ಕೃಷಿ ಯಂತ್ರೋಪಕರಣ, ಸೌಲಭ್ಯವನ್ನು ರೈತರು ಪಡೆದುಕೊಳ್ಳಬೇಕು

0
213
loading...

ಧಾರವಾಡ : ಕೃಷಿ ಯಂತ್ರೋಪಕರಣಗಳ ಸದ್ಭಳಕೆ ಮಾಡಿಕೊಂಡು ಕೃಷಿಯಲ್ಲಿ ಹೆಚ್ಚಿನ ಆದಾಯಗಳಿಸಲು ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ವರದಾನವಾಗಿದೆ ಧವರ್iಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಸಮನ್ವಯಾಧಿಕಾರಿ ರವಿಮಣಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೃಷಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದಲ್ಲಿ ನಡೆದ ರೈತರ ನೋಂದಾವಣಿ ಹಾಗೂ ಕೃಷಿ ಯಂತ್ರೋಪಕರಣ ಮಾಹಿತಿ ಕಾರ್ಯಮದಲ್ಲಿ ಮಾತನಾಡಿದರು. ಕೃಷಿ ವೃತ್ತಿಯಿಂದ ಹಿಮ್ಮುಖವಾಗುತ್ತಿರುವ ರೈತ ಸಂಕುಲವನ್ನು ಕೃಷಿಯತ್ತ ಮುಖ ಮಾಡುವಂತೆ ಮಾಡುವಲ್ಲಿ ಕೃಷಿ ಯಂತ್ರಧಾರೆ ಕಾರ್ಯಕ್ರಮ ಯಶಸ್ವಿಯಾಗಿದೆ. ರೈತರು ದೇಶದ ಬೆನ್ನೆಲುಬು ರೈತನಾದರೆ ರೈತನ ಬೆನ್ನೆಲುಬು ಯಂತ್ರವಾಗಿದೆ. ಕೇಂದ್ರದಿಂದ ದೊರೆಯುವ ಕೃಷಿ ಯಂತ್ರೋಪಕರಣಗಳು ಹಾಗೂ ಸೌಲಭ್ಯವನ್ನು ಪಡೆದುಕೊಳ್ಳಲು ರೈತರು ಅನುಸರಿಸಬೇಕಾದ ಕ್ರಮಗಳ ಅರಿವು ಅವಶ್ಯ ಎಂದರು.
ತಾಲೂಕ ಯೋಜನಾಧಿಕಾರಿ ಕುಸುಮಾಧರ ಕೆ ಮಾತನಾಡಿ, ಯೋಜನೆಯಲ್ಲಿ ಯುವ ರೈತರ ಪ್ರಗತಿ ಬಂಧು ತಂಡಗಳ ರಚನೆ ಮಾಡುವ ಮೂಲಕ ರೈತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುವದು ಎಂದರು.
ತಾಲೂಕು ಪಂಚಾಯತ್ ಸದಸ್ಯ ಸಿದ್ದಲಿಂಗಪ್ಪ ಕುಂಬಾರ, ದುಮ್ಮವಾಡ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಕವ್ವ ಬೆಟದೂರ, ಫಕ್ಕೀರಪ್ಪ ಬುಡ್ಡಿಕಾಯಿ ಉಪಸ್ಥಿತರಿದ್ದರು. ಹುಸೇನ್ ಸ್ವಾಗತಿಸಿದರು, ಕುಮಾರ್ ನಿರೂಪಿಸಿದರು, ಪ್ರತಾಪ ಸಿಂಗ್ ವಂದಿಸಿದರು.

loading...

LEAVE A REPLY

Please enter your comment!
Please enter your name here