ಹಾಳಾದ ರಸ್ತೆ, ಹಟಾರನ್ನು ಸ್ವತಃ ಯುವಕರು ಶುಚಿಗೊಳಿಸಿದರು

0
33
loading...

ಜೋಯಿಡಾ : ಟೌನ್‍ಶಿಪ್ ಎರಿಯಾದ ಇರ್ಪಾಡ ದುರ್ಗಾನಗರದ ರಸ್ತೆ ಮೇಲೆ ಹರಿಯುವ ಕೊಳಚೆ ನೀರಿನಿಂದ ರಸ್ತೆ ಹಾಳಾಗಿರುವದನ್ನು ಗ್ರಾಮ ಪಂಚಾಯತ್‍ಗೆ ಸರಿಪಡುವಂತೆ ಹಲವು ಬಾರಿ ಹೇಳಿದರು ನಿರ್ಲಕ್ಷಿಸಿದ ಪಂಚಾಯತ್ ಆಡಳಿತದ ಕಾರ್ಯವೈಖರಿಗೆ ಬೇಸತ್ತು ಯುವಕರೆಲ್ಲರೂ ಸೇರಿ ನಿವೃತ್ತ ಸೇನಾನಿ ಸಂತೋಷ ಸಾವಂತ ನೇತ್ರತ್ವದಲ್ಲಿ ತಾವೇ ಸ್ವತಃ ರಸ್ತೆ ಗಟಾರ ಶುಚಿಗೊಳಿಸಿ ಹೊಂಡದಿಂದ ಹಾಳಾದ ರಸ್ತೆಯನ್ನು ಸೋಮವಾರ ದುರಸ್ತಿಗೊಳಿಸಿದರು.
ಕಳೆದ ಒಂದು ತಿಂಗಳಿಂದ ಇಲ್ಲಿನ ಗಟಾರ ಹೂಳು ತುಂಬಿ ಮಳೆಯ ಹರಿಯುವ ನೀರೆಲ್ಲಾ ರಸ್ತೆಯ ಮಧ್ಯದಲ್ಲಿ ಹರಿದು ರಸ್ತೆ ಕೊಚ್ಚಿಹೋಗಿತ್ತು. ಇದರಿಂದ ಹೊಂಡಮಯ ರಸ್ತೆಯಲ್ಲಿ ದಿನನಿತ್ಯ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ತಿರುಗುವುದು ಕಷ್ಟಕರವಾಗಿತು. ಈ ಬಗ್ಗೆ ಹಲವು ಬಾರಿ ಸ್ಥಳಿಯ ಗ್ರಾಮ ಪಂಚಾಯತ್‍ಗೆ ತಿಳಿಸಿದರೂ ಸಂಬಂದಿಸಿದ ಪ್ರತಿನಿದಿಗಳು ಯಾರೂ ಸ್ಫಂದಿಸದೇ ಇದ್ದರಿಂದ ಸೋಮವಾರ ಇಲ್ಲಿನ ಉತ್ಸಾಹಿ ಯುವಕರು ಸಂತೋಷ ಸಾವಂತ ಜೊತೆಗೂಡಿ ರಸ್ತೆ ಶುಚಿಕರಣಕ್ಕೆ ಮುಂದಾದರು. ಇದರ ಫಲವಾಗಿ ಇಲ್ಲಿನ ಹೊಂಡದಿಂದ ಕೂಡಿದ ಇಲ್ಲಿನ ರಸ್ತೆಗೆ ಮಣ್ಣು ತುಂಬಿದರಲ್ಲದೆ, ನೀರು ಹರಿಯುವ ಗಟಾರ ಊಳು ತೆಗೆದು ಸುಚುಗೊಳಿಸಿ ನೀರು ಗಟಾರ ಮೂಲಕ ಹರಿಯುವಂತೆ ಮಾಡಿರುತ್ತಾರೆ. ಯುವಕರ ಈ ಸಾಧನೆ ಸುತ್ತಲಿನ ಗ್ರಾಮಸ್ಥರಿಗೆ ಮಾದರಿಯಾಗಿತ್ತು.

loading...

LEAVE A REPLY

Please enter your comment!
Please enter your name here