ಹಂಡಿಬಾಗ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ ರಾಜ್ಯ ಪ್ಯಾಪಿ ಉಗ್ರಕೋರಾಟ

0
18
loading...

ಪಾಲಭಾವಿ 23: ಸರಕಾರ ಡಿವೈಎಎಸ್ಪಿ ಕಲ್ಲಪ್ಪ ಹಂಡಿಬಾಗ ಕುಟುಂಬಕ್ಕೆ ಮಾನ್ಯ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಯವರು 50 ಲಕ್ಷರೂ ಪರಿಹಾರ ನೀಡಬೇಕು, ಕಲ್ಲಪ್ಪನವರ ಪತ್ನಿಗೆ ಹಾಗೂ ಸಹೋದರನಿಗೆ ಸರಕಾರಿ ಕೆಲಸ ನೀಡಬೇಂದು ಸಂಗೋಳ್ಳಿ ರಾಯಣ್ಣ ಪ್ರಾಧಿಕಾರ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ ಅರವಿಂದ ದಳವಾಯಿ ಹೇಳಿದರು.
ಹಂದಿಗುಂದ ಗ್ರಾಮದ ಮೃತ.ಕಲ್ಲಪ್ಪ ಹಂಡಿಬಗ ಕುಟುಂಬಕ್ಕೆ ನೇಟ್ಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಡಿವೈಎಎಸ್ಪಿ ಕಲ್ಲಪ್ಪ ಹಂಡಿಬಾಗ ಕುಟುಂಬಕ್ಕೆ ಪರಿಹಾರ ಸಿಗುವದಿಲ್ಲವೊ ಅಲ್ಲಿಯವರೆಗೆ ನಮ್ಮ ಪ್ರಾಧಿಕಾರ ಹೋರಾಟ ಸಮಿತಿಯಿಂದ ಸರಕಾರದ ವಿರುಧ ರಾಜ್ಯ ವ್ಯಾಪಿ ಉಗ್ರವಾದ ಹೋರಾಟ ಮಾಡಲಾವುದೆಂದು ಸುದ್ದುಗಾರರಿಗೆ ತಿಳಿಸಿದರು.
ಚಿಕ್ಕಮಂಗಳೂರ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ ಅವರ ಆತ್ಮಹತ್ಯೆಯು ದುಃಖದ ವಿಷಯ, ಅವರ ಮನೆ ನೋಡಿದ ಮೇಲೆ ನಮಗೆ ಆಘಾತವಾಯಿತು, ಸರಕಾರಿ ಉನ್ನತ ಹುದ್ದೆಯಲ್ಲರುವ ಡಿವೈಎಸಿ ಕಲ್ಲಪ್ಪ ಹಂಡಿಬಾಗ ಕುಟುಂಬಗ ಇನ್ನೂ ಆಶ್ರಯ ಮನೆಯಲ್ಲಿರುವ ಸ್ಥಿತಿ ನೋಡಿದರೆ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ ಪ್ರಾಮಾನೀಕತೆ ಹಿಡಿದ ಕನ್ನಡಿ, ಇಂಥಹ ಮನೆಯ ಆಧಾರ ಸ್ಥಭವಾಗಿದ್ದ ಕಲ್ಲಪ್ಪ ಹಂಡಿಬಾಗ ಅವರು ಅಕಾಲಿಕ ಸಾವಿನಿಂದ ಕುಟುಂಬಸ್ಥರು ತಬ್ಬಿಬ್ಬಗಿದ್ದಾರೆ, ಆ ದೇವರು ಅವರಿಗೆ ದೂಃಖವನ್ನು ತಡೆಯುವ ಶಕ್ತಿ ನೀಡಲಿ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಸಂಗೋಳ್ಳಿ ರಾಯಣ್ಣ ಪ್ರಾಧಿಕಾರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮುತ್ತಪ್ಪ ಡಾಂಗೆ, ರೈತ ಸಂಘದ ಮುಖಂಡ ತ್ಯಾಗರಾಜ್ ಕದಮ್, ತಂದೆ.ಬಸಪ್ಪ ಹಂಡಿಬಾಗ, ತಾಯಿ.ಬಸವ್ವ ಹಂಡಿಬಾಗ, ಸಹೋದರ ನಾಗೇಶ ಹಂಡಿಬಾಗ, ಬಸವರಾಜ ಮುತ್ನಾಳ, ಸಮಿತಿ ತಾಲೂಕ ಅಧ್ಯಕ್ಷ ವಿಠ್ಠಲ ಅರಭಾವಿ, ಬಾಳಪ್ಪ ತೇರದಾಳ, ಗುರಲಿಂಗ ಕರಿಗಾರ ಮುಂತಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here