ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕರವೇ ಕಾರ್ಯಕರ್ತರ ಪ್ರತಿಭಟನೆ

0
23
loading...

ಖಾನಾಪುರ 22: ಲೋಕಸಭೆ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು ಸಂಸದ ಸ್ಥಾನ ಸ್ವೀಕರಿಸಿದ ನಂತರ ಬಹಳ ದಿನಗಳ ಕಾಲ ಕ್ಷೇತ್ರಕ್ಕೆ ಭೇಟಿ ನೀಡದೇ ಈಗ ಪ್ರತ್ಯಕ್ಷವಾದ ಸಂಸದ ಅನಂತಕುಮಾರ ಹೆಗಡೆ ಅವರು ತಾಲೂಕು ಎದುರಿಸುತ್ತಿರುವ ಭೀಕರ ಸಮಸ್ಯೆಗಳ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತಾಲೂಕು ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ ಆರೋಪಿಸಿದರು.
ಸೋಮವಾರ ಕ್ಷೇತ್ರ ಪ್ರವಾಸದ ಅಂಗವಾಗಿ ತಾಲೂಕಿನ ನಂದಗಡ ಗ್ರಾಮದ ಕಾರ್ಯಕ್ರಮ ಮುಗಿಸಿ ಪಟ್ಟಣದ ಮೂಲಕ ಜಾಂಬೋಟಿಯತ್ತ ತೆರಳುತ್ತಿದ್ದ ಸಂಸದರ ಸರ್ಕಾರಿ ವಾಹನ ಪಟ್ಟಣದ ಶಿವಸ್ಮಾರಕ ವೃತ್ತಕ್ಕೆ ಆಗಮಿಸುತ್ತಲೇ ಅದನ್ನು ತಡೆದು ಸಂಸದರನ್ನು ವಾಹನದಿಂದ ಕೆಳಗೆ ಇಳಿಸಿ ಅವರೊಂದಿಗೆ ಮಾತನಾಡಿದ ಅವರು, , ಸಂಸದರು ರೈತರ ಮಹಾದಾಯಿ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಲೋಕಸಭಾ ಚುನಾವಣೆಯ ನಂತರ ತಾಲೂಕಿನಲ್ಲಿ ಕಸ್ತೂರಿ ರಂಗನ್ ವಿವಾದ, ಚಿಕ್ಕಮಗಳೂರಿನ ಪಂಡರವಳ್ಳಿಯಿಂದ ನರಭಕ್ಷಕ ಹುಲಿ ತಂದು ಭೀಮಗಡ ಅರಣ್ಯಕ್ಕೆ ಬಿಟ್ಟು ಗರ್ಭಿಣಿ ಮಹಿಳೆಯ ಬಲಿ ಪಡೆದ ವಿಚಾರ, ಕಳಸಾ ಬಂಡೂರಿ ಹಾಗೂ ಮಹಾದಾಯಿ ಹೋರಾಟ, ರೈತರ ಆತ್ಮಹತ್ಯೆ, ಭೀಕರ ಬರಗಾಲ, ರೈತರ ಕಬ್ಬಿನ ಬಿಲ್ಲು ಪಾವತಿ ಮತ್ತಿತರ ಸಮಸ್ಯೆಗಳ ಬೇಡಿಕೆಗಳ ಬಗ್ಗೆ ಸಂಸದರು ಸ್ಪಂದಸುತ್ತಿಲ್ಲ ಎಂದರು.
ತಾಲೂಕು ಘಟಕದ ಉಪಾಧ್ಯಕ್ಷ ವಿಠ್ಠಲ ಹಿಂಡಲಕರ ಮಾತನಾಡಿ, ತಾಲೂಕಿನ ಪ್ರಮುಖ ಸಮಸ್ಯೆಗಳ ನಿವಾರಣೆಯ ನಿಟ್ಟಿನಲ್ಲಿ ಅನುದಾನವನ್ನು ನೀಡಿರುವ ಬಗ್ಗೆ ಸಂಸದರು ಮಾಹಿತಿ ನೀಡಬೇಕು. ಮಹಾದಾಯಿ, ರೈತರ ಆತ್ಮಹತ್ಯೆ, ಹದಗೆಟ್ಟ ರಸ್ತೆಗಳ ದುರಸ್ತಿ, ರೈತರ ಕಬ್ಬಿನ ಬಿಲ್ಲು ಪಾವತಿ ಮತ್ತಿತರ ಸಮಸ್ಯೆಗಳ ಬಗ್ಗೆ ತಾವು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಸಂಸದ ಹೆಗಡೆ ಕರವೇ ಕಾರ್ಯಕರ್ತರ ಆರೋಪಕ್ಕೆ ಪ್ರತಿಯಾಗಿ ಸ್ಪಷ್ಟೀಕರಣ ನೀಡಲು ಮುಂದಾದರೂ ಅದಕ್ಕೆ ಕಾರ್ಯಕರ್ತರು ಅವಕಾಶ ನೀಡದೇ ಕೇವಲ ಜನರ ಸಮಾಧಾನಕ್ಕೆಂದು ಮಾತನಾಡಬೇಡಿ, ದಾಖಲೆ ಸಮೇತ ವಿವರಣೆ ನೀಡಿ ಎನ್ನುವ ಮೂಲಕ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಲ್ಹಾದ ರೇಮಾಣಿ, ನೈಋತ್ಯ ರೈಲ್ವೆ ಸಲಹಾ ಮಂಡಳಿ ಸದಸ್ಯ ಪ್ರಮೋದ ಕೊಚೇರಿ, ಸಂಜಯ ಕಂಚಿ, ಚೇತನ ತಳವಾರ ಹಾಗೂ ಇತರರು ಇದ್ದರು.

loading...

LEAVE A REPLY

Please enter your comment!
Please enter your name here