ಸ್ಮಶಾನ ಭೂಮಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

0
19
loading...

ಬೆಳಗಾವಿ:2 ತಾಲೂಕಿನ ಕಾಂಗ್ರಾಳಿ ಕೆ.ಎಚ್. ಗ್ರಾಮಕ್ಕೆ ಗೋಮಾಳ ಮತು ಸ್ಮಶಾನ ಭೂಮಿ ನೀಡುವಂತೆ ಆಗ್ರಹಿಸಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ನೇತೃತ್ವದಲ್ಲಿ ಶನಿವಾರ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಂಗ್ರಾಳಿ ಕೆ.ಎಚ್.ಗ್ರಾಮದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಈ ಗ್ರಾಮ 350 ಎಕರೆ ಗೋಮಾಳವನ್ನು ಹೊಂದಿತ್ತು. ಇದರಲ್ಲಿ ಸರ್ಕಾರ 320 ಸದ್ಯ ಎಕರೆ ಜಮೀನನ್ನು ಕೃಷಿ ಉತ್ಪನ್ನ ಮಾರುಕಟ್ಟೆ, ಎಪಿಎಂಸಿ ಪೊಲೀಸ್ ಠಾಣೆ, ಕೆಎಸ್‍ಆರ್‍ಪಿ ಕೇಂದ್ರ, ಸಂಗಮೇಶ್ವರ, ಅಂಬೇಡ್ಕರ, ಹನುಮಾನ, ಸಹ್ಯಾದ್ರಿ ನಗರ, ಕುಮಾರಸ್ವಾಮಿ, ಲೇಔಟ್ ಟೀಚರ್ಸ್ ಮತ್ತು ಇಂದಿರಾ ಕಾಲಿನಿ ವಿವಿಧ ಬಡವಾಣೆಗಳನ್ನು ಮಾಡಿದ್ದರಿಂದ ಕಂಗ್ರಾಳಿ ಗ್ರಾಮದ ಜಾನುವಾರುಗಳಿಗೆ ಮೇಯಿಸಲು ಗೋಮಾಳ ಇಲ್ಲ ಮತ್ತು ಮರಾಠಾ, ಲಿಂಗಾಯತ ಮತ್ತು ಹಿಂದುಳಿದ ಜನರಿಗಾಗಿ ಸ್ಮಶಾನ ಭೂಮಿಯನ್ನು ಖಾಲಿ ಇರುವ ಎಪಿಎಂಸಿ ಪಕ್ಕದಲ್ಲಿರುವ 10 ಎಕರೆ ಭೂಮಿಯನ್ನು ಮಂಜೂರು ಮಾಡಿಕೋಡುವಂತೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಂಗ್ರಾಳಿ ಕೆ.ಎಚ್. ಗ್ರಾಮದ ಗ್ರಾಮಸ್ಥರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here