ಬೀದಿಗಳಲ್ಲಿ ಬಿಡಾಡಿ ದನಗಳು, ಹಂದಿ-ನಾಯಿಗಳ ಹಾವಳಿಯನ್ನು ತಡೆಯುವಂತೆ

0
19
loading...

ಗೋಕಾಕ 6: ನಗರದ ಮಾರುಕಟ್ಟೆ ಹಾಗೂ ಪ್ರಮುಖ ಬೀದಿಗಳಲ್ಲಿ ಬಿಡಾಡಿ ದನಗಳು, ಹಂದಿ-ನಾಯಿಗಳ ಹಾವಳಿಯನ್ನು ತಡೆಯುವಂತೆ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ನಗರಸಭೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ನಗರಸಭೆ ಸಭಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನೂದ್ದೇಶಿಸಿ ಮಾತನಾಡುತ್ತಾ ನಗರದಲ್ಲಿ ಬೀದಿಗಳಲ್ಲಿ ಬಿಡಾಡಿ ದನಗಳು, ಹಂದಿಗಳು ಹಾಗೂ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಗರಕ್ಕೆ ಹಳ್ಳಿಗಳಿಂದ ಬರುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದರು.
ನಗರಸಭೆ ಪೌರಾಯುಕ್ತ ವ್ಹಿ ಸಿ ಚಿನ್ನಪೌಡರ ಮಾತನಾಡಿ 2012ರಲ್ಲಿ ನಗರದ ಮಾರುಕಟ್ಟೆಯಲ್ಲಿ ಆಕಳು ಹಾಯ್ದು ವ್ಯಕ್ತಿಯೊರ್ವ ಸಾವನ್ನಪ್ಪಿದ ಘಟನೆ ಹಿನ್ನಲೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಪರಿಹಾರ ನೀಡುವಂತೆ ಕೋರ್ಟ ಆದೇಶಿ ನೀಡಿದ್ದು. ಈ ಘಟನೆಯ ಪ್ರಯುಕ್ತ ಸಾರ್ವಜನಿಕರ ಹಿತದೃಷ್ಟಿಯಿಂದ ನಗರದಲ್ಲಿ ಒಡಾಡುವ ಆಕಳು, ಎತ್ತುಗಳ ಸಂಬಂಧಿಸಿದ ಮಾಲಿಕರು ಈ ಕೂಡಲೇ ತಮ್ಮ ಮನೆಗಳಲ್ಲಿ ಜಾನುವಾರಗಳನ್ನು ಹಿಡಿದಿಟ್ಟುಕೊಳ್ಳಬೇಕು. ತಪ್ಪಿದ್ದಲ್ಲಿ ನಗರಸಭೆ, ಅರಣ್ಯ ಇಲಾಖೆ, ಪಶು ಚಿಕಿತ್ಸಾಲಯದ ವತಿಯಿಂದ ಕಾರ್ಯಾಚರಣೆ ಮಾಡಿ ಜಾನುವಾರುಗಳು, ಹಂದಿ, ನಾಯಿಗಳನ್ನು ಹಿಡಿದು ಜಾನುವಾರಗಳನ್ನು ಗೋಶಾಲೆ ಮತ್ತು ಹಂದಿ ನಾಯಿಗಳನ್ನು ಅರಣ್ಯದಲ್ಲಿ ಬಿಡಲಾಗುವದು ಎಂದರು.
ಕಾರ್ಯಾಚರಣೆಯ ಸಂದರ್ಭದಲ್ಲಿ ನಗರಸಭೆಯ ಸದಸ್ಯರು ಹಾಗೂ ನಗರದ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎಸ್ ಎ ಕೋತವಾಲ, ಪರಶುರಾಮ ಭಗತ, ಭೀಮಶಿ ಭರಮಣ್ಣವರ, ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲ, ಗಿರೀಶ ಖೋತ, ಪರಿಸರ ಅಭಿಯಂತರ ಗಜಾಕೋಶ ಸೇರಿದಂತೆ ಇನ್ನೂಳಿದ ನಗರಸಭೆಯ ಸದಸ್ಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here