ವಡಗಾವಿ, ಖಾಸಬಾಗ್ ರಸ್ತೆ ಅಗಲೀಕರಣಕ್ಕೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ: ಮೇಯರ್

0
19
loading...

ಬೆಳಗಾವಿ:3 ವಡಗಾವಿ ಹಾಗೂ ಖಾಸಬಾಗ ಜನರಿಗೆ ಅನಕೂಲವಾಗುವಂತೆ ಪಾಲಿಕೆಯ ಅಧಿಕಾರಿಗಳು ರಸ್ತೆ ಅಗಲೀಕರಣ ಮಾಡುವಂತೆ ಬರುವ ಕೌನ್ಸಿಲ್ ಸಭೆಯಲ್ಲಿ ಎಲ್ಲ ನಗರ ಸೇವಕರ ಅನುಮತಿ ಮೇರೆಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಮೇಯರ್ ಸರೀತಾ ಪಾಟೀಲ ಇಂದಿಲ್ಲಿ ಹೇಳಿದರು.
ಅವರು ಬುಧವಾರ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸಾರ್ವಜನಿಕರ ಕುಂದು ಕೋರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದ ಪ್ರಮುಖ ಕಡೆಗಳಲ್ಲಿ ಪಾಲಿಕೆಯ ಅಧಿಕಾರಿಗಳು ರಸ್ತೆ ಅಗಲೀಕರಣ ಹಾಗೂ ಅತಿಕ್ರಮಣ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ. ಆದರೆ ವಡಗಾವಿ ಹಾಗೂ ಖಾಸಬಾಗನಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಈ ಭಾಗದಲ್ಲಿ ಸುಸಜ್ಜಿತವಾಗಿ ಪಾದಚಾರಿಗಳು ಸಂಚರಿಸಲು ಫುಟ್ ಫಾತ್, ವಿದ್ಯುತ್ ದ್ವೀಪಗಳನ್ನು ಅಳವಡಿಸಲು ಬರುವ ಕೌನ್ಸಿಲ್ ಸಭೆಯಲ್ಲಿ ನಗರ ಸೇವಕರ ಅನುಮತಿ ಮೆರೆಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಶ್ರೀನಿವಾಸ ತಾಳೂಕರ ಮಾತನಾಡಿ, ಗಾಂಧಿ ನಗರದ ಉದ್ಯಾನವನ ಸೇರಿದಂತೆ ನಗರಲ್ಲಿರುವ ಪ್ರಮುಖ ಉದ್ಯಾನವನಗಳು ಹಾಳಾಗಿವೆ ಪಾಲಿಕೆಯ ಅಧಿಕಾರಿಗಳು ಅದನ್ನು ಶುಚ್ಚಿಗೊಳಿಸಿ ಸಾರ್ವಜನಿಕರು ಉಪಯೋಗಿಸುವಂತೆ ಮಾಡಿಕೊಡಬೇಕೆಂದು ಹೇಳಿದರು. ಅಲ್ಲದೆ ಕಲಾಮಂದಿರದಲ್ಲಿ ಹಾಳುಬಿದ್ದು ಪುಂಢ ಪೋಕರಿಗಳಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಗಂಗಾಧರ ದೇಶಪಾಂಡೆ ಅವರ ಪುತ್ಥಳಿ ಇದ್ದು ಅವರಿಗೆ ಅವಮಾನ ಮಾಡಿದಂತಾಗುತ್ತಿದೆ. ಕೂಡಲೇ ಪಾಲಿಕೆಯ ಅಧಿಕಾರಿಗಳು ಇದರತ್ತ ಗಮನ ಹರಿಸಿ ಅಭಿವೃದ್ಧಿ ಪಡಿಸಬೇಕೆಂದು ಅವರು ಸಭೆಗೆ ತಿಳಿಸಿದರು.
ಇದಕ್ಕೆ ಉತ್ತರಿಸಿದ ಮೇಯರ್, ಕಲಾಮಂದಿರ ಹಾಗೂ ಗಾಂಧಿ ನಗರದ ಉದ್ಯಾನವಕ್ಕೆ ಖುದ್ದಾಗಿ ತೆರಳಿ ಪರಿಶೀಲನೆ ನಡೆಸುವುದಾಗಿ ಹೇಳಿದ ಅವರು, ಯಾವುದೇ ಕಾರಣಕ್ಕೂ ಪಾಲಿಕೆಯ ಆಸ್ತಿ ಪಾಸ್ತಿಗಳನ್ನು ಹಾನಿಯಾಗದಂತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಆಗಸ್ಟ್ 15 ಸ್ವಾತಂತ್ರ್ಯ ದಿನಾಚಾರಣೆಯ ಸಂದರ್ಭದಲ್ಲಿ ಪಾಸ್ಟಿಕ್ ಧ್ವಜಗಳನ್ನು ನಿರ್ಮಿಸಿ ಪರಿಸಹರಕ್ಕೆ ಹಾನಿಯುಂಟು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆ ದಿನದಂದು ಪಾಸ್ಟಿಕ್ ಧ್ವಜವನ್ನು ನಿಷೇಧಿಸಬೇಕು ಮತ್ತು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಮಳಿಗೆಗಳಲ್ಲಿ ಎಲ್ಲರೂ ಸಾಮೂಹಿಕವಾಗಿ ಧ್ವಜಾರೋಹಣ ಮಾಡಬೇಕು ಎಂದು ಶ್ರೀನಿವಾಸ ತಾಳೂಕರ ಮೇಯರ್‍ಲ್ಲಿ ವಿನಂತಿಸಿಕೊಂಡರು.
ಈಗಾಗಲೇ ಮಹಾನಗರ ಪಾಲಿಕೆಯಿಂದ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚಾರಣೆಯ ಸಂದರ್ಭದಲ್ಲಿ ಯಾರು ಪಾಸ್ಟಿಕ್ ಧ್ವಜವನ್ನು ಖರೀದಿಸುವುದಾಗಲಿ ಮಾರಟ ಮಾಡುವುದಾಗಲಿ ಮಾಡಬಾರದು ಎಂದು ಮೇಯರ್ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.
ಸಭೆಯಲ್ಲಿ ಮಹಾನಗರ ಪಾಲಿಕೆ ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಸೇರಿದಂತೆ ಮೊದಲಾದ ಸಾರ್ವಜನಿಕರು ಹಾಜರಿದ್ದರು.
*******
ಸ್ವಾತಂತ್ರ್ಯ ಹೋರಾಟಗಾರರು ಮೃತಪಟ್ಟ ಸಂದರ್ಭದಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅತ್ಯ ಸಂಸ್ಕಾರ ಮಾಡಬೇಕು. ಆದರೆ ಕಳೆದ ಜುಲೈ 30 ರಂದು 96 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಮದ್ವರಾಜ್ ದೇಶಪಾಂಡೆ ಮೃತಪಟ್ಟರೇ, ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಧ್ಯಾಹ್ನ 3:30ಕ್ಕೆ ನಿಧನ ಹೊಂದಿದ್ದ ಅವರನ್ನು ರಾತ್ರಿ 9:30ಕ್ಕೆ ಅಂತ್ಯ ಸಂಸ್ಕಾರ ಮಾಡಲಾಯಿತು. ಸರಕಾರಿ ಅಧಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಗೌರವ ಇದೇನಾ ಎಂದು ಶೀಲಾ ದೇಶಪಾಂಡೆ ಮೇಯರ್‍ಗೆ ಕೇಳಿದರು.

loading...

LEAVE A REPLY

Please enter your comment!
Please enter your name here