ಗೋರಕ್ಷಕರ ಬಗ್ಗೆಯ ಪ್ರಧಾನಮಂತ್ರಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ

0
19
loading...

ಕಾರವಾರ ; ಗೋರಕ್ಷಕರನ್ನು ಸಮಾಜ ಕಂಟ-ಕರೆಂದು ಹೇಳಿರುವ ಪ್ರಧಾನಮಂತ್ರಿ ಹೇಳಿಕೆಯನ್ನು ಖಂಡಿಸಿ ಹಾಗೂ ಈ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಹಿಂದು ಜಾಗರಣ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು `ಗೋರಕ್ಷಣೆ ಮಾಡುವವರಲ್ಲಿ ಶೇ. 80 ರಷ್ಟು ಗೋರಕ್ಷಕರು ನಕಲಿಯಾಗಿದ್ದು, ಗೋರಕ್ಷಣೆಯ ಹೆಸರಿನಲ್ಲಿ ಅಂಗಡಿಗಳನ್ನು ತೆರೆದು ಕುಳಿತಿರುವ ಈ ಸಮಾಜಕಂಟಕರ ಕುಂಡಲಿಯನ್ನು ಹೊರತೆಗೆಯಿರಿ’, ಎನ್ನುವ ಆಘಾತಕಾರಿ ಹೇಳಿಕೆಯನ್ನು ನೀಡಿರುವುದರಿಂದ ಸಮಸ್ತ ಗೋರಕ್ಷಕರಲ್ಲಿ ಅಸಮಾಧಾನ ಹರಡಿದೆ. ಗೋರಕ್ಷಣೆಯ ಹೆಸರಿನಲ್ಲಿ ದಂಧೆಯನ್ನು ಮಾಡುವ ಜನರು ಯಾರಾದರೂ ಇದ್ದಲ್ಲಿ, ಅವರಿಗೆ ಖಂಡಿತವಾಗಿಯೂ ಶಿಕ್ಷೆಯಾಗಬೇಕು. ಆದರೆ ಶೇ.80 ರಷ್ಟು ಎಂದರೆ ಬಹುಸಂಖ್ಯಾತ ಗೋರಕ್ಷಕರನ್ನು ಕೂಡ ದೋಷಿಗಳೆಂದು ಪರಿಗಣಿಸಿ ಅವರ ಮೇಲೆ ಕ್ರಮ ಜರುಗಿಸುವ ಆದೇಶ ನೀಡಿರುವುದು ಖಂಡನೀಯ
ಪ್ರಧಾನಮಂತ್ರಿಗಳ ಹೇಳಿಕೆಯು ಸರಕಾರಕ್ಕೆ ಆದೇಶವೇ ಆಗಿರುತ್ತದೆ. ಇದರಿಂದ ಅಲ್ಪಸಂಖ್ಯಾತರನ್ನು ಓಲೈಸುವವರಿಗೆ ಹಾಗೂ ತಥಾಕಥಿತ ಧರ್ಮನಿರಪೇಕ್ಷತೆಯ ರಾಜ್ಯ ಸರಕಾರಗಳು ದೇಶಾದ್ಯಂತ ಗೋರಕ್ಷಕರ ಮೇಲೆ ಕ್ರಮ ಕೈಕೊಳ್ಳುವರು ಹಾಗೂ ಗೋಹತ್ಯೆ ಮಾಡುವವರಿಗೆ ಇನ್ನಷ್ಟು ಸವಲತ್ತು ಉಪಲಬ್ಧವಾಗಬಲ್ಲದು. ಇದು ಶ್ರದ್ಧೆ ಹೊಂದಿರುವ ಸಮಸ್ತ ಹಿಂದೂ ಸಮಾಜಕ್ಕೆ ದು:ಖದಾಯಕವಾಗಿದೆ. ಪ್ರಾಣವನ್ನು ಪಣಕ್ಕಿಟ್ಟು ಗೋರಕ್ಷಕರು ಹೋರಾಡುತ್ತಿರುವಾಗ ಅನೇಕ ವೇಳೆ ಗೋವನ್ನು ಕಳ್ಳ ಸಾಗಣೆ ಮಾಡುವವರು ಶಸ್ತ್ರಾಸ್ತ್ರಗಳಿಂದ ಗೋರಕ್ಷಕರ ಮೇಲೆ ಆಕ್ರಮಣವನ್ನು ಕೂಡ ಮಾಡುತ್ತಾರೆ. ಕರ್ನಾಟಕದ ಗೋರಕ್ಷಕರಾದ ಪ್ರಶಾಂತ ಪೂಜಾರಿ ಮತ್ತು ಉತ್ತರ ಪ್ರದೇಶದ ಇಬ್ಬರು ಪೊಲೀಸ ಅಧಿಕಾರಿಗಳ ಅಮಾನುಷರೀತಿಯ ಹತ್ಯೆಯು ಒಂದು ಉದಾಹರಣೆಯಾಗಿದೆ. ಪೊಲೀಸರು ಮತ್ತು ಸರಕಾರದ ಭ್ರಷ್ಟಾಚಾರದ ಸಹಕಾರವಿಲ್ಲದೇ ಲಕ್ಷಾಂತರ ಗೋಮಾತೆಗಳ ಕಳ್ಳಸಾಗಣೆ ಸಾಧ್ಯವೇ ಇಲ್ಲ. ಒಂದು ವೇಳೆ ಪೊಲೀಸರು ಮತ್ತು ಸರಕಾರವು ಗೋಮಾತೆಯ ಕಳ್ಳಸಾಗಣೆಯನ್ನು ಕಟ್ಟುನಿಟ್ಟಾಗಿ ಕಾನೂನನ್ನು ಜಾರಿಗೊಳಿಸಿ ತಡೆಗಟ್ಟಿದಲ್ಲಿ. ಗೋರಕ್ಷಕರಿಗೆ ಪ್ರತ್ಯೇಕವಾಗಿ ಆಂದೋಲನವನ್ನು ಜರುಗಿಸುವ ಅವಶ್ಯಕತೆಯೇ ಉಂಟಾಗುವುದಿಲ್ಲ.
ಆದುದರಿಂದ ಮಾನ್ಯ ಪ್ರಧಾನಮಂತ್ರಿಗಳು ಗೋಹತ್ಯೆಯನ್ನು ಮಾಡುವ ಧರ್ಮಾಂಧರಿಗೆ ಕಟುವಾದ ಎಚ್ಚರಿಕೆಯನ್ನು ನೀಡಬೇಕು, ಗೋರಕ್ಷಕರ ಕುರಿತು ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಗೋಮಾತೆಯ ಕ್ಷಮೆ ಯಾಚಿಸಬೇಕು, ಎಂದು ಆಗ್ರಹಿಸಲಾಯಿತು.

loading...

LEAVE A REPLY

Please enter your comment!
Please enter your name here