ಸಹಾಯಧನ ಚೆಕ್ ವಿತರಣೆ

0
20
loading...

ಗೋಕಾಕ 27: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಬಿದಾಯಿ(ಶಾದಿ ಭಾಗ್ಯ) ಯೋಜನೆಯಡಿ ಮಂಜೂರಾದ ಸಹಾಯಧನ ಚೆಕ್‍ಗಳನ್ನು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಶನಿವಾರದಂದು ನಗರದ ಅವರ ಕಾರ್ಯಾಲಯದಲ್ಲಿ ವಿತರಿಸಿದರು.ಗೋಕಾಕ ಮತಕ್ಷೇತ್ರದ 23 ಫಲಾನುಭವಿಗಳಿಗೆ ತಲಾ 50 ಸಾವಿರ ರೂಗಳಂತೆ ಸಹಾಯಧನದ ಚೆಕ್‍ಗಳನ್ನು ವಿತರಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೇಸ್ ಸರ್ಕಾರ ಹಿಂದುಳಿದ, ದಿನದಲಿತರ, ಅಲ್ಪಸಂಖ್ಯಾತರ ಅಭಿವೃದ್ದಿಗೆ ಹಲವಾರು ಯೋಜನೆಗಳಿಂದ ಶ್ರಮಿಸುತ್ತಿದ್ದು ಅವುಗಳ ಸದುಪಯೋಗದಿಂದ ಆರ್ಥಿಕವಾಗಿ ಸಭಲರಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಹಿಂದುಳಿದ ವರ್ಗಗಳ ವಿಸ್ತರ್ಣಾಧಿಕಾರಿ ಎನ್ ಜಿ ಜಾಬನ್ನವರ ಇದ್ದರು.

loading...

LEAVE A REPLY

Please enter your comment!
Please enter your name here