ಕರ ಅವರು ಸಂವಿಧಾನ ಬರೆಯದಿದ್ದರೆ, ಇಂದು ದಲಿತರು, ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರು ಗುಲಾಮರಾಗಿಯೇ ಬದುಕಬೇಕಾಗುತ್ತಿತ್ತು. ಆದರೆ ಅಂಬೇಡ್ಕರ ಅವರು ಸಂವಿಧಾನವನ್ನು ರಚಿಸಿ ದೇಶದ ಏಕತೆಗಾಗಿ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅವರ ಕನಸು ನನಸಾಗಬೇಕಾದರೆ, ನಾವೆಲ್ಲ ಒಂದಾಗಿ ಬಾಳಿದರೆ ಮಾತ್ರ ಇದು ಸಾಧ್ಯ ಎಂದು ಹೇಳಿದರು.
ಬಲಿಷ್ಠ ಭಾರತ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಕಳೆದ ಮೂರು ವರ್ಷಗಳಿಂದ ಬುಧ್ಧ, ಬಸವ, ಅಂಬೇಡ್ಕರ ಅವರ ತತ್ವ ಸಿದ್ಧಾಂತ ಮತ್ತು ಚಿಂತನೆಗಳನ್ನು ಗಮನದಲ್ಲಿಟ್ಟುಕೊಂಡು ಮಾನವ ಬಂಧುತ್ವ ವೇದಿಕೆಯನ್ನು ನಿರ್ಮಿಸಿ ಮೂಡ ನಂಬಿಕೆಯ ವಿರುದ್ಧ ಇಡೀ ರಾಜ್ಯಾದ್ಯಂತ ಆಂದೋಲನ ಆರಂಭಿಸಿದ್ದೇವೆ. ಯುವಕರು ಈ ನಮ್ಮ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶೋಷಿತರಿಗೆ ನ್ಯಾಯ ಒದಗಿಸಲು ಸಹಕರಿಸಬೇಕು ಎಂದು ಶಾಸಕರ ಸತೀಶ ಜಾರಕಿಹೊಳಿ ಅವರು ಮನವಿ ಮಾಡಿದರು.
ಅಗಷ್ಟ 7 ರಂದು ಆಚರಿಸಲಾಗುವ ನಾಗರ ಪಂಚಮಿ ದಿನದಂದು ಬೆಳಗಾವಿಯಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಸಂಚಾರಿ ಬಸವದಳದ ನೇತೃತ್ವದಲ್ಲಿ ನಾಗರ ಹಾವಿಗೆ ಹಾಲು ಉಣಿಸದೇ ಅಂಗವಿಕಲರಿಗೆ, ರೋಗಿಗಳಿಗೆ ಮತ್ತು ಹಾಸ್ಟೆಲ್‍ಗಳಲ್ಲಿರುವ ಬಡ ವಿದ್ಯಾರ್ಥಿಳಿಗೆ ಹಾಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮವನ್ನು ಇಡೀ ರಾಜ್ಯದಲ್ಲಿಯೂ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಸಾಹುಕಾರ ಕಾಂಬ್ಳೆ ಅವರು ಮತನಾಡಿ, ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆ, ದಬ್ಬಾಳಿಕೆ ಮತ್ತು ಅನ್ಯಾಯವನ್ನು ತಡೆಗಟ್ಟಬೇಕಾದರೆ ಮೂಲ ಭಾರತ ವಾಸಿಗಳಾದ ನಾವು ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರು ಒಂದುಗೂಡಬೇಕಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವಿ ನಾಯ್ಕರ ಅವರು ಮಾತನಾಡಿದ್ದರು.
ಕೆಪಿಸಿಸಿ ಸಂಚಾಲಕ ರಾಜ್ಯ ಎಸ್.ಸಿ. ಘಟಕದ ಅನ್ನಾಸಾಬ ಹಂಚಿನಮನಿ, ದೀಪಕ ಕಾಂಬಳೆ, ಡಾ. ಬಿ.ಆರ್.ಅಂಬೇಡ್ಕರ ಯುವ ದಲಿತ ಸಮಿತಿಯ ಜಿಲ್ಲಾಧ್ಯಕ್ಷ ಸಿದ್ದು ಕಲಮಡ್ಡಿ, ದೀಪಕ ಇಂಗಳಗಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here