0
24
loading...

1ಲಕ್ಷ ಜನರಿಗೆ ಉಚಿತ ಆರೋಗ್ಯ ತಪಾಸಣೆÉ: ಅಮೀತ ಕೋರೆ
ಮೋಳೆ 22: ಒಂದು ಲಕ್ಷ ಗ್ರಾಮೀಣ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸನೆ, ಪ್ರಾಥಮಿಕ ಹಂತದ ಶಸ್ತ್ರ ಚಿಕಿತ್ಸೆ ನೀಡುವ ಮೂಲಕ ಕೆಎಲ್‍ಇ ಸಂಸ್ಥೆಯ ಶತಮಾತೋತ್ಸವ ಆಚರಣೆಯನ್ನು ಆಚರಿಸಲು ನಿರ್ದರಿಸಲಾಗಿದೆ ಎಂದು ದೂದಗಂಗಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಮೀತ ಕೋರೆ ಹೇಳಿದರು.
ಶುಕ್ರವಾರ ಅಥಣಿ ತಾಲೂಕಿನ ಐನಾಪೂರದಲ್ಲಿ ಕೆಎಲ್‍ಇ ಸಂಸ್ಥೆಯ ಶತಮಾತೋತ್ಸವ ಆಚರಣೆಯ ಅಂಗವಾಗಿ ಕೆಎಲ್‍ಇ ವಿಶ್ವವಿದ್ಯಾಲಯ, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದಕೀಯ ಸಂಶೋಧನಾ ಕೇಂದ್ರ ಬೆಳಗಾವಿ, ಶಿವಶಕ್ತಿ ಶುಗರ್ಸ್ ರಾಯಬಾಗ, ಇವುಗಳ ಸಹಯೋಗದೊಂದಿಗೆ ಐನಾಪೂರದ ಕೆಆರ್‍ಇ ಸಂಸ್ಥೆಯಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ದೇಶಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಕೆಎಲ್‍ಈ ಸಂಸ್ಥೆಯ ಉಚಿತ ಸೇವೆ ಸಿಗಲಿ ಎಂಬ ದೃಷ್ಟಿಯಿಂದ ಐನಾಪೂರದಲ್ಲಿ 200 ಜನ ಎಲ್ಲ ಬಗೆಯ ತಜ್ಞ ವೈದ್ಯರು ಆಗಿಸಿ ಜರರಿಗೆ ಉಚಿತ ಆರೋಗ್ಯ ತಪಾಸನೆ ನೀಡಿ ಹೆಚ್ಚಿನ ಶಸ್ತ್ರ ಚಿಕಿತ್ಸೆÉ ಇದ್ದರೆ ನಮ್ಮ ವಾಹಾನದಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕೆಂಪವಾಡ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶ್ರೀಮಂತ ಪಾಟೀಲ ಗ್ರಾಮೀಣ ಭಾಗದ ಜನರಿಗೆ ಅನುಕುಲವಾಗಲಿ ಎಂಬ ದೃಷ್ಟಿಯಿಂದ ಕೆಎಲ್‍ಇ ಸಂಸ್ಥೆಯ ಅದ್ಯಕ್ಷ ಡಾ. ಪ್ರಭಾಕರ ಕೋರೆಯವರು ಕೆಎಲ್‍ಇ ಸಂಸ್ಥೆಯ ವತಿಯಿಂದ ಉನ್ನತ ಮಟ್ಟದ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಿದ್ದು ಶ್ಲಾಘನೀಯ ಎಂದರು.
ಈ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆ, ಮೂಳೆ-ಸಂದು, ಕಣ್ಣು,ಕಿವಿ, ಗಂಟಲು, ಮೂಗು, ಸಾಮಾನ್ಯ ರೋಗ, ಸ್ತ್ರೀ ರೋಗ, ಚರ್ಮರೋಗ, ಶ್ವಾಸಕೋಶ ಮತ್ತು ಚಿಕ್ಕ ಮಕ್ಕಳ ಕಾಯಿಲೆಗಳಿಗೆ ಕೆ.ಎಲ್.ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞ ವೈದ್ಯರು ಭಾಗವಹಿಸಿ ರೋಗಿಗಳನ್ನು ತಪಾಸಣೆ ಮಾಡಿ, 5 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಔಷಧಿ ಮತ್ತು ಸಲಹೆಗಳನ್ನು ನೀಡುವರು.
ಈ ಕಾರ್ಯಕ್ರಮದಲ್ಲಿ ಬಸವೇಶ್ವರ ಮಹಾಸ್ವಾಮಿಗಳು, ಡಾ. ವ್ಹಿ.ಡಿ ಪಾಟೀಲ, ಡಾ. ಎಸ್.ಎಸ್ ಮಹಾಂತಶೆಟ್ಟಿ. ಭರತೇಶ ಬನವಣೆ, ಅಣ್ಣಾಸಾಬ ಪಾಟೀಲ(ಜುಗೂಳ), ಪ್ರಕಾಶ ಪಾಟೀಲ, ಸುಭಾó ಕಾತ್ರಾಳೆ, ಮನಿಷಾ ಹರಳೆ, ಆದಗೌಡ ಪಾಟೀಲ, ಶಿವಗೌಡ ಪಾರಶೆಟ್ಟಿ, ಡಾ. ಆನಂದ ಕಟ್ಟಿ ಸೇರಿದಂತೆ ಮುಂತಾದವರು ಭಾಗಹಿಸಿದ್ದರು.

loading...

LEAVE A REPLY

Please enter your comment!
Please enter your name here