ಸೋರುತಿಹೂದು ಶಾಲೆಯ ಮೇಲ್ಚಾವಣಿ,

0
22
loading...

ಕಾಳಜಿ ಇಲ್ಲದ ಶಿಕ್ಷಣ ಇಲಾಖೆ: ಮಕ್ಕಳ ಕಲಿಕೆ ಅದೋಗತಿ
*ಶಿವಾಜಿ ಮೇತ್ರಿ
ಪಾಲಭಾವಿ 24: ಶಾಲಾ ಕೊಠಡಿಗಳು ಮಳೆಗಾಲದಲ್ಲಿ ಮೇಲ್ಚಾವಣಿ ಸೊರುವದರಿಂದ ಶಾಲಾ ಮಕ್ಕಳು ಒಡೆದು ಹೊಗಿರುವ ಇನ್ನೊಂದು ಕೊಟಡಿಯಲ್ಲಿ ಕೈಯಲ್ಲಿ ಜೀವ ಹಿಡಿದು ಓದುವ ಕರ್ಮ ಶಾಲಾ ಮಕ್ಕಳದಾಗಿದೆ.
ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವಸ್ಥೆಯನ್ನು ಕೇಳುವವರಿಲ್ಲದೆ, ತಬ್ಬಲಿಯಾಗಿದೆ, ಸನ್.2006-07 ಹಾಗೂ ಸನ್.2010-11 ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಈ ಶಾಲಾ ಕೊಠಡಿಗಳನ್ನು ಗುತ್ತಿಗೇದಾರ ಕಿಶೋರ ಗಾಯಕವಾಡ ಎಂಬವರು ಗುತ್ತಿಗೆ ಪಡೆದು ತರಾತುರಿಯಲ್ಲಿ ಕಾಮಗಾರಿ ಮುಗಸಿ ಕೈತೊಳದರೆ ವಿನಃ ಉತ್ತಮವಾದ ಕಟ್ಟಡ ಕಟ್ಟಲಿಲ್ಲ ಎಂಬುವದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಳೆಗಾಲ ಬಂದರೆ ಕೊಠಡಿಯಲ್ಲಿ ನೀರು ತುಂಬುತ್ತವೆ, ಶಿಕ್ಷಣ ಕಲಿಕೆಗಾಗಿ ನಿತ್ಯ ಮಕ್ಕಳು ನರಕಯಾತನೆ ಅನಿಭವಿಸಬೇಕಾಗುತ್ತದೆ. ಕಳೆದ 3-4 ವರ್ಷಗಳಿಂದ ಮಳೆ ಬಂದರೆ ಸಾಕು ಈ ಎರಡು ಕೊಠಡಿಗಳು ಮೇಲ್ಚಾವಣಿ ಸೋರುತ್ತವೆ, ಅದರಿಂದ 1988 ರಲ್ಲಿ ಒಬಿಬಿ ಯೋಜನೆ ಅಡಿಯಲ್ಲಿ ನಿರ್ಮೀಸಿರುವ ಪಾಳುಬಿದ್ದ ಕೋಣೆಯಲ್ಲಿ ವಿದ್ಯಾರ್ಥಿಗಳ ಕಲಿಕೆ ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ 287 ವಿದ್ಯಾರ್ಥಿಗಳ ಸಂಖ್ಯೆ ಇದ್ದು, ಸದ್ಯ 2-3 ಕೊಟಡಿಗಳು ಅವಶ್ಯವಿದೆಂದು ಪ್ರಧಾನಗುರು ಪಿ.ಎಮ್ ದಿವಾಕರ ಸುದ್ದಿಗಾರರಿಗೆ ತಿಳಿಸಿದರು.
ಕಳೆದ 3-4 ವರ್ಷಗಳಿಂದ ಸಂಬಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಮ್ಮ ಶಾಲೆಗೆ ಹೆಚ್ಚುವರಿಯಾಗಿ 2 ಹೊಸಕಟ್ಟಡಗಳುನ್ನು ಮಂಜೂರ ಮಾಡಿರಿ ಹಾಗೂ ಇಗಲೋ ಆಗಲೋ ಬೀಳುವಂತಿರುವ ಸನ್ 1988ರಲ್ಲಿ ಒಬಿಬಿ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಕೊಠಡಿಯನ್ನು ತೆರವುಗೊಳಿಸಿ, ಹುಕ್ಕೇರಿ ತಾಲೂಕಿನ ಯಮಕರನಮರಡಿ ಶಾಲೆಯಲ್ಲಿ ಆದ ದುರ್ಘಟನೆ ನಮಗೆಲ್ಲ ತಲ್ಲಣ ಮೂಡಿಸಿದೆಂದು ಪಿ.ಎಮ್ ದಿವಾಕರ ತಮ್ಮ ಅಳಲು ತೊಡಿಕೊಂಡರು.
ಸುದ್ದಿಗಾರರು ಕಪ್ಪಲಗುದ್ದಿ ಶಾಲೆಯ ಮಾಹಿತಿ ಪಡೆಯಲು ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಡಿಡಿಪಿಐ ಹಾಗೂ ಬಿಇಓ ಅವರಿಗೆ ದೂರವಾಣಿ ಕರೆ ಮಾಡಿದಾಗ, ಕರೆ ಸ್ವೀಕರಿಸಿದೆ ಇರುವದೂ!! ಇಲಾಖೆಯ ಅಧಿಕಾರಿಗಳ ಕರ್ತವ್ಯ ಪ್ರಜ್ಷ ಹೇಗಿದೆಂದು ತಿಳಿದು ಬಂದಿದೆ.
*********
ನಮ್ಮ ಶಾಲೆಯಲ್ಲಿ 1ರಿಂದ 8ನೇ ತರಗತಿಯಲ್ಲಿ 287 ಶಾಲಾ ಮಕ್ಕಳು ಕಲಿಯುತ್ತಿದ್ದು ಮಳೆಯಲ್ಲಿ ಸೋರುವ ಹಾಗೂ ಪಾಳು ಬಿದ್ದ ಶಾಲಾ ಕೊಠಡಿಯಲ್ಲಿ ಮಕ್ಕಳು ಓಸಬೇಕಿದೆ, ನಮ್ಮ ಶಾಲೆಯ ಮುಖ್ಯ ಗುರುಗಳು ಹಲವು ಬಾರಿ ಮನವಿ ಮಾಡಿ ಹಳೆಯ ಕಟ್ಟಡವನ್ನು ತೆವುಗೊಳಿಸಿ ಇನ್ನೆರಡೂ ಕೊಠಡಿಗಳನ್ನು ಮಂಜೂರ ಮಾಡಿರೆಂದು ಕೇಳಿಕ್ಕೊಂಡರು ಪ್ರಯೊಜನವಾಗಿಲ್ಲ ನಮ್ಮ ಶಾಲೆಯಲ್ಲಿ ಮುಂದೆ ಅವಘಡ ಸಂಭವಿದರೆ ಅದಕ್ಕೆ ಶಿಕ್ಷಣ ಇಲಾಖೆಅಧಿಕಾರಿಗಳೆ ಹೋಣೆಗಾರರು.
ಭರಮಪ್ಪ ಉದ್ದಪ್ಪಗೋಳ
ಎಸ್‍ಡಿಎಮ್‍ಸಿ ಅಧ್ಯಕ್ಷರು ಕಪ್ಪಲಗುದ್ದಿ

loading...

LEAVE A REPLY

Please enter your comment!
Please enter your name here