ಡಾ.ಅಂಬೇಡ್ಕರ ಜೀವನ ಅನುಭವಾದಾರಿತ ಕಿರುಚಿತ್ರ ಬಿಡುಗಡೆಗೆ ಸಿದ್ಧ

0
50
loading...

ಕಾರವಾರ : ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಚಿಂತನ ಚಿರಂತನದ ನಿರ್ದೇಶನದ ಯುವ ಶಕ್ತಿ ವೇದಿಕೆ ಪ್ರಸ್ತುತ ಪಡಿಸಿದ ಡಾ.ಬಿ.ಆರ್.ಅಂಬೇಡ್ಕರ ಜೀವನ ಅನುಭವಾದಾರಿತ ಕಿರುಚಿತ್ರ ರಾಜನೀತಿ ಬಿಡುಗಡೆಗೆ ಸಿದ್ಧವಾಗಿದೆ.
ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಪ್ರಾಂಶುಪಾಲ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಬೀರಣ್ಣ ನಾಯಕ ಮೊಗಟಾ ಅವರು ಡಾ.ಅಂಬೇಡ್ಕರ ಅವರ ಪಾತ್ರಧಾರಿಯಾಗಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಪತ್ರಕರ್ತ ಅಚ್ಯುತಕುಮಾರ ಯಲ್ಲಾಪುರ ಈ ಕಿರುಚಿತ್ರದ ಸಂಬಾಷಣಾಕಾರರಾಗಿದ್ದು, ಪ್ರಕಾಶರ ಛಾಯಾಗೃಹಣ ಹಾಗೂ ಗುರುಮೂರ್ತಿ ಹೆಗಡೆಯವರ ಸಂಕಲನ ಗಮನ ಸೆಳೆಯುವಂತಿದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳ ಜ್ಞಾನಾಭಿವೃದ್ದಿ ಹಾಗೂ ಅಂಬೇಡ್ಕರ್ ಬಗ್ಗೆ ತಿಳುವಳಿಕೆ ಮೂಡಿಸಲು ಇದನ್ನು ಪ್ರದರ್ಶಿಸಬಹುದಾಗಿದೆ.
ಇನ್ನು ಈ ಕಿರುಚಿತ್ರವನ್ನು ವಿಕ್ಷಿಸಿ ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ವಿನೂತನ ಕಲ್ಪನೆ ಹಾಗೂ ಹೊಸ ರೀತಿಯ ಪ್ರಯತ್ನದೊಂದಿಗೆ ಅದ್ಬುತವಾಗಿ ಚಿತ್ರಿಸಲ್ಪಟ್ಟ ಕಿರುಚಿತ್ರ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಂ.ಎಸ್.ಅಲ್ಲಾಬಕಷ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

loading...

LEAVE A REPLY

Please enter your comment!
Please enter your name here