ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ

0
23
loading...

ಶಾಲಾ ಅಭಿವೃದ್ಧಿ ಸಮೀತಿ: ಬಸವರಾಜ ತ್ರಿಕಾಣಿ ಅಧ್ಯಕ್ಷ
ಮೋಳೆ 24: ಇತ್ತೀಚಿನ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಸಂಸ್ಥೆಗಳಂತೆ ಕಾರ್ಯನಿರ್ವಹಿಸಿ ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತೇವೆ ಎಂದು ಅಧ್ಯಕ್ಷ ಬಸವರಾಜ ತ್ರಿಕಾಣಿ ಹೇಳಿದರು.
ಅಥಣಿ ತಾಲೂಕಿನ ಕೃಷ್ಣಾ-ಕಿತ್ತೂರ ಗ್ರಾಮದ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿಗಳ ರಚನೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿ, ಸಿದ್ದೇಸ್ವರ ಸ್ವಾಮಿಜಿಯವರು ತಪೋ ಭೂಮಿ ಕೃಷ್ಣಾ-ಕಿತ್ತೂರ ಆಗಿದ್ದು, ಈ ಗ್ರಾಮವಾಗಿದ್ದು ಇಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಅವರಲ್ಲಿ ರಾಷ್ಟ್ರಾಭಿಮಾನ, ಸಂಸ್ಕಾರ, ಪರಂಪರೆ ಆದರ್ಶಗಳನ್ನು ನೀಡುವ ಮಾದರಿ ಶಾಲೆ ಇದಾಗಿದೆ ಎಂದರು.
ನಾನು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆ ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರದಿಂದ ಹಾಗೂ ಜನಪ್ರತಿನಿದಿಗಳಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮಲಗೌಡ ಪೊಲೀಸಪಾಟೀಲ ಇವರ ನೇತೃತ್ವದಲ್ಲಿ ಗ್ರಾ.ಪಂ ಅಧ್ಯಕ್ಷೆ ಅಕ್ಕಾತಾಯಿ ಪಾಟೀಲ, ಸದಸ್ಯರಾದ ರವಿಕುಮಾರ ಪಾಟೀಲ, ಮಹೇಶ ನಾಯಿಕ, ರೇಖಾ ಪಾಟೀಲ, ಶೋಭಾ ಕಾಂಬಳೆ, ಮುನೀರ ಅಲಾಸೆ, ಈರ್ಶಾದ ಅಲಾಸೆ, ದತ್ತಾ ಪೂಜಾರಿ, ಯಮನಪ್ಪ ಪಾಟೀಲ, ಮುತ್ತಣ್ಣ ಬಸರಗಿ, ಶ್ರೀಶೈಲ ಸತ್ತಿಕರ, ಈರಪ್ಪ ತ್ರಿಕಾಣಿ, ಮುನೀರ ಮುಜಾವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬಿ.ಆರ್ ಸಿದ್ದಲಿಂಗೆ ಪರಿಚಯಿಸಿದರು, ಬಿ.ಎಸ್.ಧೂಪದಾಳ, ಸ್ವಾಗತಿಸಿದರು, ಎಸ್,ಎ,ಭಾಗ್ವತ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು,
****ಬಾಕ್ಸ****
ಶಾಲಾ ಅಭಿವೃದ್ಧಿ ಸಮೀತಿ ಆಯ್ಕೆ:- ಅಧ್ಯಕ್ಷರಾಗಿ ಬಸವರಾಜ ತ್ರಿಕಾಣಿ, ಉಪಾದ್ಯಕ್ಷರಾಗಿ ಅಣ್ಣಾಸಾಬ ಹುಲಗಬಾಳಿ, ಸಮೀತಿಯ ಸದಸ್ಯರು- ಜಗದೀಶ ಮುಧೋಳ, ಶಿವಲಿಂಗ ಪಾಟೀಲ, ಲಕ್ಷ್ಮಣ ಇಚಲಕರಂಜಿ, ಮಹೇಶ ಜಂಬಗಿ, ಕಾಂತು ಕಾಂಬಳೆ, ಮೀರಾಸಾಬ ಅವಟಿ, ರೂಪಾ ಪಾಠೀಲ, ಗೌರವ್ವ ಸುತಾರ, ಸವೀತಾ ಮಾಂಗ, ಗಂಗಾ ಕಾಕಣಕಿಶೋಭಾ ಒಂಟಿ, ಸುವರ್ಣ ಅರ್ಜುನವಾಡ, ಶೋಭಾ ಕಮತೆ, ಸುಜಾತಾ ಟಿಂಗಾಣಿ, ಜಯಶ್ರೀ ಕುಲ್ಲೋಳಿ, ರವಿಕುಮಾರ ಪಾಟೀಲ, ಶ್ರೀದೇವಿ ಪಾಟೀಲ, ಮಹಾದೇವಿ ಅಂಬಿ ಆಯ್ಕೆಗೊಂಡರು.

loading...

LEAVE A REPLY

Please enter your comment!
Please enter your name here