ಮಹಾದಾಯಿ ವಿಷಯದಲ್ಲಿ ರಾಜಕೀಯ ಮಾಡುತ್ತಿರುವದು ದುರ್ದೈವ

0
16
loading...

ಗೋಕಾಕ 22: ದೇಶದಲ್ಲಿ ಹಲವಾರು, ಭಾಷೆ, ಜಾತಿ, ಸಂಸ್ಕøತಿ ಬೇರೆ ಬೇರೆಯಾಗಿದ್ದರೂ ಹಿರಿಯರ ಮಾರ್ಗದರ್ಶನದಂತೆ ಜನಸಾಮಾನ್ಯರು ಪರಸ್ಪರ ಪ್ರೀತಿ, ಸೌಹಾರ್ದತೆಯಿಂದ ಬಾಳುತ್ತಿದ್ದಾರೆಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಸೋಮವಾರದಂದು ತಾಲೂಕಿನ ಖನಗಾಂವ ಗ್ರಾಮದಲ್ಲಿ ಸಮಸ್ತ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಕೋಮುವಾದಿಗಳ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲಾಗದೆ ಇಂದು ಕೋಮುವಾದಿಗಳ ಬಗ್ಗೆ ಮಾತನಾಡುತ್ತಿರುವದು ಹಾಸ್ಯಾಸ್ಪದ ಎಂದು ಹೇಳಿದ ಸಚಿವ ರಮೇಶ ಜಾರಕಿಹೊಳಿ ಅವರು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಆಗಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಮೌನವಾಗಿದ್ದು ಇಂದು ಮಹಾದಾಯಿ ವಿಷಯದಲ್ಲಿ ರಾಜಕೀಯ ಮಾಡುತ್ತಿರುವದು ದುರ್ದೈವ ಎಂದರು.
ಸದೈವ ಕುಂದರನಾಡು ಹಾಗೂ ಖನಗಾಂವ ಭಾಗ ಕಾಂಗ್ರೆಸ ಪಕ್ಷದ ಭದ್ರಕೋಟೆಯಾಗಿದ್ದು ಇಂದು ಜನಸಾಮಾನ್ಯರ ಆಶೀರ್ವಾದದಿಂದ ಸಚಿವನಾಗಿ ರಾಜ್ಯದಾದ್ಯಂತ ಗುರುತಿಸಿಕೊಂಡಿದ್ದೇನೆ. ಈ ಮಹತ್ತರ ಜವಾಬ್ದಾರಿ ನಿರ್ವಹಿಸಲು ಜನರ ಸಹಕಾರ ಮತ್ತು ಆಶೀರ್ವಾದ ಅತ್ಯಂತ ಅವಶ್ಯಕ ಎಂದೂ ರಮೇಶ ಜಾರಕಿಹೊಳಿ ತಿಳಿಸಿದರು.
ನಬಾಪೂರದಿಂದ ಖನ್ನಮ್ಮ ದೇವಸ್ಥಾನವರೆಗಿನ ರಸ್ತೆ, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ದೇವೇಗೌಡನಹಟ್ಟಿ, ಖನಗಾಂವ, ಗಿಳಿ ಹೊಸೂರ ಗ್ರಾಮಗಳಲ್ಲಿ ಕಾಂಕ್ರೀಟ ರಸ್ತೆ, ಆಂಜನೇಯ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣ, ಉದ್ಯೋಗ ಖಾತ್ರಿ ಯೋಜನೆಯಡಿ ಸಿಸಿ ರಸ್ತೆ, ಅಂಗನವಾಡಿ ಕೇಂದ್ರ ನಿರ್ಮಾಣ ಸೇರಿದಂತೆ ಒಂದೂವರೆ ಕೋಟಿ ರೂ. ವೆಚ್ಚದ ಕಾಮಗಾರಿಗಳ ಮಂಜೂರಾತಿ ಅಂತಿಮ ಹಂತದಲ್ಲಿದ್ದು ಶೀಘ್ರ ಕಾರ್ಯ ಆರಂಭಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ಗೋಕಾಕ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸಲಾಗುತ್ತಿದ್ದು ಕೆಲ ರಾಜಕಾರಣಿಗಳು ಅರಾಜಕತೆ ನಿರ್ಮಾಣ ಮಾಡಲು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದು ಕ್ಷೇತ್ರದ ಜನತೆ ಅವುಗಳ ಕಡೆಗೆ ಗಮನ ನೀಡದೆ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಬೇಕೆಂದು ಸಚಿವ ರಮೇಶ ಜಾರಕಿಹೊಳಿ ಮನವಿ ಮಾಡಿಕೊಂಡರು.
ವೇದಿಕೆ ಮೇಲೆ ಜಿ.ಪಂ. ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಬಿ ಡಿ ಪಾಟೀಲ, ನಿಂಗಪ್ಪ ಅರಕೇರಿ, ತಾ.ಪಂ. ಸದಸ್ಯೆ ಶ್ರೀಮತಿ ಶಿವಕ್ಕ ಪೂಜಾರಿ, ಗ್ರಾ ಪಂ. ಅಧ್ಯಕ್ಷೆ ಶ್ರೀಮತಿ ಯಲ್ಲವ್ವ ಪೂಜಾರಿ, ಸಿದಗೌಡ ಪಾಟೀಲ, ನಿಂಗಪ್ಪ ಗಡಜನವರ, ಬಸಪ್ಪ ಅಮ್ಮಣಗಿ, ಮಲ್ಲಪ್ಪ ಪಾಟೀಲ, ನಿಂಗಪ್ಪ ಬುಳ್ಳಿ, ಶಿವಪ್ಪ ಚಿಕ್ಕಲದಿನ್ನಿ, ಸತ್ತೆಪ್ಪ ಪೂಜಾರಿ, ಜಿ ಆರ್ ಮಾಳಗಿ, ಡಿಡಿಪಿಐ ಗಜಾನನ ಮನ್ನಿಕೇರಿ, ರಿದ್ಧಿ-ಸಿದ್ಧಿ ಕಾರಖಾನೆಯ ನಾಗೇಶ ಶರ್ಮಾ, ಪ್ರಕಾಶ ಅವಟೆ ಇದ್ದರು.
ಈ ಸಂದರ್ಭದಲ್ಲಿ ತಾಲೂಕಾ ಅಧಿಕಾರಿಗಳಾದ ಎಮ್ ಕೆ ಪಾತ್ರೋಟ, ಎ ಎಸ್ ಜೋಡಗೇರಿ, ಜಿ ಬಿ ಬಳಗಾರ, ಕಿರಣ ಸಣ್ಣಕ್ಕಿ, ಎಸ್ ಪಿ ವರಾಳೆ, ಎ ಬಿ ಹೊನ್ನಾವರ, ಎಮ್ ಎಮ್ ನದಾಫ, ಎಸ್ ವಿ ಕಲ್ಲಪ್ಪನವರ ಇದ್ದರು.

loading...

LEAVE A REPLY

Please enter your comment!
Please enter your name here