ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಪೂರಕ: ಚಲವಾದಿ

0
26
loading...

ನಾಲತವಾಡ.24: ಪಟ್ಟಣದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2016-17ನೇ ಸಾಲಿನ ನಾಲತವಾಡ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಂ.ಬಿ.ಚಲವಾದಿ ಮಾತನಾಡಿ ಪ್ರತಿಯೊಂದು ಮಕ್ಕಳಲ್ಲಿ ತನ್ನದೇಯಾದ ಪ್ರತಿಭೆಯು ಹುದುಗಿಕೊಂಡಿದ್ದು ಅಂತಹ ಪ್ರತಿಭೆಗಳನ್ನು ಹೊರ ತರುವ ಕೆಲಸಗಳನ್ನು ಶಿಕ್ಷಕರು ಮಾಡಬೇಕು, ಕೆಲವು ಮಕ್ಕಳಲ್ಲಿ ಅದ್ಭುತ ಪ್ರತಿಭೆಗಳು ಇದ್ದು ನಾಚಿಕೆ ಸ್ವಭಾವದಿಂದ ಮಕ್ಕಳು ವೇದಿಕೆಯಲ್ಲಿ ಹಂಚಿಕೊಳ್ಳಲು ಹಿಂಜೆರೆಯುತ್ತವೆ ಈ ನಿಟ್ಟಿನಲ್ಲಿ ಶಿಕ್ಷಕರು ಅಂತಹ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಬೇಕು ಎಂದರು.
ಪ್ರಾಚಾರ್ಯರಾದ ಕೆ.ಎಸ್.ಮಾರಾಪೂರ ಪ್ರಾಸ್ತಾವೀಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಾಲತವಾಡ ವ್ಯಾಪ್ತಿಯ ಒಟ್ಟು 17 ಪ್ರಾಥಮಿಕ ಹಾಗೂ 3 ಪ್ರೌಢ ಶಾಲೆಯ ಮಕ್ಕಳು ನಾನಾ ಕಾರ್ಯಕ್ರಮಗಳಾದ ಸ್ಪರ್ಧೆಗಳು, ಕಂಠಪಾಠ, ಧಾರ್ಮೀಕ ಪಠಣ, ಲಘು ನಾಟಕ, ಸಂಗೀತ, ಛದ್ಮವೇಷ, ಚಿತ್ರಕಲೆ, ಕಥೆ ಹೇಳುವದು ಹಾಗೂ ಸಾಮೂಹಿಕ ವಿಭಾಗಗಳಲ್ಲಿ ಅಭಿನಯ ಗೀತೆ, ಕ್ಲೈವ್ ಮಾಡಲಿಂಗ್, ಯೋಗಾಸನ, ಜಾನಪದ ನೃತ್ಯ, ದೇಶ ಭಕ್ತಿಗೀತೆ, ಕೋಲಾಟ, ಹಾಗೂ ಕ್ವಿಜ್ ದಂತಹ ಸ್ಪರ್ಧೇಗಳನ್ನು ಏರ್ಪಡಸಲಾಗಿತ್ತು ಮತ್ತು ಇದೇ ವೇಳೆ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಪ.ಪಂ ಅಧ್ಯಕ್ಷರಾದ ಪೃಥ್ವಿರಾಜ ನಾಡಗೌಡ, ಉಪಾಧ್ಯಕ್ಷರಾದ ವೀರೇಶ ಚಲವಾದಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎ.ಜಿ.ದೇಸಾಯಿ, ಶಿಕ್ಷಣ ಸಂಯೋಜಕರಾದ ಆರ್.ಬಿ.ಲಮಾಣಿ, ನಿಲಯಪಾಲಕರಾದ ಎಸ್.ಎಚ್.ಜೈನಾಪೂರ, ಇತರೇ ಶಾಲೆಗಳ ಮುಖ್ಯಶಿಕ್ಷಕರಾದ ಬಿ.ಎಂ.ರಕ್ಕಸಗಿ, ಪಿ.ಎ.ಬೋವೇರ, ಸಿ.ಬಿ.ನಾಯಕರ್, ಎಸ್.ಎಂ.ವಡಗೇರಿ, ಮಲ್ಲಿಕಾರ್ಜುನ ಗಡೇದ, ಎಂ.ವಿ.ನೂಲಿನವರ, ಬಸರಕೋಡ, ಗುರುಮಾತೆ ಎಂ.ವಿ.ಸಜ್ಜನ, ಎಸ್.ಎಲ್.ಗೊಳಸಂಗಿ ಇದ್ದರು.
ಎಂ.ವಿ.ವಸ್ತ್ರದ ನಿರೂಪಿಸಿದರು, ಕೆ.ಎಸ್.ಮಾರಾಪೂರ, ಸ್ವಾಗತಿಸಿದರು, ಟಿ.ಎಂ.ಮಿರ್ಜಿ ಮಾಲಾರ್ಪಣೆ ಕಾರ್ಯಕ್ರಮ ಹಾಗೂ ರಮೇಶಕುಮಾರ ಮೇಗಲಮನಿ ವಂದಿಸಿದರು.

loading...

LEAVE A REPLY

Please enter your comment!
Please enter your name here