ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೆವರಾಜ

0
72
loading...

ರಾಯಬಾಗ 21ಃ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೆವರಾಜ ಅರಸು ಅವರು ಬಡವರ, ನೋಂದವರ, ದಿನದಲಿತರ, ಶೋಷಿತರ, ಆಶಾಕಿರಣವಾಗಿದ್ದಾರೆಂದು ರಾಯಬಾಗ ಶಾಸಕ ಡಿ.ಎಂ.ಐಹೊಳೆ ಹೇಳಿದರು. ಶನಿವಾರ ರಾಯಬಾಗ ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ತಾಲೂಕಾ ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದೆವರಾಜ ಅರಸು ಅವರ 101ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೆವರಾಜ ಅರಸು ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಯಾವತ್ತು ಅಜರಾಮರವಾಗಿವೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಚಾರ್ಯ ಮದುಸುಧನ ಬಿಳಗಿ ಹಾಗೂ ಬಿ.ಎಲ್.ಘಂಟಿ ಮಾತನಾಡಿ 1974ರಲ್ಲಿ ಭೂ ಸುಧಾರಣೆ ಕಾನೂನು ಜಾರಿಗೆ ತಂದು ಉಳುವವನೆ ಒಡೆಯ ಹಾಗೂ ಭೂ ಸುಧಾರಣಾ ಮಂಡಳಿಗಳನ್ನು ಸ್ಥಾಪಿಸಿ ರಾಷ್ಟ್ರದಲ್ಲಿ ಕ್ರಾಂತಿಕಾರಕ ಕಾರ್ಯಮಾಡಿದ್ದಲ್ಲದೆ ರಾಜ್ಯದಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಶುಲ್ಕದಲ್ಲಿ ವಿನಾಯತಿ ನೀಡಿ ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹ ನಿಡಿದ್ದಾರೆ. ಇದಲ್ಲದೆ ಜೀತ ಪದ್ದತಿ ನಿರ್ಮೂಲನಾ ಕಾಯ್ದೆ ಜಾರಿಗೆ ತಂದು ಸಾವಿರಾರು ಜೀತದಾಳುಗಳನ್ನು ಜೀತ ಮುಕ್ತರನ್ನಾಗಿ ಮಾಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಅಚಿಲೆರಿ-ಜಿಡಗಾ ಮಠದ ಷಡಕ್ಷರಿ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು, ರಾಯಬಾಗ ತಹಶೀಲ್ದಾರ ಸಂಜಯ ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ನಿಂಗಪ್ಪ ಪಕಾಂಡಿ, ಜಯಶ್ರೀ ಮೋಹಿತೆ, ವಿಲಾಸಮತಿ ಪಾಟೀಲ, ತಾ.ಪಂ.ಅಧಿಕಾರಿ ವ್ಹಿ.ಎಸ್.ಪಾಟೀಲ, ಮಾರುತಿ ನಾಯಿಕ, ತಾಲೂಕ ಕುರುಬರ ಸಂಘದ ಅಧ್ಯಕ್ಷ ಹಾಲಪ್ಪ ಘಾಳಿ, ಕಾರ್ಯದರ್ಶಿ ಲಖನ ಕಟ್ಟಿಕಾರ, ಏಕನಾಥ ಮಾಚಕನೂರ, ಉದಯ ಕಾಳಗೆ, ಗೋಪಾಲ ಕೊಚೇರಿ, ಗೋಪಾಲ ನಿಡಗುಂದಿ ಸೇರಿದಂತೆ ವಿದ್ಯಾರ್ಥಿಗಳು ತಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಇದ್ದು ಓದಿದ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ದ್ವೀತಿಯ ಪಿಯುಸಿ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾದಿಕಾರಿ ಎಸ್.ಕೆ.ಗೋಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಹಾವೀರ ಪಾಟೀಲ ನಿರೂಪಿಸಿದರು. ಎಂ.ಪಿ.ನಾಯಿಕ ವಂದಿಸಿದರು.

loading...

LEAVE A REPLY

Please enter your comment!
Please enter your name here