ಅಕ್ರಮ ಜಾನುವಾರು ಸಾಗಾಟನೆ ಇಬ್ಬರ ಬಂಧನ

0
17
loading...

ಯಲ್ಲಾಪುರ : ಪರವಾನಿಗೆ ಇಲ್ಲದೆ ಕಂಟೇನರ್ ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಅಕ್ರಮವಾಗಿ ಸಾಗಿಸುತ್ತಿದ್ದ 8 ಜಾನುವಾರುಗಳನ್ನು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಜೋಡುಕೆರೆ ಬಳಿ ಪೊಲೀಸರು ವಶಪಡಿಸಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಗೋವಿಂದ ನಾಗಪ್ಪ ಧರ್ಮಾ, ಕಮತಾನ ಬೀದರ್ ಹಾಗೂ ಮಹಮ್ಮದ್ ಸಲಾಂ ಮಹಮ್ಮದ್ ಸಾಬ್ ಬಹದ್ದೂರಪುರ ಹೈದರಾಬಾದ್ ಎಂದು ಗುರುತಿಸಲಾಗಿದೆ. ಇವರು 1.50 ಲಕ್ಷ ರೂ ಮೌಲ್ಯದ 8 ಎತ್ತುಗಳನ್ನು ಕಂಟೇನರ್ ಲಾರಿಯೊಂದರಲ್ಲಿ ಒಂದಕ್ಕೊಂದು ತಾಗುವಂತೆ ಒತ್ತೊತ್ತಾಗಿ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಬಲಿ ಕೊಡುವ ಉದ್ದೇಶದಿಂದ ಆಂದ್ರಪ್ರದೇಶದ ಜೈರಾಬಾದ್‍ನಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದರು ಎನ್ನಲಾಗಿದೆ.
ಪಟ್ಟಣದ ಜೋಡುಕೆರೆ ಬಳಿಯ ತಪಾಸಣಾ ಕೇಂದ್ರದಲ್ಲಿ ಕಂಟೇನರನ್ನು ಪೊಲೀಸರು ತಪಾಸಣೆ ನಡೆಸಿದ ಸಂದರ್ಭದಲ್ಲಿ ಜಾನುವಾರು ಸಾಗಿಸುತ್ತಿರುವುದು ಪತ್ತೆಯಾಗಿದೆ. ಯಲ್ಲಾಪುರ ಠಾಣೆಯಲ್ಲಿ ಎಎಸ್‍ಐ ಎನ್. ಆರ್. ರಾಥೋಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here