ಹಂತ ಹಂತವಾಗಿ ತುಂಬುತ್ತಿರುವ ಸೂಪಾ ಜಲಾಶಯ

0
36
loading...

ಜೋಯಿಡಾ : ತಾಲೂಕಿನ ವಿಧ್ಯುತ್ ಉತ್ಪಾದನೆಯ ಸೂಪಾ ಜಲಾಶಯಕ್ಕೆ ಹಂತ ಹಂತವಾಗಿ ನೀರು ತುಂಬುತ್ತಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ತುಂಬಿ ತುಳುಕಿದ ಈ ಜಲಾಶಯ ಸೂಪಾ ಹಿನ್ನೀರಿನ ಜಲಾನಯನ ಪ್ರದೇಶದಲ್ಲಿ ಈ ಸಾಲಿನಲ್ಲಿ ಮಳೆ ತುಂಭಾ ಕಡಿಮೆಯಾಗಿರುವುದರಿಂದ ತುಂಬುವ ನೀರಿಕ್ಷೆ ಹುಸಿಗೊಳಿಸಲಿದೆ. ಆದರೂ ಈ ದಿನದಂದು ಕಳೆದ ವರ್ಷಗಿಂತ 2 ಮಿ. ನೀರು ಹೆಚ್ಚಿಗೆ ಸಂಗ್ರಹವಾಗಿದ್ದು ಸಮಾಧಾನಕರವಾಗಿದೆ.
ಸೂಪಾ ಜಲಾಶಯದ ವಿಶಿಷ್ಟವೆಂದರೆ ಪ್ರತಿ ಹತ್ತು ವರ್ಷಕ್ಕೋಮ್ಮೆ ಮಾತ್ರ ಈ ಜಲಾಶಯ ತುಂಬಿ ಇತಿಹಾಸವನ್ನು ನಿರ್ಮಿಸಿದೆ. 1994 ರಲ್ಲಿ ಮೊದಲ ಬಾರಿಗೆ ಮೈತುಂಬಿ ತುಳುಕಿದ ಸೂಪಾ ಜಲಾಶಯ ನಂತರ 2004 ರಲ್ಲಿ ತುಂಬಿತ್ತು. ತದನಂತರ ಹತ್ತು ವರ್ಷಗಳ ಬಳಿಕ 2014 ರಂದು ನಿರೀಕ್ಷೆಯಂತೆ ಹತ್ತು ವರ್ಷಗಳ ಬಳಿಕ ತುಂಬಿರುವುದು ವಿಶೇಷವಾಗಿತ್ತು.
2015 ನೇ ಸಾಲಿನಲ್ಲಿ ಮಳೆ ತುಂಬಾ ಕಡಿಮೆಯಾಗಿರುವುದರಿಂದ ಸೂಪಾ ಜಲಾಶಯ ತುಂಬಲೇ ಇಲ್ಲ.
ಸೂಪಾ ಜಲಾಶಯದ ಹಿನ್ನೀರಿನ ಪ್ರದೇಶವಾದ ಡಿಗ್ಗಿ, ಕ್ಯಾಸಲ್‍ರಾಕ್, ರಾಮನಗರ, ಖಾನಾಪೂರ ಈ ಪ್ರದೇಶದಲ್ಲಿ ಸಾಕಷ್ಟು ಮಳೆ ಬೀಳದೇ ಇರುವುದರಿಂದ ಸೂಪಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕಡಿಮೆ ಇದೆ. ಕಳೆದ ಒಂದೆರಡು ದಿನದಿಂದ ಸೂಪಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿದ್ದರಿಂದ 6874.10 ಕ್ಯೂಸೇಕ್ಸ ನೀರು ಒಳಹರಿವು ಇದೆ.
ಸೂಪಾ ಕೆಳ ಸ್ಥಳದ ಪ್ರಮುಖ ವಿಧ್ಯುತ್ ಉತ್ಪಾದನೆಯ ಜಲಾಶಯವಾದ ಅಂಬಿಕಾನಗರ ( ನಾಗಝರಿ) ವಿಧ್ಯುದ್ದಾಗಾರಕ್ಕೆ ಮಳೆ ಇಲ್ಲದೇ ನೀರು ಕಡಿಮೆಯಾಗುತ್ತಿದ್ದರಿಂದ 5600.83 ಕ್ಯೂಸೆಕ್ಸ ನೀರು ಸೂಪಾ ಜಲಾಶಯದಿಂದ ಹೊರಬಿಡಲಾಗುತ್ತದೆ.
ಸೂಪಾ ಜಲಾಶಯದಿಂದ ವಿದ್ಯುತ್ ಸ್ಥಗಿತ; ಸೂಪಾ ಜಲಾಶಯದಲ್ಲಿ ನೀರು ಸಂಗ್ರಹವಾದರೆ ಮಾತ್ರ ಕಾಳಿ ಸ್ಥರಳದ ಅಂಬಿಕಾನಗರ, ಕೊಡಸಳ್ಳಿ, ಕದ್ರಾ ಜಲಾಶಯಗಳಿಂದ ಬೇಸಿಗೆ ಕಾಲದಲ್ಲಿ ವಿಧ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಹಾಗಾಗಿ ಸೂಪಾ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹಣೆಯ ಉದ್ದೇಶದಿಂದ ವಿದ್ಯುತ್ ಉತ್ಪಾದನೆ ಮಾಡುವುದನ್ನು ಪ್ರತಿ ಮಳೆಗಾಲದಲ್ಲಿ ಸ್ಥಗಿತ ಮಾಡಲಾಗುತ್ತದೆ.
ರಾಜ್ಯದ ಪ್ರಮುಖ ಜಲಾಶಯಗಳು ತುಂಬುವ ಹಂತ ತಲುಪಿದೆ. ಆದರೆ 564 ಮಿ ಸಮುದ್ರ ಮಟ್ಟದಿಂದ ಎತ್ತರ ವಿರುವ ಸೂಪಾ ಜಲಾಶಯ ಈಗ ಕೇವಲ 542.98 ಮೀ. ತುಂಬಿದ್ದು ಇನ್ನೂ 22 ಮಿ. ನೀರು ತುಂಬುವುದು ಬಾಕಿ ಇದೆ. ಮಳೆ ಈ ಪ್ರಮಾಣದಲ್ಲಿ ಕಡಿಮೆಯಾದರೆ ಪ್ರತಿ ಹತ್ತು ವರ್ಷಕ್ಕೊಮ್ಮೆ ತುಂಬುವ ಇತಿಹಾಸ ಈ ಸಾಲಿನಲ್ಲಿ ಮುರಿಯಲು ಸಾಧ್ಯವಾಗಲಾರದು.
ಡ್ಯಾಮ ಡಿವಿಜನ್ ಸಹಾಯಕ ಅಭಿಯಂತರ ಕುಲಕರ್ಣಿ; ಸೂಪಾ ಜಲಾಶಯಕ್ಕೆ ಮಳೆ ಕೊರತೆಯಿಂದ ಒಳ ಹರಿವಿನ ಪ್ರಮಾಣ ಕಡಿಮೆ ಇದೆ. ಕಳೆದ ವರ್ಷಕ್ಕಿಂತಲೂ 2 ಮಿ. ನೀರು ಹೆಚ್ಚು ಸಂಗ್ರಹವಿದೆ. ಮಳೆ ಬೀಳುವುದರ ಮೇಲೆ ಸೂಪಾ ತುಂಬುವುದು ನಿರ್ಧರಿಸಲಿದೆ.

loading...

LEAVE A REPLY

Please enter your comment!
Please enter your name here