ವಿದ್ಯೆಯೊಂದಿಗೆ ಜೀವನ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕು: ಶ್ರೀನಿವಾಸಲು

0
38
loading...

ದಾಂಡೇಲಿ : ದೇಶದಲ್ಲಿ ಕಳೆದ 25 ವರ್ಷಗಳಲ್ಲಿ ಆದ ಬದಲಾವಣೆ, ಹಿಂದಿನ 200 ವರ್ಷಗಳಲ್ಲಿ ಆಗಿಲ್ಲ, ಇಂದು ನಾವೆಲ್ಲರೂ ಈ ಬದಲಾವಣೆ ತಕ್ಕಂತೆ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಸನ್ನದ್ಧರಾಗಬೇಕಾಗಿದೆ ಎಂದು ಕಾಳಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಶ್ರೀನಿವಾಸಲುರವರು ನುಡಿದರು.
ಅವರು ಕುಳಗಿಯ ನಾಗಝರಿ ನಿಸರ್ಗ ಧಾಮದಲ್ಲಿ ಲಯನ್ಸ್ ಕ್ಲಬ್ ಅಂಬಿಕಾನಗರ-ದಾಂಡೇಲಿ ಆಶ್ರಯದಲ್ಲಿ ಜರುಗಿದ ಕ್ಲಬ್ ಗಳ ಶ್ರೇಯೊಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಇಂದು ದೇಶದ ಪ್ರತಿಯೊಬ್ಬ ನಾಗರೀಕ ಸ್ವಚ್ಛತೆ, ಅರಣ್ಯ ಸಂಪತ್ತಿನ, ವನ್ಯಜೀವಿಗಳ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ, ಸಂಘ ಸಂಸ್ಥೆಗಳು ಪಾಲಕರಲ್ಲಿ, ವಿದ್ಯಾರ್ಥಿಗಳಲ್ಲಿ ಅದರಲ್ಲೂ ಯುವ ಪೀಳಿಗೆಗೆ, ವಿದ್ಯೆ ಜೊತೆ ಜೀವನದ ಮೌಲ್ಯಗಳನ್ನು, ಹಿಂದಿನ ಸಂಸ್ಕಾರಗಳನ್ನು ಅಳವಡಿಸಿಕೊಳ್ಳುವಂತೆ ಮಾಡಲು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಚಿಂತನೆ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಲಯನ್ಸ್‍ನ ಪ್ರಾಂತಪಾಲರಾದ ಡಾ. ರವಿ ನಾಡಿಗೇರ, ನಿತೀನ ಮಗನಲಾಲ, ತರಬೇತದಾರರಾದ ಶಶೀಂದ್ರನ ನಾಯರ್, ಕ್ಲಬ್ ಸದಸ್ಯರಗಳಿಗೆ ಉತ್ತಮ ಸೇವೆ ಸಲ್ಲಿಸಿ ಕ್ಲಬ್ ಗಳÀ ಹಾಗೂ ಲಯನ್ಸ್ ಸಂಸ್ಥೆಯ ಹೆಸರನ್ನು ಉಜ್ವಲಗೊಳಿಸಬೇಕೆಂದು ತಿಳುವಳಿಕೆಯ ಮಾತನಾಡಿದರು.
ಅಂಬಿಕಾನಗರ ಲಯನ್ಸ್ ಕ್ಲಬಿನ ಅಧ್ಯಕ್ಷ ವಿ.ಆರ್ ಹೆಗಡೆ, ಜೊನಲ್ ಚೇರಮನ್‍ರಾದ ಪ್ರಾಣೇಶ, ದಿನೇಶ ಉಪಸ್ಥಿತರಿದ್ದರು. ಹುಬ್ಬಳ್ಳಿ, ಧಾರವಾಡ, ಹಳಿಯಾಳ, ದಾಂಡೇಲಿ, ಯಲ್ಲಾಪುರ ಕ್ಲಬ್ ಗಳ ಸದಸ್ಯರು ಒಂದು ದಿನದ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಲ: ಯು.ಎಸ್. ಪಾಟೀಲ, ವಿರೇಶ ಯರಗೇರಿ, ಎನ್.ವಿ. ಪಾಟೀಲ, ಚೇತನ ಕುಮಾರಮಠ, ಅಶ್ವಿನಕುಮಾರ ಕಾರ್ಯಕ್ರಮ ನಡೆಸಿಕೊಟ್ಟರು

loading...

LEAVE A REPLY

Please enter your comment!
Please enter your name here