ಇಂದಿನಿಂದ ನರೇಗಾ ಓಂಬುಡ್ಸಮನ್ ಪ್ರವಾಸ

0
21
loading...

ಬೆಳಗಾವಿ 03: ಜಿಲ್ಲಾ ಪಂಚಾಯತಿಯ ನರೇಗಾ ಓಂಬುಡ್ಸಮನ್‍ರಾದ ಡಾ.ಎ.ಜೆ.ಧುಮಾಳೆ ಆಗಸ್ಟ್ 4ರಿಂದ ಜಿಲ್ಲೆಯ ತಾಲೂಕು ಪಂಚಾಯತ ಕಾರ್ಯಾಲಯಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಕುರಿತು ಬಂದ ದೂರುಗಳ ವಿಚಾರಣೆ ನಡೆಸುವರು ಹಾಗೂ ಸಾರ್ವಜನಿಕರಿಂದ ದೂರು ಹಾಗೂ ಅಹವಾಲುಗಳನ್ನು ಸ್ವೀಕರಿಸುವರು.
ಅಗಸ್ಟ್ 4ರಂದು ಬೆಳಿಗ್ಗೆ 11-00 ಘಂಟೆಗೆ ಖಾನಾಪೂರ, ಆ.9 ರಂದು ಬೆಳಿಗ್ಗೆ 11-00 ಘಂಟೆಗೆ ಚಿಕ್ಕೋಡಿ, ಮಧ್ಯಾಹ್ನ 3-00 ಘಂಟೆಗೆ ಅಥಣಿ. ಆ. 12ರಂದು ಬೆಳಿಗ್ಗೆ 11-00 ಘÀಂಟೆಗೆ ಹುಕ್ಕೇರಿ, ಆ.17ರಂದು ಬೆಳಿಗ್ಗೆ 11-00 ಘಂಟೆಗೆ ಸವದತ್ತಿ, ಆ.19 ರಂದು ಬೆಳಿಗ್ಗೆ 11-00 ಘಂಟೆಗೆ ನಿಪ್ಪಾಣಿ ಪ್ರವಾಸಿ ಮಂದಿರ ಹಾಗೂ ಆ.23 ರಂದು ಬೆಳಿಗ್ಗೆ 11-00 ಘಂಟೆಗೆ ಗೋಕಾಕ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರದಲ್ಲಿ ಆ. 11ರಂದು ಹಾಗೂ ಧಾರವಾಡ ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಆ.6 ರಂದು ಹಾಗೂ ಆ.29ರಂದು ಪ್ರಭಾರಿ ಓಂಬುಡ್ಸಮನ್‍ರಾಗಿ ಕಾರ್ಯನಿರ್ವಹಿಸುವರು.
ಉದ್ಯೋಗ ಖಾತ್ರಿ ಯೋಜನೆಯಡಿ ದೂರುಗಳ ಕೆಲಸದಲ್ಲಿ ಯಾವ ರೀತಿ ದೋಷಗಳಾಗಿವೆ ಎಂಬ ಬಗ್ಗೆ ಸ್ಪಷ್ಟವಾಗಿ ನಮೂದಿಸಿ ಲಿಖಿತ ದೂರುಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಓಂಬುಡ್ಸಮನ್ ಕಛೇರಿಗೆ ಕಳುಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

loading...

LEAVE A REPLY

Please enter your comment!
Please enter your name here