ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

0
16
loading...

ಮುಂಡಗೋಡ : ಪ.ಪಂ ವ್ಯಾಪ್ತಿಯ ಆನಂದನಗರ ಬಡಾವಣೆ ವಾರ್ಡ ನಂ 4 ರಲ್ಲಿ ಕೆಲ ಭಾಗವನ್ನು ಮೂಲಭೂತ ಸೌಲಭ್ಯದಿಂದ ವಂಚಿತಗೊಳಿಸಲಾಗಿದೆ ಎಂದು ಆರೋಪಿಸಿದ ಆನಂದನಗರ ಬಡಾವಣೆಯ ಜನರು ಶುಕ್ರವಾರ ಪಟ್ಟಣ ಪಂಚಾಯತ ಎದುರು ಪ್ರತಿಭಟನೆ ನಡೆಸುವ ಮೂಲಕ ತಕ್ಷಣ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಪ.ಪಂ ಹಾಗೂ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ಇಲ್ಲಿಯ ಪ.ಪಂ ಕಛೇರಿ ಎದುರು ಆಗಮಿಸಿದ ಜನರು ವಾರ್ಡನ ಒಂದು ಭಾಗವನ್ನು ನಿರ್ಲಕ್ಷಿಸಿದ ವಾರ್ಡ ಸದಸ್ಯ ಹಾಗೂ ಪ.ಪಂ ಆಡಳಿತದ ವಿರುದ್ದ ಘೋಷಣೆ ಕೂಗಿದರು ಬಳಿಕ ಮನವಿ ಅರ್ಪಿಸಿದರು. ಕಳೆದ ಹಲವು ವರ್ಷಗಳಿಂದ ಈ ಬಡಾವಣೆಯಲ್ಲಿ ರಸ್ತೆ, ಗಟಾರ, ಸೋಲಾರ ದೀಪ, ಬೀದಿ ದೀಪ ಸೇರಿದಂತೆ ಯಾವುದೇ ಸೌಲಭ್ಯಗಳು ಇಲ್ಲಿ ಒದಗಿಸಲಾಗಿಲ್ಲ. ಪ.ಪಂ ಗೆ ಕೋಟಿ ಕೋಟ ಹಣ ಬಂದರೂ ಈ ಭಾಗವನ್ನು ನಿರಂತರವಾಗಿ ನಿರ್ಲಕ್ಷಿಸುತ್ತಾ ಬರಲಾಗಿದೆ. ತಾಲೂಕಾ ಕ್ರೀಡಾಂಗಣದಿಂದ ಪ್ರಾರಂಭವಾಗುವ ಆನಂದನಗರ ಮುಖ್ಯ ರಸ್ತೆ ಇದುವರೆಗೂ ದುರಸ್ಥಿಗೊಂಡಿಲ್ಲ. ಆದರೆ ವಾರ್ಡ ನ ಕೆಲ ಭಾಗದಲ್ಲಿ ಮಾತ್ರ ನಿರಂತರವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಇದುವರೆಗೆ ಪ.ಪಂ ವತಿಯಿಂದ ಕೈಗೊಳ್ಳಲಾಗಿರುವ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಪ.ಪಂ ಅಧಿಕಾರಿಗಳು ಖುದ್ದು ಪರಿಶೀಲಿಸಬೇಕು. ಪ.ಪಂ ಗೆ ನೀರು ಹಾಗೂ ಮನೆ ಕರ ಸೇರಿದಂತೆ ಎಲ್ಲವನ್ನು ಬರಿಸುತ್ತ ಬಂದರೂ ಮೂಲಭೂತ ಸೌಕರ್ಯ ಒದಗಿಸದೇ ಇರುವುದು ವಿಪರ್ಯಾಸ. ಒಂದು ಭಾಗದಲ್ಲಿ ಅಭಿವೃದ್ದಿಯಿಂದ ಕಡೆಗಣಿಸಲಾಗಿದೆ ಎಂಬ ಭಾವನೆ ಉದ್ಬವವಾಗುತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಭಿವೃದ್ದಿ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿಠ್ಠಲ ಬಾಳಂಬೀಡ, ರಾಘವೇಂದ್ರ ಶಿರಾಲಿ, ರಮೇಶ ತಳವಾರ, ಮಂಜುನಾಥ ಹರಿಜನ, ಮಂಜುನಾಥ ಸಿದ್ದಣ್ಣವರ, ರವಿ ಮಲ್ಲೂರ, ವೆಂಕಟೇಶ ಬೋವಿವಡ್ಡರ, ಕುಮಾರ ತಳವಾರ, ನಾಗರಾಜ ತಳವಾರ, ರಾಜು, ಪುಟ್ಟವ್ವ, ರೇಣುಕಾ, ಮಂಜುಳಾ ಆಚಾರಿ ಮುಂತಾದವರು ಉಪಸ್ಥಿತರಿದ್ದರು

loading...

LEAVE A REPLY

Please enter your comment!
Please enter your name here