ತಿರಂಗಾ ಬೈಕ್ ರ್ಯಾಲಿ

0
21
loading...

ಶಿಗ್ಗಾವಿ : ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ದೇಶ ಭಕ್ತರ ಗೌರವ ಹಾಗೂ ಚಲೆಜಾವ ಚಳುವಳಿ ಮಾಡಿ 75 ವರ್ಷಗಳ ನೆನಪುಗಳು ಯುವ ಜನಾಂಗದಲ್ಲಿ ನೆನಪಿಸುವಲ್ಲಿ ತಿರಂಗಾ ಬೈಕ ರ್ಯಾಲಿ ಮಹತ್ವದ್ದಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಪಟ್ಟಂದ ಶರೀಫ ಭವನದ ಬಳಿ ಭಾರತೀಯ ಜನತಾಪಕ್ಷ ತಾಲೂಕ ಘಟಕದವತಿಯಿಂದ ಸೋಮವಾರ ತಿರಂಗಾ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಿತ್ತೂರ ರಾಣಿ ಚೆನ್ನಮ್ಮ ಸಂಗೊಳ್ಳಿ ರಾಯಣ್ಣರಂತ ದೇಶ ಭಕ್ತರಿಗೆ ಲಾಭಕ್ಕಾಗಿ ಮೋಸ ಮಾಡಿದ ಮನೋಸ್ಥಿತಿ ಹೊಂದಿದ ಜನ ಈಗಲೂ ದೇಶದಲ್ಲಿದ್ದಾರೆ. ಅಂತವರಿಗೆ ದೇಶ ಭಕ್ತಿ ಹೊಂದಿದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶಭಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹಲವಾರು ಯೋಜನೆಗಳ ಮುಖಾಂತರ ದೇಶ ಪ್ರಗತಿಯತ್ತ ಸಾಗುತ್ತಿದೆ. ದೇಶದ ಭದ್ರತೆ ಭಲ ಹೊಂದುತ್ತಿದೆ. ಅವರು ಯುವ ಜನಾಂಗದ ಬಗ್ಗೆ ಚಿಂತನೆ ಮಾಡಿ ಕಾರ್ಯಕ್ರಮ ರೂಪಿಸುತ್ತ ದೇಶ ಭಕ್ತಿ ಹೆಚ್ಚಿಸುವ ಹಾಗೂ ದೇಶ ಭಕ್ತರ ಬಗ್ಗೆ ನೆನಪಿಸುವ ಅಂಗವಾಗಿ ದೇಶಾದ್ಯಂತ ತಿರಂಗಾ ಬೈಕ್ ರ್ಯಾಲಿ ರೂಪಿಸಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ದೇಶ ಭಕ್ತಿಯನ್ನು ಯುವ ಜನಾಂಗಕ್ಕೆ ತಿರಂಗಾ ಬೈಕ್ ರ್ಯಾಲಿ ತುಂಬಲಿದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷ ಶಿವರಾಜ ಸಜ್ಜನರ, ಉಪಾಧ್ಯಕ್ಷ ಮಹೇಶ ಸಾಲಿಮಠ, ಶಿಗ್ಗಾಂವ ತಾಲೂಕಾ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಮ್ಯಾಗೇರಿ, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ ಕಾರಡಗಿ, ಮುಕಂಡರಾದ ತಿಪ್ಪಣ್ಣ ಸಾತಣ್ಣವರ, ನಿಂಗಪ್ಪ ಹರಿಜನ, ಬಸವರಾಜ ನಾರಾಯಣಪೂರ, ನರಹರಿ ಕಟ್ಟಿ, ಚನ್ನಪ್ಪ ಬಿಂದಲಿ, ರಾಜು ಸಂಶಿ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಶಿಗ್ಗಾಂವ ಸವಣೂರಿನ ಜಿಪಂ, ತಾಪಂ, ಪುರಸಭೆ, ಗ್ರಾಪಂ ಹಾಲಿ ಹಾಗೂ ಮಾಜಿ ಸದಸ್ಯರು ಪಕ್ಷದ ಎಲ್ಲ ಚುನಾಯಿತ ಪ್ರತಿನಿಧಿಗಳು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು. ರ್ಯಾಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಂಕಾಪೂರ ಪಟ್ಟಣಕ್ಕೆ ತೆರಳಿತು.

loading...

LEAVE A REPLY

Please enter your comment!
Please enter your name here