ಗಣೇಶ, ಬಕ್ರಿದನಲ್ಲಿ ಸಾರ್ವಜನಿಕರ ಶಾಂತಿ ಕದಡುವವರಿಗೆ ಕಾನೂನು ಕ್ರಮ: ಆಯುಕ್ತ ಕೃಷ್ಣಭಟ್

0
22
loading...

ಬೆಳಗಾವಿ:30 ಬರುವ ಸೆ. ತಿಂಗಳಿನಲ್ಲಿ ಗಣೇಶ ಹಬ್ಬ ಹಾಗೂ ಬಕ್ರಿದನಲ್ಲಿ ಸಾರ್ವಜನಿಕರ ನೆಮ್ಮದಿ, ಶಾಂತಿಕದಡುವ ಕಿಡಿಗೇಡಿಗಳ ಮೇಲೆ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕೃಷ್ಣಭಟ್ ಇಂದಿಲ್ಲಿ ಎಚ್ಚರಿಸಿದರು.
ಅವರು ಮಂಗಳವಾರ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿರುವ ಸಭಾಂಗಣದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಮುಖಂಡರುಗಳೊಂದಿಗೆ ಕರೆಯಲಾದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು, ಬೆಳಗಾವಿ ನಗರದಲ್ಲಿ ಸಾಕಷ್ಟು ಪ್ರದೇಶಗಳಲ್ಲಿ ವೃದ್ಧರು, ನ್ಯಾಯಾಲಯದ ಸಂಕೀರ್ಣ, ಆಸ್ಪತ್ರೆ ವೃದ್ಧಾಶ್ರಮಗಳು ಸೇರಿದಂತೆ ಹಲವಾರು ಸಮಾಜಿಕ ಸಂಘ ಸಂಸ್ಥೆಗಳಿಗೆ ಹಿಂದೂ ಮತ್ತು ಮುಸ್ಲಿಂ ಹಬ್ಬಗಳು ಏಕಕಾಲಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಕಿಡಿಗೇಡಿ ಕೃತ್ಯಗಳಿಗೆ ಮುಖಂಡರುಗಳು ಅವಕಾಶ ನೀಡಬಾರದು. ಒಂದು ವೇಳೆ ಸಾರ್ವಜನಿಕರ ಮಾನಸಿಕ ನೆಮ್ಮದಿ ಹಾಳುವ ಮಾಡುವ ಘಟನೆ ಸಂಭವಿಸಿದರೇ ಕಿಡಿಗೇಡಿಗಳ ವಿರುದ್ಧ ಕಾನುನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಹಿಂದೆ ಗಣೇಶ ಮಂಡಳಗಳ ಶಾಂತಿ ಪಾಲನಾ ಸಭೆಯಲ್ಲಿ ಹಲವಾರು ಸಮಸ್ಯೆಗಳನ್ನು ಪೊಲೀಸ್ ಇಲಾಖೆಯ ಮುಂದಿಟ್ಟಿದ್ದರು. ಅದರಲ್ಲಿ ಪ್ರಮುಖವಾದದ್ದು ಗಣೇಶ ಮಾರ್ಗದ ಸಮಸ್ಯೆಯ ಬಗ್ಗೆ ಹೇಳಿದ್ದರು. ಅದರಂತೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಗಣೇಶ ವಿಸರ್ಜನಾ ಮಾರ್ಗವನ್ನು ಪರಿಶೀಲನೆ ನಡೆಸಲಾಗಿದೆ. ಸುಸತ್ರವಾಗಿ ಎಲ್ಲರೂ ಸಂತೋಷದಿಂದ ಗಣೇಶ ಹಬ್ಬವನ್ನು ಆಚರಣೆ ಮಾಡಬೇಕು. ನಗರ ವ್ಯಾಪ್ತಿಯಲ್ಲಿ ಈ ಬಾರಿಯ ಹಬ್ಬಕ್ಕೆ ರಾಜ್ಯ ಸರಕಾರ ಕಡಿಮೆ ಸಿಬ್ಬಂದಿಗಳನ್ನು ನೇಮಿಸಿದೆ. ಈ ನಿಟ್ಟಿನಲ್ಲಿ ಗಣೇಶ ಮಂಡಳಗಳ ಮುಖಂಡರುಗಳು ಹೆಚ್ಚಿನ ಭದ್ರತೆ ಒದಗಿಸಿ ಪೊಲೀಸರಿಗೆ ಸಹಾಯ ಮಾಡಬೇಕೆಂದು ಅವರು ವಿನಂತಿಸಿಕೊಂಡರು.
ಅದೇ ರೀತಿ ಮುಸ್ಲಿಂ ಸಮುದಾಯದ ಬಕ್ರಿದ ಹಬ್ಬವು ಇದೇ ಸಂದರ್ಭದಲ್ಲಿ ಆಚರಿಸಲಾಗುತ್ತಿದ್ದು ಮುಸ್ಲಿಂ ಮುಖಂಡರು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಆಯುಕ್ತ ಕೃಷ್ಣಭಟ್ ಹೇಳಿದರು.
ಇದಕ್ಕು ಮುನ್ನ ಶೆಟ್ಟಿಗಲ್ಲಿ ಗಣೇಶ ಮಂಡಳದ ಮುಖಂಡ ಮಹಾಂತೇಶ ಗದ್ದಿಹಳ್ಳಿಶೆಟ್ಟಿ ಮಾತನಾಡಿ, ನಗರದೊಳಗಿನ ಜಾರಗಾರಗಲ್ಲಿ, ಖಡಕಗಲ್ಲಿ, ಭಡಕಲಗಲ್ಲಿ, ಚವಾಟಗಲ್ಲಿಯ ಪರಿಸರದ ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಹಬ್ಬ ಹರಿದಿನಗಳನ್ನು ಆಚರಿಸುತ್ತ ಬಂದಿದ್ದಾರೆ. ಹೊರಗಿನಿಂದ ಬಂದ ಕಿಡಿಗೇಡಿಗಳು ಅಶಾಂತಿಗೆ ಕಾರಣರೆನ್ನಿಸಿದ್ದಾರೆ. ಇಂಥವರನ್ನು ಗುರುತಿಸಿ ಆಯಾ ಪರಿಸರದ ಜನ ಪೊಲೀಸರಿಗೆ ಒಪ್ಪಿಸಬೇಕು. ಎಲ್ಲರೊಟ್ಟಿಗೆ ಒಂದಾಗಿ ಗಣೇಶ ಮತ್ತು ಬಕ್ರಿದ ಹಬ್ಬವನ್ನು ಆಚರಿಸೋಣ ಈ ಪ್ರದೇಶ ವ್ಯಾಪ್ತಿಯ ಹಿರಿಯರು ಮತ್ತು ಮಂಡಳಗಳು ಪೊಲೀಸರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಮುಸ್ಲಿಂ ಸಂಘಟನೆಯ ಮುಖಂಡರು ಮಾತನಾಡಿ, ಗಣೇಶ ಹಬ್ಬದಲ್ಲಿ ಕಿಡಿಗೇಡಿಗಳು ದರಬಾರಗಲ್ಲಿಯಲ್ಲಿ ಸರಾಯಿ ಕುಡಿದು ಗಲಾಟೆ ಮಾಡುವ ಸಂಭವ ಹೆಚ್ಚಿದೆ. ಆದ್ದರಿಂದ ದರಬಾರಗಲ್ಲಿಯಲ್ಲಿರುವ ಬಾರಗಳನ್ನು ರಾತ್ರಿ ಸಮಯದಲ್ಲಿ ಬಂದ್ ಮಾಡಿಸಬೇಕೆಂದು ಆಯುಕ್ತರಲ್ಲಿ ವಿನಂತಿಸಿಕೊಂಡರು.
ಅಲ್ಲದೆ ಹಿಂದೂ, ಮುಸ್ಲಿಂ ಹಬ್ಬಗಳು ಏಕಕಾಲದಲ್ಲಿ ಬಂದಿರುವುದರಿಂದ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಈ ಎರಡು ಹಬ್ಬಗಳನ್ನು ಆಚರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಉಪಮೇಯರ್ ಸಂಜಯ ಶಿಂಧೆ, ಅಪರಾಧ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ, ಗಣೇಶ ಮಂಡಳದ ಮುಖಂಡರಾದ ವಿಕಾಸ ಕಲಘಟಗಿ, ಶ್ರೀನಿವಾಸ ತಾಳೂಕರ ಸೇರಿದಂತೆ ಮುಸ್ಲಿಂ ಸಂಘಟನೆಯ ಮುಖಂಡರು ಹಾಜರಿದ್ದರು.

****

ಇದೇ ಪ್ರಥಮ ಬಾರಿಗೆ ಬರುವ ಗಣೇಶ ಹಬ್ಬದ ವಿಸರ್ಜನೆಯಲ್ಲಿ ಶಾಂತಿಯುತವಾಗಿ, ಸಾರ್ವಜನಿಕರಿಗೆ ತೊಂದರೆ ಹಾಗೂ ಶಬ್ಧ ಮಾಲಿನ್ಯಕ್ಕೆ ಅವಕಾಶ ನೀಡದ ಗಣೇಶ ಮಂಡಳಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪೊಲೀಸ್ ಕಮೀಷನರ್ ರೋಲಿಂಗ್ ಟ್ರೋಫಿ ನೀಡಲಾಗುವುದು.
ಟಿ.ಜೆ.ಕೃಷ್ಣಭಟ್
ನಗರ ಪೊಇಲೀಸ್ ಆಯುಕ್ತ

loading...

LEAVE A REPLY

Please enter your comment!
Please enter your name here