ಮುಗಿಲು ಮುಟ್ಟಿದ ಹೆತ್ತ ತಾಯಿಯ ಆಕ್ರಂದನ

0
21
loading...

ಸಂಕೇಶ್ವರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ
ಚಿಕ್ಕೋಡಿ 18: ಸ್ವಾತಂತ್ರ್ಯ ದಿನದಂದು ಶ್ರೀನಗರದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ವಿದ್ಯುತ್ ತಂತಿ ಸ್ಪರ್ಶದಿಂದ ಜೀವ ಕಳೆದುಕೊಂಡ ಸಂಕೇಶ್ವರದ ವೀರಯೋಧ ಸಾಗರ ಬಸವರಾಜ ಕುಂಬಾರ(24) ಅವರ ಅಂತ್ಯಕ್ರಿಯೆ ಭಾರಿ ಜನಸ್ತೋಮದ ಮಧ್ಯೆ ಸಕಲ ಸರಕಾರಿ ಗೌರವಗಳೊಂದಿಗೆ ವಿಧಿ ವಿಧಾನಪೂರ್ವಕವಾಗಿ ಜರುಗಿತು.
ರಾಜಸ್ಥಾನ ರೆಜಿಮೆಂಟನ್ ನ್ಯಾಶನಲ್ ರೈಫಲ್ಸ ಪೋರ್ಸಗೆ ಕೋಲಾರದ ಸೇನಾ ಭರ್ತಿ ರ್ಯಾಲಿ ಮೂಲಕ 2012ರಲ್ಲಿ ಸಾಗರ ಸೇನೆ ಸೇರಿದ್ದರು. ದೇಶದ ಗಡಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನದಂದು ಧ್ವಜ ಇಳಿಸುವಾಗ ವಿದ್ಯುತ್ ತಂತಿಗೆ ಧ್ವಜ ಕಂಬ ತಗುಲಿ ಸಾಗರ ಕುಂಬಾರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಈ ವಿಷಯವನ್ನು ಮರುದಿನ ಸಂಕೇಶ್ವರದಲ್ಲಿರುವ ಮೃತ ಸಾಗರ ಕುಟುಂಬದವರಿಗೆ ಸೇನಾ ಮೂಲಗಳು ತಿಳಿಸಿದ್ದವು.
ಹಿಮಪಾತದಿಂದಾಗಿ ಯೋಧನ ಶವ ತಲುಪಿಸಲು ವಿಳಂಬವಾಗಲಿದೆ ಎಂಬ ಬಗ್ಗೆಯೂ ಸೇನಾ ಮೂಲಗಳು ಸ್ಪಷ್ಟಪಡಿಸಿದ್ದವು. ಗುರುವಾರ ಶ್ರೀನಗರದಿಂದ ಗೋವಾ ವಿಮಾನ ನಿಲ್ದಾಣಕ್ಕೆÀ ಇಂದು ಮುಂಜಾನೆ ಶವ ಪೆಟ್ಟಿಗೆ ತಲುಪಿತು. ಅಲ್ಲಿಂದ ಮುಂಜಾನೆ 10 ಗಂಟೆಗೆ ಪಟ್ಟಣಕ್ಕೆ ಮೃತ ಯೋಧನ ಪಾರ್ಥಿವ ಶರೀರ ಆಗಮಿಸಿತು.
ಯೋಧನ ಪಾರ್ಥಿವ ಶರೀರದ ದರ್ಶನ ಪಡೆಯುವ ಸಲುವಾಗಿ ಪಟ್ಟಣದ ಮಹಾಲಕ್ಷ್ಮೀ ಮಂದಿರದ ಎದುರಿಗೆ ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕ ದರ್ಶನಕ್ಕೆ ಪೂರ್ವ ತಯಾರಿ ಮಾಡಿಕೊಡಲಾಗಿತ್ತು. ಮೃತ ಯೋಧನ ಅತ್ಯಸಂಸ್ಕಾರ ನಿಮಿತ್ಯ ಪಟ್ಟಣದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಅಲ್ಲದೇ ಶುಕ್ರವಾರ ಸಂತೆ ದಿನವಾದರೂ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಮೃತ ಯೋಧನಿಗೆ ಗೌರವ ಸೂಚಿಸಲಾಯಿತು.
ಗಂಡ ಅಗಲಿದ ನೆನಪು ಮಾಸುವಷ್ಟರಲ್ಲಿ ಹೆತ್ತ ಮಗನ ಕಳೆದುಕೊಂಡಿದ್ದು ಬರಸಿಡೀಲು ಅಪ್ಪಳಿಸಿದಂತಾಗಿತ್ತು. ವಿರಯೋಧನ ಶರೀರ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ತಾಯಿ ಮಹಾದೇವಿ ಅವರಿಗೆ ಮುಗಿಲೇ ಹರಿದುಬಿದ್ದ ಭಾವ ಮೂಡಿತು. ಇದರಿಂದ ಕೆಲಹೊತ್ತಿನಲ್ಲಿಯೇ ಸಾಗರ ತಾಯಿ ಅಸ್ವಸ್ಥರಾಗಿ ಕುಸಿದರು. ಕೂಡಲೇ ಅವರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಯಿತು. ಇನ್ನೂ ತಂಗಿಯರಾದ ಕಾವೇರಿ, ಸುರೇಖಾ ಅವರಿಗೆ ಅಣ್ಣ ಇನ್ನೂ ನಮಗೆ ನೆನಪು ಮಾತ್ರ ಎಂಬ ಭಾವನೆ ಕಾಡುತಿತ್ತು.
ಮೃತ ಯೋಧನ ಅಂತಿಮ ದರ್ಶನ ಪಡೆಯಲು ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಸಂಸದ ಪ್ರಕಾಶ ಹುಕ್ಕೇರಿ, ಬಿಡಿಸಿಸಿ ಬ್ಯಾಂಕ ಆಧ್ಯಕ್ಷ ರಮೇಶ ಕತ್ತಿ, ಹಿರಾಶುಗರ ಚೇಅರಮನ್ ಶಿವನಾಯಿಕ ನಾಯಿಕ, ರಾಜೇಂದ್ರ ಪಾಟೀಲ, ಅಪ್ಪಾಸಾಹೇಬ ಶಿರಕೋಳಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.
ಶಾಲಾ ಕಾಲೇಜುಗಳಿಗೆ ರಜೆಯಿದ್ದರೂ ಸಹ ವಿದ್ಯಾರ್ಥಿಗಳು ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ಸಹ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ವೀರಮರಣವನ್ನಪ್ಪಿದ ಸಾಗರ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ತಾಲೂಕಾಡಳಿತ, ಪೋಲಿಸರು, ಪುರಸಭೆ, ಸ್ವಯಂ ಸೇವಾ ಕಾರ್ಯಕರ್ತರು, ಸ್ಥಳೀಯರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟರು.
ನಂತರ ಮಹಾಲಕ್ಷ್ಮೀ ಮಂದಿರದಿಂದ ಗಾಂಧಿಚೌಕ ಮಾರ್ಗವಾಗಿ ಆಝಾದ ರಸ್ತೆ, ಸುಭಾಷ ರೋಡ, ಸರ್ಕಲ್ ಮೂಲಕ ಸಾಗಿಬಂದ ಮೃತ ಯೋಧನ ಮೆರವಣಿಗೆಯಲ್ಲಿ ಹೇ ಸಾಗರ ಅಮರ ರಹೇ.. ಎಂಬ ಘೋಷವಾಕ್ಯ ಕೇಳಿ ಬರುತಿತ್ತು. ಅಲ್ಲದೇ ದಾರಿಯುದ್ದಕ್ಕೂ ಪುಷ್ಪ ಹೂಗುಚ್ಛ ಅರ್ಪಿಸುವದರೊಂದಿಗೆ ಸಾಗರ ಅಂತಿಮ ದರ್ಶನ ಪಡೆದರು.
ಪಟ್ಟಣದ ಹೊರವಲದಯಲ್ಲಿರುವ ಸ್ಮಶಾನ ಭೂಮಿಯಲ್ಲಿ ಯೋಧರ ಅಶ್ರುತರ್ಪಣದ ಜೊತೆಗೆ ಸಾಯಂಕಾಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಮೃತ ಸಾಗರ ಹಿಂದೂ ಸಮುದಾಯಕ್ಕೆ ಸೇರಿದ್ದರಿಂದ ಗುಂಡಿ ತೆಗೆದು ಧರ್ಮದ ಶವ ಸಂಸ್ಕಾರ ವಿಧಿ ವಿಧಾನಗಳನ್ನು ಪೂರೈಸಲಾಯಿತು.
ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ರವೀಂದ್ರ ಗಡದೆ, ಬೆಳಗಾವಿ ಉಪವಿಭಾಗಾಧಿಕಾರಿ ರಾಜಶ್ರೀ ಜೈನಾಪೂರೆ, ತಹಶೀಲ್ದಾರ ನಾಗರಾಜ ಪಾಟೀಲ, ಉಪತಹಶೀಲ್ದಾರ ಪಿ.ಎಂ. ಕಲ್ಲೋಳಿ, ಕಂದಾಯ ಅಧಿಕಾರಿ ಎಂ.ಎಂ. ಹಿರೇಮಠ, ವಿಜಯ ಸಂಕಪ್ಪ, ಪಿಎಸ್‍ಐ ಎಂ.ಎಂ. ಮುಲ್ಲಾ ಸೂಕ್ತ ಪೊಲೀಸ ಬಂದೋಬಸ್ತ ಒದಗಿಸಿದ್ದರು.
ಪ್ರಮುಖ ಅಂಶಗಳು:
• ಅಗಸ್ಟ 15ರಂದು ಯೋಧ ಸಾಗರ ವೀರಮರಣ
• ಶ್ರೀನಗರದಲ್ಲಿ ಧ್ವಜ ಕಂಬಕ್ಕೆ ವಿದ್ಯುತ್ ತಂತಿ ಸ್ಪರ್ಶದಿಂದ ಸಾವು
• ಗೋವಾ ಮಾರ್ಗವಾಗಿ ಶುಕ್ರವಾರ ಸಂಕೇಶ್ವರಕ್ಕೆ ಪಾರ್ಥಿವ ಶರೀರ
• ಸಾರ್ವಜನಿಕ ದರ್ಶನಕ್ಕೆ ಜಿಲ್ಲಾಡಳಿತದ ವ್ಯವಸ್ಥೆ
• ಮಗನ ಶವ ಕಂಡು ಕುಸಿದುಬಿದ್ದ ತಾಯಿ
• Àಅಣ್ಣ ಅಂತ ಯಾರನ್ ಕರೀಲಿ ಎಂದು ಗೋಳಾಡಿದ ತಂಗಿಯರು
• ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
• ಸೇನಾಪಡೆಯಿಂದ ಅಶ್ರುತರ್ಪಣದ ಮೂಲಕ ಕೊನೆ ಗೌರವ
• ಯೋಧನ ಅತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿ

loading...

LEAVE A REPLY

Please enter your comment!
Please enter your name here