ಮೀಸಲಾತಿ ಪಡೆಯುವುದು ನಮ್ಮೆಲ್ಲರ ಹಕ್ಕು ಅದು ಅಂಬೇಡ್ಕರ ಕೊಟ್ಟ ಕೊಡುಗೆ

0
23
loading...

31-Harugeri photo-01ಹಾರೂಗೇರಿ 31: ಪರಿಶಿಷ್ಟ ಪಂಗಡದ ಜನಾಂಗಕ್ಕೆ ಈಗಿರುವ ಮೂರು ಪ್ರತಿಶತ ಮೀಸಲಾತಿಯನ್ನು ಜನಸಂಖ್ಯೆ ಅನುಗುಣವಾಗಿ ಏಳು ಪ್ರತಿಶತಕ್ಕೆ ಮೀಸಲಾತಿಯನ್ನು ವಿಸ್ತರಿಸಿಕೊಂಡು ಡಾ.ಅಂಬೇಡ್ಕರರವರು ಕೊಟ್ಟ ಮೀಸಲಾತಿವೆಂಬ ಕೊಡುಗೆಯನ್ನು ಪಡೆಯುವುದು ನಮ್ಮೆಲ್ಲರಹಕ್ಕು ಎಂದು ಶ್ರೀವಾಲ್ಮೀಕಿ ಶಿಕ್ಷಣ ಸಂಸ್ಥೆ ಅಧ್ಯಕ್ಷ್ಯ ರಾಮಣ್ಣಾ ಗಸ್ತಿ ಹೇಳಿದರು.
ಪಟ್ಟಣದ ಶ್ರೀವಾಲ್ಮೀಕಿ ಶಿಕ್ಷಣ ಸಂಸ್ಥೆಯ ಬಿಪಿ,ಇಡಿ ಕಾಲೇಜು ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘ,(ರಿ) ಬೆಂಗಳೂರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ನೌಕರರ ಕಾರ್ಯಾಗಾರ ವತಿಯಿಂದ ಆಯೋಜಿದ್ದ ಪ.ಪಂ ಸಮುದಾಯದ ಮೀಸಲಾತಿ ಹಾಗೂ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮೀಸಲಾತಿಯಲ್ಲಿ ಪರಿಶಿಷ್ಟ ಪಂಗಡದ ಜನರಿಗೆ ಆಗುವ ಅನ್ಯಾಯದ ಬಗ್ಗೆ ಮೊದಲು ಜಾಗೃತಿ ಮೂಡಿಸುವುದು. ಇಂದಿನ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ, ಮಗು ಅಳದೇ ಇದ್ದರೆ ತಾಯಿ ಹೇಗೆ ಹಾಲು ನೀಡಲ್ಲೋ ಹಾಗೇ ನಾವು ಮೀಸಲಾತಿ ಎಂಬ ನಮ್ಮ ಹಕ್ಕನ್ನು ನಾವು ಕೇಳದಿದ್ದರೆ ಸರಕಾರವು ನೀಡಿಲ್ಲ, ಆದ್ದರಿಂದ ಸರಕಾರ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಿದರೆ ಸಮುದಾಯಕ್ಕೆ ಅನುಕೂಲವಾಗುತ್ತದೆ ಎಂದು ರಾಮಣ್ಣಾ ಗಸ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಾಗಾರದ ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ನಿಂಗಪ್ಪ ಮಾದನ್ನವರ ಮಾತನಾಡಿ ಮೀಸಲಾತಿ ಎಂಬುದು ಸಮುದ್ರದ ಆಳವಿದ್ದಂತೆ. ಹಿಂದುಳಿದ ಹಾಗೂ ದಲಿತ ಜನಾಂಗಕ್ಕೆ ಆಗುತ್ತಿದ್ದ ಅವಮಾನ ಅಸಮಾನತೆ ಹೋಗಲಾಡಿಸಲು ಡಾ.ಬಿ.ಆರ್ ಅಂಬೇಡ್ಕರರವರು ಸಂವಿಧಾನ ಗ್ರಂಥ ರಚಿಸಿದ್ದು ಮೀಸಲಾತಿ ಒದಿಸಿದ್ದಾರೆ. ರಾಜ್ಯದಲ್ಲಿ 1961ರಲ್ಲಿ 0.81 ಪ್ರತಿಶತ ಜನಸಂಖ್ಯೆ ಇದ್ದಾಗ ಇದ್ದ ಮೂರು ಪ್ರತಿಶತ ಮೀಸಲಾತಿ 2011ರ ಜನಗಣತಿಯ ಆಧಾರದ ಮೇಲೆ ಇಂದು 6.95 ಜನಸಂಖ್ಯೆ ಹೊಂದಿದೆ, ಆದರೂ ಕೂಡಾ ಸರಕಾರ ಪ.ಪಂ ಜನಾಂಗಕ್ಕೆ ಕೇವಲ ಮೂರು ಪ್ರತಿಶತ ಮೀಸಲಾತಿ ನೀಡುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ, ಶಾಸನ ರೂಪಿಸುವ ರಾಜಕಾರಣಿಗಳು ಸ್ವಾರ್ಥಿಯಾಗಿದ್ದು, ನಮ್ಮ ಹಕ್ಕು ಆದ ಮೀಸಲಾತಿಯನ್ನು ಪಡೆಯಲು ಪ್ರತಿಯೊಬ್ಬರು ಆತ್ಮ ವಿಶ್ವಾಸದಿಂದ ಬಲಿಷ್ಟರಾಗಬೇಕಿದೆ ಎಂದು ತಿಳಿಸಿದರು.
ಡಾ.ರತ್ನಾ ಬಾಳಪ್ಪನವರ ಮಾತನಾಡಿ ಯಾವಾಗ ಮನುಷ್ಯನಿಗೆ ಸತ್ವಃ ಸಮಸ್ಯೆಗಳು ಉಂಟಾಗುತ್ತದೆಯೋ ಆಗ ಆವನು ಜಾಗೃತನಾಗುತ್ತಾನೆ, ಇದೀಗ ನೌಕರರಿಗೆ ಸಮಸ್ಯೆಗೆಳು ಆಗುತ್ತಾ ಇವೆ, ಮೀಸಲಾತಿ ಒಂದು ಬಹುದೊಡ್ಡ ಸಮಸ್ಯೆಯಾಗಿದೆ. ಹಿಂದಿನ ಹೆಜ್ಜೆಗಳನ್ನು ಅರಿಯಲಾರದೇ ಮುಂದಿನ ಹೆಜ್ಜೆಗಳು ತಿಳಿಯುವುದಿಲ್ಲ ಎಂಬಂತೆ, ಪ್ರತಿಯೊಬ್ಬರು ಇಂದು ಚಿಂತನೆ ಮಾಡಬೇಕಿದೆ, ಯಾವ ದೇಶದಲ್ಲಿ ಯುವಕರು ಹೆಚ್ಚಿದ್ದಾರೋ ಆ ದೇಶ ಪ್ರಬಲ ರಾಷ್ಟ್ರವೆಂದು ಗುರುತಿಸುತ್ತಾರೆ. ಆ ನಿಟ್ಟಿನಲ್ಲಿ ಯುವಕರಿಗೆ ಒಳ್ಳೆಯ ಮಾರ್ಗದರ್ಶನ ಕೊಟ್ಟಿದ್ದೇ ಆದರೆ ಅವರು ಒಳ್ಳೆಯ ಶಿಕ್ಷಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮೀಸಲಾತಿಯನ್ನು ಹೊರತು ಪಡಿಸಿ ಇಂದು ನಾವು ಸಾಮಾಜಿಕವಾಗಿ ಚಿಂತನೆಯನ್ನು ಮಾಡಬೇಕಾಗಿದೆ, ಇಲ್ಲಿಯವರೆಗೆ ತೋಳದ ಬಲದ ಪ್ರದರ್ಶನ ಮಾಡುತ್ತಾ ಬಂದಿದ್ದೆವೆ, ಹೊರೆತು ಒಂದಿಷ್ಟ್ಟು ಬುದ್ದಿಯ ಬಲವನ್ನು ಪ್ರದರ್ಶನ ಮಾಡಬೇಕಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಒಳ್ಳೆಯ ಮಾನವನ್ನಾಗಿ ನಿರ್ಮಾಣ ಮಾಡಿದರೆ ವಾಲ್ಮೀಕಿ ಜನಾಂಗ ಪ್ರಗತಿ ಪಥದತ್ತ ಸಾಗಲು ಸಾಧ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ರಾಜ್ಯಸಹ ಕಾರ್ಯದರ್ಶಿ ಈಶ್ವರ ಕುರಬಗಟ್ಟಿ, ಬೆಳಗಾವಿಯ ಎಇಇ ಎಂ,ಎಂ ಕೊಮನ್ನವರ, ಮಾನವ ಬಂಧುತ್ವ ವೇದಿಕೆಯ ರಾಜ್ಯಸಂಚಾಲಕ ರವೀಂದ್ರ ನಾಯ್ಕರ, ಜಿಪಂ ಸದಸ್ಯ ಶ್ರೀಶೈಲ ಗಸ್ತಿ, ರಾಜೇಂದ್ರ ಪಂಗಣ್ಣವರ, ಉಪನ್ಯಾಸಕಿ, ರತ್ನಾ ಬಾಳಪ್ಪನವರ, ರವಿ ಗಸ್ತಿ, ಪ್ರೋ.ಹಣಮಂತ ನಾಯಿಕ, ರವೀಂದ್ರ ಬಂಗಾರೆಪ್ಪನವರ, ಎಲ್.ಎಲ್ ನಾಯಿಕ, ಭೀಮಪ್ಪ ತಳವಾರ, ಪಿ.ಬಿ ಕಾಲವಾಡ, ರುದ್ರಪ್ಪ ಸನ್ನಿ, ಆರ್.ಎಚ್ ಶಿವಳ್ಳಿ, ಬಿ.ಆರ್ ಬಿಸನಾಳ, ಎಂ.ಬಿ ಹುಕ್ಕೇರಿ, ಈರಣ್ಣ ಗಸ್ತಿ, ಮಹಾದೇವ ಮಾಂಗನ್ನವರ, ಗೋವಿಂದ ತಳವಾರ, ಮಹಾದೇವ ಬಿಸಲನಾಯಿಕ, ಪರಶುರಾಮ ಸರಸ್ವತಿ, ವೈ,ಎಸ್ ನಾಯಿಕ, ಬಾಳಪ್ಪ ಗಸ್ತಿ, ರಾಮು ಪಾಟೀಲ, ಹಣಮಂತ ನಾಯಿಕ, ಬಿ.ಎಂ ಕೋಟ್ಯಾಗೋಳ, ಸಿ.ಎಸ್ ಪೋಲಿಸ, ಎಸ್.ಬಿ ಕಣಗಲಿ, ಪ್ರೋ.ಪ್ರವೀಣ ಶಿವಳ್ಳಿ, ಗಿರೀಶ ಬಿಸಲನಾಯಿಕ, ಎಚ್,ಎಸ್ ಕಂಟೆಪ್ಪಗೋಳ, ರಾಜೇಂದ್ರ ಸನದಿ, ಎಸ್,ಎಲ್ ನಾಯಿಕ, ಬಿ.ಎಂ ನಾಯಿಕ, ಭರಮಣ್ಣಾ ಗೌಡಪ್ಪಗೋಳ, ವಸಂತ ದೇಸಾಯಿ, ಬಿ.ಎನ್ ಹಾದಿಮನಿ ಸೇರಿದಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲೂಕುಗಳ ಫದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಚಿಕ್ಕೋಡಿ ಜಿಲ್ಲಾ ಪ.ಪಂ ನೌಕರರ ಸಂಘದ ಅಧ್ಯಕ್ಷ್ಯ ಶಂಕರ ಜಾಲಿಹಾಳ ಸ್ವಾಗತಿಸಿದರು, ಉಪಾಧ್ಯಕ್ಷ್ಯ ಎಂ.ಎಸ್ ನಾಯ್ಕಪ್ಪಗೋಳ ನಿರೂಪಿಸಿದರು. ತಾಲೂಕಾ ಪ್ರಧಾನ ಕಾರ್ಯದರ್ಶಿ ಬಿ.ಎನ್ ಹಾದಿಮನಿ ವಂದಿಸಿದರು.

loading...

LEAVE A REPLY

Please enter your comment!
Please enter your name here