ಹಳ್ಳ ಹಿಡಿದ ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳು

0
33
loading...

ಅನೈತಿಕ ಚಟುವಟಿಕೆಗೆ ತಾಣವಾದ ಕಿಲ್ಲಾ ಕೆರೆ – ಮಕ್ಕಳ ಆಟಕ್ಕೆ ಯಾವುದು ಸರಿಯಿಲ್ಲ

ಪೂರ್ಣಿಮಾ ಕರಿಹೊಳೆ

ವಿದ್ಯಾರ್ಥಿ ವರದಿ

ಬೆಳಗಾವಿ:24 ಸ್ಮಾರ್ಟ ಸಿಟಿಯಾಗಲು ಸಿದ್ದವಾಗಿರವ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಕೆಲ ಉದ್ಯಾನವನಗಳು ಹಳ್ಳ ಹಿಡಿದ್ದಿದರೂ ಸಂಬಂಧ ಪಟ್ಟ ಅಧಿಕಾರಿಗಳು ಅವುಗಳನ್ನು ಅಭಿವೃದ್ಧಿ ಪಡಿಸುವ ಮನಸ್ಸು ಮಾಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಉದ್ಯಾನವ ಎಂದಾಕ್ಷಣ ಮಕ್ಕಳ ತೂಗು ಉಯ್ಯಾಲೆ, ಜಾರು ಬಂಡಿ ಹುಲ್ಲಿನ ಹಾಸು ಮಿಸಲು ಆಸನಗಳು, ಹಸಿರಿನಿಂದ ಕಂಗೊಳಿಸುವ ಸುಂದರ ಹೂವು- ಮರಗಳತ್ತ ಎಲ್ಲರ ಕಲ್ಪನಾ ಲಹರಿ ಹರಿಯುವುದು ಸಹಜ,!
ಆದರೆ ಸ್ಮಾರ್ಟ ಸಿಟಿ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾನಗರದ ವ್ಯಾಪ್ತಿಗೆ ಬರುವಂಥ ಜಿಲ್ಲೆಗೆ ಇತಿಹಾಸ ಹೊಂದಿರುವ ಕಿಲ್ಲಾ ಕೋಟೆಯ ಎದುರಿಗೆ ಇರುವ ವಿಶಾಲವಾದ ಕಿಲ್ಲಾ ಕೆರೆ ಉದ್ಯಾನವನ ಮಾತ್ರ ಇದಕ್ಕೆ ಅಪವಾದವಾಗಿದೆ. ಉದ್ಯಾನವಕ್ಕೆ ಇರಬೇಕಾದ ಕೆಲ ಸೌಲಭ್ಯಗಳನ್ನು ಬಿಟ್ಟರೇ ಇಲ್ಲಿ ಯಾವುದು ಸರಿಯಿಲ್ಲ ಎನ್ನುವುದಕ್ಕೆ ಕಿಲ್ಲಾ ಕೆರೆಯ ಲೇಸರ್ ಟೆಕ್ ಪಾರ್ಕ ನೆನೆಗುದಿಗೆ ಬಿದ್ದಿರುವುದೇ ನಿದರ್ಶನವಾಗಿದೆ.
ಹೊಸ ಪೀಳೆಗೆಯ ದೃಷ್ಠಿಯಲ್ಲಿಟ್ಟುಕೊಂಡು ಐತಿಹಾಸಿಕ ಕಿಲ್ಲಾ ಕೆರೆಯ ಆವರಣದಲ್ಲಿ ಸುಂದರವಾದ ಸುಸಜ್ಜಿತವಾದ ಪಾರ್ಕ ನಿರ್ಮಾಣ ಮಾಡಲಾಗಿದೆ. ಆದರೆ ಇಲ್ಲಿ ಹೇಳಿಕೊಳ್ಳುವಂಥ ಮಕ್ಕಳಿಗೆ ಆಟವಾಡಲು ಬೇಕಾದ ಸಲಕರಣೆಗಳು ಉಪಯೋಗಬಾರದೆ ಹಾಳಾಗಿರುವುದು ಉದ್ಯಾನವನಕ್ಕೆ ತೆರಳಿದ ಮಕ್ಕಳಿಗೆ ಬೇಸರ ತರೆಸುವಂತಿದೆ. ಕಳೆದ ವರ್ಷಗಳ ಹಿಂದೆ ಲೇಸರ್ ಟೆಕ್ ಪಾರ್ಕ ಚಾಲನೆ ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿತ್ರ ಅದರಲ್ಲಿ ಮೂಡುತ್ತಿತ್ತು. ಆದರೆ ಅದು ಕೇವಲ ಶನಿವಾರ ಮತ್ತು ರವಿವಾರ ಮಾತ್ರ ಸಿಮೀತವಾಗಿತ್ತು. ಆದರೆ ಅದನ್ನು ನೋಡುವುದು ಈಗ ಅಪರೂಪವಾಗಿದೆ. ಇದರಿಂದ ವಿನಾಕಾರಣ ಹಣವನ್ನು ವ್ಯರ್ಥ ಮಾಡಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸ್ಮಶಾನ ಭಾವ: ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅದೀಗ ಪಾಳು ಬಿದ್ದ ಪರಿಣಾಮವಾಗಿ ವಿಷ ಜಂತು ಹಾಗೂ ಬಿಡಾಡಿ ಹಂದಿಗಳ ವಿರಮಿಸುವ ತಾಣವಾಗಿದೆ. ಮುಂಜಾನೆ ಮತ್ತು ಸಂಜೆ ವಾಯು ವಿಹಾರಕ್ಕೆ ಬರುವ ಜನರಲ್ಲಿ ಹಾಗೂ ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಬರುವ ಕುಟುಂಬಗಳ ಪಾಲಕರು ನಿರಾಸೆಯ ಜೊತೆಗೆ ಇದು ಉದ್ಯಾನವನೋ ಅಥವಾ ಸ್ಮಶಾನವೋ ಎಂದು ಹೇಳಿಕೊಂಡು ಸಾಗುವ ಪರಿಸ್ಥಿತಿ ಬಂದೋದಗಿದೆ.
ಬೆಳಗಿನ ಜಾವ ವಾಯುವಿಹಾರಕ್ಕೆ ಹಾಗೂ ಸಾಯಂಕಾಲ ಮತ್ತು ರಜಾ ದಿನಗಳಲ್ಲಿ ಕಿಲ್ಲಾ ಕೆರೆಯ ಉದ್ಯಾನವನಕ್ಕೆ ಆಗಮಿಸುವ ಮಕ್ಕಳಿಗೆ ನಿರಾಸೆಯಾಗುವುದು ಗ್ಯಾರಂಟಿ. ಏಕೆಂದರೆ ಉದ್ಯಾನವನದಲ್ಲಿ ಬಹುತೇಕ ವಿಶ್ರಾಂತಿ ಖುರ್ಚಿಗಳು ಬಿರುಕು ಬಿಟ್ಟು ಒಡೆದ ಪರಿಣಾಮ ಇಲ್ಲಿ ಕುಳಿತುಕೊಳ್ಳಲು ಸಾಧ್ಯಾಗುತ್ತಿಲ್ಲ. ಮಕ್ಕಳ ಆಟಿಕೆಗೆ ಬೇಕಾದ ತೂಗು ಉಯ್ಯಾಲೆ, ಜಾರು ಬಂಡಿ ಮತ್ತು ಇತರೆ ಆಟಿಕೆ ಸಾಮಗ್ರಿಗಳೇ ಇಲ್ಲ. ಮುಖ್ಯವಾಗಿ ಇಲ್ಲಿ ಡಾ. ಬಿ.ಆರ್.ಅಂಬೇಡ್ಕರ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಹಲವು ಬಾರಿ ದಲಿತ ಸಂಘಟನೆಗಳು ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಇಲ್ಲಿವರೆಗೂ ಅದು ನೆನೆಗುದಿಗೆ ಬಿದಿದ್ದೆ. ಇದರಿಂದ ಕಿಲ್ಲಾ ಕರೆಯ ಅಂದ ಹಾಳಾಗಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಅಲ್ಲದೆ ವಿಶಾಲವಾದ ಆವರಣ ಹೊಂದಿರುವ ಕಿಲ್ಲಾ ಕರೆಯ ಸುತ್ತ ಮುತ್ತಲು ಇರುವ ಗಿಡಗಂಟೆಗಳನ್ನು ತೆರವುಗೊಳಿಸಿ ಔಷಧಿ ಸಸ್ಯಗಳನ್ನು ನೆಡಬೇಕು ಎಂಬುದು ಇಲ್ಲಿನ ಜನರ ಆಶಯವಾಗಿದೆ. ಆದರೆ ಇಲ್ಲಿರುವ ಕೆಲ ಗಿಡಗಂಟೆಗಳು ರಾತ್ರಿ ಸಮಯದಲ್ಲಿ ಬಿಡಾದಿ ಜಾನುವಾರುಗಳು ಗಿಡಗಳನ್ನು ಹಾಳು ಮಾಡುತ್ತಿವೆ. ಅಲ್ಲದೆ ಗಿಡಗಂಟೆಗಳು ಬೆಳೆದ ಕಾರಣ ಇಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಸಾರ್ವಜನಿಕರ ಸದುದ್ದೇಶಕ್ಕೆ ನಿರ್ಮಿಸಿದ ಉದ್ಯಾನವನ್ನು ಜಿಲ್ಲಾಡಳಿತ ಸರಿಯಾಗಿ ನಿರ್ವಹಣೆ ಮಾಡದೆ ಕೈ ಚೆಲ್ಲಿಕುಳಿತ್ತಿದ್ದರಿಂದ ಕೋಟಿ ಅನುಧಾನ ವ್ಯರ್ಥವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ಉದ್ಯಾನದಲ್ಲಿನ ಗಿಡಗಂಟೆ, ಕಸ – ಕಳೆ ತೆಗೆಸಿ ಸಾರ್ವಜನಿಕರ ಬಳಕೆಗೆ ನೀಡಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಆಶ್ರಯ ತಾಣವಾಬೇಕಾದ ಈ ಉದ್ಯಾನವನಗಳಲ್ಲಿ ಈ ರೀತಿಯ ಚಟುವಟಿಕೆಗಳು ನಡೆಯುತ್ತಿದ್ದರು ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಸಾರ್ವಜನಿಕರಿಗೆ ಬೇಸರದ ಸಂಗತಿಯಾಗಿದೆ.
ನೈಸರ್ಗಿಕ ಸಂಪತ್ತಿನ ಜೊತೆಗೆ ನಮ್ಮ ಸಂಪತ್ತನ್ನು ಸೇರಿಸಿ ಮುಂದುವರೆಸಿಕೊಂಡು ಹೋಗಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ. ಆದರೇ ಅಲ್ಲಿ ನೈಸರ್ಗಿಕ ಸಂಪತ್ತೇ ಮೊದಲು ಹಾಳಾಗುತ್ತಿದೆ. ಇನ್ನು ತಮ್ಮ ಸಂಪತ್ತನ್ನು ಮಿಶ್ರ ಮಾಡುವುದು ಅಷ್ಟೆ ಇದೆ.
*****
ಉದ್ಯಾನವನಗಳಲ್ಲಿ ಸುವ್ಯವಸ್ಥಿತವಾದ ವ್ಯವಸ್ಥೆಯಾದರೇ ಎಲ್ಲರಿಗೂ ಕೂಡಾ ಉಪಯೋಗ. ಇದರಿಂದ ಮಕ್ಕಳು ನೆಮ್ಮದಿಯಾಗಿ ಆಟ ಆಡಲು ವಯಸ್ಸಾದವರು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಸ್ವಚ್ಛತೆಯಿಂದ ಕೂಡಿರಬೇಕಾದ ಉದ್ಯಾನವನಗಳು ಕಸದ ತೊಟ್ಟಿಗಳಾಗಿವೆ. ಅಲ್ಲಿ ಸ್ವಚ್ಛತೆ ಮರೆಯಾಗಿದೆ. ಸ್ವಚ್ಛತೆಯ ಬಗ್ಗೆ ಸ್ವಲ್ಪವು ಕಾಳಜಿ ಇಲ್ಲ. ಸದಾ ಹಸಿರಿನಿಂದ ಕಂಗೋಳಿಸಬೇಕಾದರೇ ಅಲ್ಲಿ ಗಿಡಮರಗಳನ್ನು ನೆಟ್ಟು ಪೋಷಣೆ ಮಾಡಬೇಕು. ಆದರೇ ಆ ಯಾವುದೇ ಕಾರ್ಯ ಅಲ್ಲಿ ನಡೆದಲ್ಲ.
ಸಂತೋಷ ಶೆಟ್ಟಿ
ಸಾರ್ವಜನಿಕ

 

loading...

LEAVE A REPLY

Please enter your comment!
Please enter your name here