ಸ್ವರ್ಣವಲ್ಲಿ ಶ್ರೀಗಳ ಪೀಠಾರೋಹಣದ ರಜತ ಮಹೋತ್ಸವ

0
27
loading...

ಯಲ್ಲಾಪುರ : ಚರಕಾಚಾರ್ಯರು ಹೇಳಿದಂತೆ ಭಾರತದಲ್ಲಿರುವ ವನಸ್ಪತಿ ಗಿಡಗಳು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಮನುಷ್ಯ ತನ್ನ ಭಾವನೆಯನ್ನ ಮನದಿಂಗಿತವನ್ನ ಹೇಳಿಕೊಳ್ಳಲಾಗದೇ ಎಲ್ಲ ಸಂವೇದನೆಗಳನ್ನ ಜೀರ್ಣೀಸಿ
ಕೊಳ್ಳಲಾಗದೇ ಮಧುಮೇಹದಂತ ರೋಗಗಳು ನಮ್ಮನ್ನ ಸೇರುತ್ತದೆ ಎಂದು ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ ಹೇಳಿದರು.
ಅವರು ಶ್ರೀಶಾರದಾಂಬಾ ಸಂಸ್ಕøತ ಪಾಠ ಶಾಲಾ ಆವಾರದಲ್ಲಿ ಪತಂಜಲಿ ಯೋಗಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ ಹಾಗೂ ಸ್ವರ್ಣವಲ್ಲಿ ಮಹಾ ಸಂಸ್ಥಾನ, ಶ್ರೀಶಾರದಾಂಬಾ ದೇವಸ್ಥಾನ ಇವುಗಳ ಸಯುಕ್ತ ಆಶ್ರಯದಲ್ಲಿ ಸ್ವರ್ಣವಲ್ಲಿ ಶ್ರೀಗಳ ಪೀಠಾರೋಹಣದ ರಜತ ಮಹೋತ್ಸವ ಮತ್ತು ಪತಂಜಲಿ ಯೋಗಪೀಠದ ಬಾಲಕೃಷ್ಣಜೀ ಯವರ ಜನ್ಮದಿನೋತ್ಸವದ ಅಂಗವಾಗಿ ಜಡಿ ಬೂಟಿ ಕಾರ್ಯಕ್ರಮದಲ್ಲಿ ,ಔಷಧಿ, ಪವಿತ್ರ ಸಸ್ಯಾರೋಹಣ ,ಹಸಿರು ಆಹಾರದ ಮಾಹಿತಿ ಹಾಗೂ ಸನ್ಮಾನಿತರನ್ನ ಸನ್ಮಾನಿಸಿ ಮಾತನಾಡುತ್ತಿದ್ದರು.
ಆರೋಗ್ಯವಂತನಾಗಿರಲು ಯೋಗದಿಂದ ಮಾತ್ರ ಸಾಧ್ಯ ಮತ್ತು ಕ್ರಿಮಿನಾಶಕ ಬಳಸದ ತರಕಾರಿ, ಹಣ್ಣು,ಆಹಾರ ಸೇವನೆಯಿಂದ ಆರೋಗ್ಯ ಉಳಿಯಬಹುದು ಆದೃಷ್ಠಿಯಿಂದ ಇಂದು ಎರಡು ನಾಟಿ ವೈದ್ಯರನ್ನು ಸನ್ಮಾಸಿರುವುದು ಹೆಚ್ಚು ಮೌಲ್ಯ ಎಂದರು.
ಭಾರತ ಸ್ವಾಭಿಮಾನ ಟ್ರsಸ್ಟ ಜಿಲ್ಲಾ ಅಧ್ಯಕ್ಷ ರಾಮಚಂದ್ರ ಹೆಗಡೆ ಅಧ್ಯಕ್ಷತೆ ವಹಿಸಿ ಭಾರತೀಯ ಮೂಲ ಪರಂಪರೆಯಿಂದ ಬಂದ ಜೀವನ ಕ್ರಮದಿಂದ ಆರೋಗ್ಯ ನಿರಂತರ ಉಳಿಯಲು ಸಾಧ್ಯ ಆಹಿನ್ನೆಲೆಯಲ್ಲಿ ಪತಂಜಲಿ ಯೋಗಪೀಠ ಅದನ್ನು ಜಗತ್ತಿಗೆ ರೂಜುವಾತು ಮಾಡುತ್ತಿದೆ. ಬಲಕೃಷ್ಣಜೀ ಯವರ ಜನ್ಮಾಚರಣೆ ವನಸ್ಪತಿಗಳನ್ನು ನೆಡುವ ಮೂಲಕ ಆಚರಿಸಲಾಗುತ್ತಿದೆ ನಾವು ಭೋಗ ಸಂಸ್ಕøತಿಗೆ ಮರಳಾಗುತ್ತಿದ್ದೇವೆ ಅದರಿಂದ ನಾವು ಆಪತ್ತಿಗೆ ಸಿಲುಕಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಾಟಿ ವೈದ್ಯರಾದ ಗಜಾನನ ಎನ್.ಭಟ್ಟ ಆಲವಾಡ, ದೇವಿಗುಡ್ಡೆಯ ಬಾಬು ಸಿದ್ದಿ ಇವರನ್ನ ಸನ್ಮಾನಿಸಲಾಯಿತು, ಶಿರಸಿಯ ಸಮಗ್ರ ವಿಕಾಸ ಟ್ರಸ್ಟ ಅಧ್ಯಕ್ಷ ಉಮಾಪತಿ ಭಟ್ಟ ಉದ್ಘಾಟಿಸಿ ವನಸ್ಪತಿಗಳ ಔಷಧಿಗಳ ಕುರಿತು ಮಾಹಿತಿ ನೀಡಿದರು. ಶಿರಸಿಯ ಆಯುರ್ವೇದ ವೈದ್ಯ ಡಾ|| ವಿನಾಯಕ ಹೆಬ್ಬಾರ ಹಸಿರು ಆಹಾರದ ಕುರಿತು ಉಪನ್ಯಾಸ ನೀಡಿದರು.
ಪ್ರಮುಖರಾದ ರಘರಾಮ ಹೆಗಡೆ, ಸಂತೋಷ ಗುಡಿಗಾರ,ಶಾರದಾಂಬಾ ಪಾಠ ಶಾಲಾ ಮುಖ್ಯಾದ್ಯಾಪಕ ವಿ.ಎಸ್.ಭಟ್ಟ್,ಶಾರದಾಂಬಾ ವ್ಯವಸ್ಥಾಪಕ ಅಶೋಕ ಶೆಟ್ಟಿ, ಮಹಿಳಾ ಸಂಘದ ಅಧ್ಯಕ್ಷ ಕಮಲಾ ಹೆಗಡೆ ಮುಂತಾದವರು ಉಪಸ್ಥಿತರಿದ್ದರು ಸಂಚಾಲಕ ಸುಬ್ರಾಯ ಭಟ್ಟ ಸ್ವಾಗತಿಸಿದರು. ದಿವಾಕರ ಮರಾಠೆ ನಿರ್ವಹಿಸಿದರು ಡಾ|| ಸುಬ್ರಾಯ ಭಟ್ಟ ವಂದಿಸಿದರು.

loading...

LEAVE A REPLY

Please enter your comment!
Please enter your name here