ಹಣಕಾಸು ಸುಧಾರಣಾ ನೀತಿ ವಿರೋಧಿಸಿ ಪ್ರತಿಭಟನೆ

0
21
loading...

4ಬೆಳಗಾವಿ 29: ಕೇಂದ್ರ ಸರಕಾರದ ಹಣಕಾಸು ಸುಧಾರಣಾ ನೀತಿ ವಿರೋಧಿಸಿ ನಗರದಲ್ಲಿರುವ ಸರಕಾರಿ ಒಡೆತನದ ಬ್ಯಾಂಕ್‍ಗಳ ನೌಕರರು ಶುಕ್ರವಾರ ಶುಕ್ರವಾರ ಬ್ಯಾಂಕ್ ಬಂದಮಾಡಿ ಪ್ರತಿಭಟನೆ ನಡೆಸಿದರು.
ಭಾರತಾದ್ಯಂತ ಕರೆ ನೀಡಿದ ಒಂದು ದಿನದ ಮುಷ್ಕರಕ್ಕೆ ನಗರದಲ್ಲಿರುವ ಎಲ್ಲ ಬ್ಯಾಂಕ್‍ಗಳ ನೌಕರರು ಪ್ರತಿಭನಟನೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಆಕ್ರೋಶ ಹೊರಗೆಡವಿದರು. ಚನ್ನಮ್ಮ ವೃತ್ತದ ಬಳಿಯಿಂದ ಗೋವಾವೇಸ್‍ವರೆಗೆ ಪ್ರತಿಭಟನಾ ರ್ಯಾಲಿಸಂಚರಿಸಿತು. ಬ್ಯಾಂಕ್ ನೌಕರರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದಕ್ಕೂ ಮೊದಲು ಪ್ರತಿಭಟನೆಯಲ್ಲಿ ಸ್ಟೇಟ್ ಬ್ಯಾಂಕ್, ಗ್ರಾಮೀಣ ವಿಕಾಸ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಕಾಪೆರ್Çರೇಷನ್ ಬ್ಯಾಂಕ್ ಸೇರಿದಂತೆ ಇತರ ಬ್ಯಾಂಕ್ ಸೇರಿದಂತೆ 100ಕ್ಕೂ ಹೆಚ್ಚು ಬ್ಯಾಂಕ್ ನೌಕರರು ಭಾಗವಹಿಸಿದ್ದರು. ಈ ಸಂದ`ರ್Àದಲ್ಲಿ ಯುಎಫ್‍ಬಿಯು ಆಯೋಜಕ ಎಕನಾಥ ಗಿಂಡೆ ಮಾತನಾಡಿ, ನೌಕರಕೇಂದ್ರ ಸರಕಾರ ಸರಕಾರಿ ಬ್ಯಾಂಕ್‍ಗಳನ್ನು ಖಾಸಗಿಕರಣಗೊಳಿಸುತ್ತಿರುವ ನೀತಿ ಸರಿಯಿಲ್ಲ. ಅಲ್ಲದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹುಡುತ್ತಿರುವುದು ಖಂಡನೀಯವಾಗಿದೆ ಎಂದು ಖಾರವಾಗಿ ಆಕ್ರೊಶ ವ್ಯಕ್ತ ಪಡಿಸಿದರು.
ಸದ್ಯ ಬ್ಯಾಂಕ್‍ಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದ್ದು, ಅವುಗಳ ಭÀರ್ತಿ ಮಾಡುವ ಬಗ್ಗೆ ಸರಕಾರ ಯಾವದೇ ರೀತಿ ಗಮನ ಹರಿಸುತ್ತಿಲ್ಲ. ಬ್ಯಾಂಕ್‍ಗಳಲ್ಲಿರುವ ಸಮಸ್ಯೆ ಬಗ್ಗೆ ಸರಕಾರದ ಗಮನ ತಂದರೂ ಯಾವದೇ ರೀತಿ ಪ್ರಯೋಜನವಾಗುತ್ತಿಲ್ಲ. ಅದ್ದರಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಖಾಸಗಿಕರಣ ಮಾಡುವ ನೀತಿ ಕೂಡಲೇ ಕೇಂದ್ರ ಸರಕಾರ ಕೈ ಬಿಡಬೇಕಾಗಿದೆ ಎಂದು ಒತ್ತಾಯಿಸಿದರು.
ಬ್ಯಾಂಕ್ ನೌಕರರಿಗೆ ಸಾಲ ಕಟ ಬಾಕಿದಾರರ ವಿರುದ್ಧ ಕಠಿಣ ಕ್ರಮಕ್ಕೆ ಅವಕಾಶ ನೀಡುವಂತೆ ಮಾಡಬೇಕಾಗಿದೆ. ಮುಖ್ಯವಾಗಿ ಕೇಂದ್ರ ಸರಕಾರ ಗ್ರಾಮೀಣ ಭಾಗದಲ್ಲಿರುವ ಬ್ಯಾಂಕ್‍ಗಳನ್ನು ಖಾಸಗಿ
ಕರಣ ಮಾಡಿದರೆ ಬ್ಯಾಂಕ್‍ಗಳು ಉತ್ತಮ ದಾರಿಯತ್ತ ಸಾಗಲು ಸಾ`À್ಯವಿಲ್ಲ. ಅದ್ದರಿಂದ ಹಣಕಾಸು ಸುಧಾರಣಾ ನೀತಿ ಇಲ್ಲಿಗೆ ಕೈಬಿಡುವಂತೆ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಈ ಪ್ರತಿಭÀಟನಾ ರ್ಯಾಲಿಯಲ್ಲಿ ಸ್ಟೇಟ್ ಬ್ಯಾಂಕ್, ಗ್ರಾಮೀಣ ವಿಕಾಸ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ಕಾಪೆರ್Çರೇಷನ್ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್ ನೌಕರರು, ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here