ಅಕ್ರಮ ಕಟ್ಟಿಗೆ ಸಾಗಾಟನೆ: ಆರೋಪಿಯ ಬಂಧನ

0
24
loading...

ಮುಂಡಗೋಡ : ಅಕ್ರಮವಾಗಿ ಕಟ್ಟಿಗೆ ಕಡಿದು ಸಾಗಿಸುತ್ತಿದ್ದ ವಾಹನದ ಮೇಲೆ ಕಾತೂರ ವಲಯ ಅರಣ್ಯಧಿಕಾರಿಗಳು ದಾಳಿ ನಡೆಸಿ ವಾಹನ ಸಮೇತ ಸುಮಾರು 1 ಲಕ್ಷ ಮೌಲ್ಯದ ಸಾಗವಾನಿ ಕಟ್ಟಿಗೆ ಯನ್ನು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಶುಕ್ರವಾರ ಬೆಳಗಿನ ಜಾವ ಸಂಬವಿಸಿದೆ.
ಕಲಘಟಗಿ ತಾಲೂಕು ರಾಯನಾಳ ಗ್ರಾಮದ ರಾಮಪ್ಪ ಓಲೆಕಾರ ಬಂದಿತ ಆರೋಪಿ. ತಾಲೂಕಿನ ಸಿಂಗನಳ್ಳಿ ಅರಣ್ಯ ಪ್ರದೇಶದಲ್ಲಿ 2 ಭಾರೀ ಗಾತ್ರದ ಮರಗಳನ್ನು ಕಡಿದು ಗರಗಸದಿಂದ ತುಂಡರಿಸಿ ಮಹಿಂದ್ರಾ ಪಿಕಪ್ ವಾಹನದಲ್ಲಿ ಹುಬ್ಬಳ್ಳಿ ಕಡೆಗೆ ಸಾಗಿಸಲಾಗುತ್ತಿದ್ದ ಖಚಿತ ಮಾಹಿತಿಯ ಮೆರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾತೂರ ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

loading...

LEAVE A REPLY

Please enter your comment!
Please enter your name here