ಖಾನಾಪುರ: ಸೀಮೆ ಎಣ್ಣೆ ಕೂಪನ್ ವಿತರಣೆ

0
25
loading...

ಬೆಳಗಾವಿ 03: ಖಾನಾಪುರ ತಾಲ್ಲೂಕಿನ ಜಾಂಬೋಟಿ, ಬೀಡಿ ಹಾಗೂ ಗುಂಜಿ ಗ್ರಾಮಗಳಲ್ಲಿ ಕಾರ್ಡದಾರರು ಆಗಸ್ಟ್-2016ರ ಸೀಮೆ ಎಣ್ಣೆ ಕೂಪನ್‍ಗಳನ್ನು ಎಸ್‍ಎಂಎಸ್ ರೂಪದಲ್ಲಿ ಅಥವಾ ಮುದ್ರಿತ ರೂಪದಲ್ಲಿ ಪಡೆಯಬಹುದಾಗಿದೆ ಎಂದು ಖಾನಾಪುರ ತಹಶೀಲ್ದಾರ ತಿಳಿಸಿದ್ದಾರೆ.
ಎಸ್‍ಎಂಎಸ್ ಕೂಪನ್:
ಆಧಾರ ನೋಂದಣಿ ಕೇಂದ್ರದಲ್ಲಿ ಆಧಾರ ಸಂಖ್ಯೆಗೆ ದಾಖಲಿಸಲಾಗಿರುವ ಮೊಬೈಲ್ ನಂಬರ್‍ನಿಂದ 161ಕ್ಕೆ ಕರೆ ಮಾಡಿ ಸಂಪರ್ಕ ಹೊಂದಿದ ನಂತರ 4 ಅನ್ನು ನಂತರ ಆಧಾರ ಕಾರ್ಡಿನ 12 ಸಂಖ್ಯೆಗಳನ್ನು ಒತ್ತಬೇಕು.
ಮುದ್ರಿತ ಕೂಪನ್:
ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯರು ಇಲಾಖೆಯಿಂದ ಈಗಾಗಲೇ ನಗರ ಪ್ರದೇಶದಲ್ಲಿ ಪ್ರಾಂಭಗೊಂಡಿರುವ ಸೇವಾ ಕೇಂದ್ರ ಅಥವಾ ಆಯಾ ಗ್ರಾಮದ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ದೃಢೀಕರಣ ನೀಡಿ ಮುದ್ರಿತ ಕೂಪನ್ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here