19 ರಂದು ವಿರಾಟ್ ರ್ಯಾಲಿ: ಮಹೇಂದ್ರ

0
22
loading...

ಬೆಳಗಾವಿ : 15 ದೇಶದ ಅಂಬೇಡ್ಕರ ಅನುಯಾಯಿಗಳು ಮಹಾರಾಷ್ಟ್ರ ಬಿ.ಜೆ.ಪಿ ಸರ್ಕಾರವನ್ನು ವಿರೋಧಿಸಿ ವಿರಾಟ್ ರ್ಯಾಲಿಯನ್ನು ಜುಲೈ 19 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಹೇಂದ್ರ ಮುಕಾಳೆ ಇಂದಿಲ್ಲಿ ಹೇಳಿದರು.
ಅವರು ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಒಳ್ಳೆ ದಿನ ಬರುತ್ತೆ ಎನ್ನುವ ಪ್ರಧಾನಿ ಮೋದಿ ಅವರ ಮಾತು ಮಹಾರಾಷ್ಟ್ರ ಬಿ.ಜೆ.ಪಿ. ಸರ್ಕಾರ ಒಳ್ಳೆ ದಿನದ ಸಂದೇಶವಾಗಿ ಅಂಬೇಡ್ಕಕರ್‍ರವರ ಗ್ರಂಥಾಲಯ ಹಾಗೂ ಅಂಬೇಡ್ಕರ್ ಭವನವನ್ನು ದ್ವಂಸ ಮಾಡಿದೆ. ಆದ್ದರಿಂದ ನಮ್ಮ ಹೋರಾಟದ ಶಕ್ತಿಯನ್ನು ಈ ಸರ್ಕಾರಕ್ಕೆ ತೋರಿಸಲು ಕೋಟಿ ಕೋಟಿ ಸಂಖ್ಯೆಯಲ್ಲಿ ದೇಶದ ವಿವಿಧ ಮೂಲೆಗಳಿಂದ ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.
ಐತಿಹಾಸಿಕ ರ್ಯಾಲಿಯ ನೇತೃತ್ವವನ್ನು ಅಂಬೇಡ್ಕರ್‍ರವರ ಮೊಮ್ಮಗ ಪ್ರಕಾಶ ಅಂಬೇಡ್ಕರ್‍ರವರು ಮತ್ತು ಆನಂದ್‍ರಾಜ್ ಅಂಬೇಡ್ಕರ್ ರವರು ವಹಿಸಲಿದ್ದಾರೆ. ದಿ. ಜುಲೈ 18 ರಂದು ಕರ್ನಾಟಕದಿಂದ “ಮುಂಬೈ ಚಲೋ” ಕಾರ್ಯಕ್ರಮಕ್ಕೆ ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಹಾಸನ, ಧಾರವಾಡ, ಹುಬ್ಬಳ್ಳಿ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ಶೀವಮೊಗ್ಗ, ಮಂಗಳೂರು, ಕಲಬುರ್ಗಿ, ರಾಯಚೂರು, ಬೀದರ್, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈಲು, ಬಸ್ಸು ಮುಂತಾದ ವಾಹನಗಳ ಮೂಲಕ ಹೊರಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಮಾರುತಿ ಸಿ. ಕಾಡಾಪೂರೆ, ಗೋಪಿ ಬಳ್ಳಾರಿ ಮಲ್ಲೇಶ ಚೌಗುಲೆ, ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here