ರೈತರ ಮೇಲಿನ ದೌರ್ಜನ್ಯ ನ್ಯಾಯಾಂಗ್ ತನಿಖೆಯಾಗಬೇಕು: ಕೋಡಿಹಳ್ಳಿ

0
15
loading...

ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಜರುಗಿದ ರೈತರ ಮೇಲೆ ಮಾಡಿದ ದೌರ್ಜನ್ಯದ ಇಡೀ ಪ್ರಕರಣವನ್ನು ನ್ಯಾಯಾಂಗ್ ತನಿಖೆಗೆ ನೀಡಬೇಕು. ಹಾಗೂ ತಕ್ಷಣವೇ ಬಂಧಿತ ಅಮಾಯಕ ರೈತರನ್ನು ಬಿಡುಗಡೆಗೊಳಿಸಬೇಕು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಅವರು ನಿನ್ನೆ ಒತ್ತಾಯಿಸಿದ್ದಾರೆ. ನಿನ್ನೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಿ. 5 ರೊಳಗೆ ಬಂಧಿತ ಅಮಾಯಕರನ್ನು ಬಿಡುಗಡೆಗೊಳಿಸಿ ನ್ಯಾಯಾಂಗ ತನಿಖೆ ಪಡಿಸಬೇಕೆಂದು ಗಡುವು ನೀಡಿದರಲ್ಲದೇ, ನಂತರ ಮರುದಿನ ದಿ.6 ರಿಂದ ಗೃಹ ಸಚಿವ ಪರಮೇಶ್ವರ ಮನೆ ಎದುರಿಗೆ ತಮ್ಮ ಮುಂದಾಳತ್ವದಲ್ಲಿ ರೈತ ಮುಖಂಡರಾದ ಚಿಕ್ಕರಸು, ಕಡಿದಾಳ ಶಾಮಣ್ಣ, ಎಚ್.ಆರ್. ಬಸವರಾಜ ಅನಸೂಯಮ್ಮ ಹಾಗೂ ಮಳಲಿ ಎಲ್ಲರು ಸೇರಿಕೂಂಡು ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು. ಧರಣಿಗೆ ಸಚಿವ ಪರಮೇಶ್ವರ ಸ್ಪಂದಿಸದಿದ್ದರೆ. ದಿ.10 ರಿಂದ 15 ರವರೆಗೆ ತುಮಕೂರು ಜಿಲ್ಲೆ ತಿಪಟೂರಿನಿಂದ ಬೆಂಗಳೂರನವರಿಗೆ ಪಾದಯಾತ್ರ ಮಾಡಲಾಗುವುದು ನಂತರ ದಿ.15 ರಂದು ಕರಾಳ ದಿನವನ್ನು ಆಚರಿಸಲಾಗುವುದು ಎಂದು ಚಂದ್ರಶೇಖರ ಹೇಳಿದರು. ಗೃಹ ಸಚಿವ ಪರಮೇಶ್ವರ ಈ ಹಿಂದೆ ಹಿಂದುಳಿದ ವರ್ಗದ ಸಮುದಾಯಕ್ಕೆ ಸೇರಿದವರ ಮೇಲೆ ಶೋಷಣೆ ಸಹಿಸಬೇಕಾ ಎಂದು ಹೇಳಿದವರು ಈಗ ರೈತರ ಮೇಲೆ ಮಾಡಿದ ದಬ್ಬಾಳಿಕೆ ಗೊತ್ತಾಗಲ್ಲ ಇದು ಅಮಾಯಕ ರೈತರ ಶೋಷಣೆಯಾಗಿದೆ ಆಪಾಧಿಸಿದರು. ಯಮನೂರಿನಲ್ಲಿ ಅಮಾಯಕ್ ರೈತ ಮಹಿಳೆಯರ, ವೃದ್ಧರು ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಿದ್ದು ಖಂಡನೀಯವಾಗಿದೆ. ಮಹಾದಾಯಿ ಹೋರಾಟದ ದಿಕ್ಕು ತಪ್ಪಿಸಲು ಲಾಠಿ ಚಾರ್ಜ್ ನಡೆಸಲಾಗಿದ್ದು, ಈ ಘಟನೆಯ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕೈವಾಡವಿದೆ ಎಂದು ಆರೋಪಿಸಿದರು. ಈ ಘಟನೆಯ ಬಗ್ಗೆ ರೈತರು ಹಾಗೂ ರಾಜ್ಯದ ಜನರು ಹೋರಾಟ ಮಾಡಲಿದ್ದು ಇದರ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸುವದರೊಂದಿಗೆ ಹೈಕೋರ್ಟ್‍ನಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಯಾವ ಆಧಾರದ ಮೇಲೆ ಹಾಗೂ ಯಾವ ಅಧಿಕಾರಿಯ ಆದೇಶದ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎನ್ನುವದು ಬಯಲಿಗೆ ಬರಬೇಕು. ಕಾಂಗ್ರೆಸ್ ಪಕ್ಷ 20 ವರ್ಷಗಳವರೆಗೆ ತಲೆ ಎತ್ತಲು ಆಗದು, ಅದಕ್ಕೆ ಗೃಹ ಸಚಿವರೆ ಹೊಣೆಯಾಗುತ್ತಾರೆ ಎಂದು ಕೋಡಿಹಳ್ಳಿ ಚಂದ್ರ ಶೇಖರ ತಿಳಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಇನ್ಸ್‍ಪೆಕ್ಟರ್ ಮತ್ತು ಎಸ್‍ಐ ಅವರನ್ನು ವಜಾಗೊಳಿಸಿದರೆ ಮತ್ತು ಡಿವೈಎಸ್ಪಿ ವರ್ಗಾವಣೆ ಮಾಡಿದರೆ ಸಾಲದು. ಉನ್ನತ ಅಧಿಕಾರಿಯನ್ನು ಅಮಾನತುಗೊಳಿಸ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಹಾಗೂ ಈ ಎಲಲಾ ಘಟನೆಗೆ ಮೂಲ ಕಾರಣರೆನ್ನಲಾದ ಎಡಿಜಿಪಿಗಳಾದ ಕಮಲಪಂತ್ ಮತ್ತು ಭಾಸ್ಕರರಾವ್ ಅವರನ್ನು ತಕ್ಷಣವೇ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

loading...

LEAVE A REPLY

Please enter your comment!
Please enter your name here