ಅಕ್ಷರ ಕಲಿಕೆ ಹಾಗೂ ಉದ್ಯೋಗ ಕೊಡುವಲ್ಲಿ ಸರಕಾರಗಳು ವಿಫಲ: ಬಸವರಾಜ

0
38
loading...

ಕನ್ನಡಮ್ಮ ಸುದ್ದಿ- ದಾಂಡೇಲಿ : ಈ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೆ ಕಳೆದರೂ ಅಕ್ಷರ ಕಲಿಕೆಯಲ್ಲಿ ಹಾಗೂ ಉದ್ಯೋಗ ಕೊಡುವಲ್ಲಿ ನಮ್ಮನ್ನಾಳಿದ ಎಲ್ಲ ಸರಕಾರಗಳೂ ವಿಫಲವಾಗಿವೆ. ಇಂದು ಹಣ ಇದ್ದವರಿಗೆ ಮಾತ್ರ ಶಿಕ್ಷಣ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಸುತ್ತುವರೆದಿರುವ ಅಸಮಾನ ಶಿಕ್ಷಣ ವ್ಯವಸ್ಥೆಯನ್ನು ಹೋಗಲಾಡಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಪ್.ಐ) ನ ರಾಜ್ಯ ಉಪಾಧ್ಯಕ್ಷ ಬಸವರಾಜ ಪೂಜಾರ ತಿಳಿಸಿದರು.
ಅವರು ದಾಂಡೇಲಿಯಲ್ಲಿ ಆಯೋಜಿಸಿದ್ದ ಎಸ್.ಎಪ್.ಐ.ನ ಸಂಘಟನಾ ಸಭೆಯ ನಂತರದಲ್ಲಿ ನಡೆಸಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ದೇಶದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯಕ್ಕೆ ಎಷ್ಟು ಪ್ರಮಾಣದ ಮಹತ್ವ ಸಿಗಬೇಕಿತ್ತೋ ಅಷ್ಟು ಸಿಕ್ಕಿಲ್ಲ.. ಶಿಕ್ಷಣ ಮತ್ತು ಆರೋಗ್ಯವನ್ನು ಕಡೆಗಣಿಸಿದ ದೇಶದಿಂದ ಅಭಿವೃದ್ದಿ ಸಾದ್ಯವಿಲ್ಲ. ಇಂದು ಸರಕಾರಿ ಶಾಲಾ ಕಾಲೇಜುಗಳ ಶಂಖ್ಯೆ ಕಡಿಮೆಯಾಗುತ್ತಿದೆ. ಶಾಸಕರು, ಸಚಿವರು, ರಾಜಕಾರಣಿಗಳ ಕ್ರಪಾಶಿವಾದಿಂದ ಖಾಸಗಿ ಶಿಕ್ಷಣ ಸಂಸ್ಥೇಗಳು ಬೇಕಾ ಬಿಟ್ಟಿ ಬೆಳೆಯುತ್ತಿವೆ. ಸರಕಾರಿ ಶಾಲಾ ಕಾಲೇಜುಗಳಲ್ಲಿ ಹಲವು ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಈ ಬಗ್ಗೆ ಆಳುವ ಯಾವ ಸರಕಾರಗಳು ಸಮರ್ಪಕವಾಗಿ ಗಮನ ಹರಿಸುತ್ತಿಲ್ಲ. ಇಂದು ಎಲ್ಲ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ, ಶಿಕ್ಷಕಿಯರ ಮೇಲಿನ ದೌರ್ಜನ್ಯಗಳನ್ನು ಕಾಣುತ್ತಿದ್ದೇವೆ. ಹಾಗಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಲೈಂಗಿಕ ದೌಜನ್ಯ ತಡೆ ಸಮಿತಿಯನ್ನು ರಚಿಸುವಂತಾಗಬೇಕು ಎಂದರು.
ಎಸ್.ಎಪ್.ಐ.ನ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಗಣೇಶ ರಾಠೋಡ್ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಭಾಗಶಹ ಸರಕಾರಿ ಶಾಲಾ ಕಾಲೇಜುಗಳಿಗೆ ಸಮರ್ಪಕವಾದ ಕಟ್ಟಡಗಳಿಲ್ಲ. ಹಲವೆಡೆ ಬಸ್ ಸೌಕರ್ಯ, ಬಸ್ ಪಾಸ್ ವ್ಯವಸ್ಥೆ ದೊರೆಯದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ವಿದ್ಯಾರ್ಥಿ ಹಾಸ್ಟೇಲ್‍ಗಳ ಸಂಖ್ಯೆ ಕಡಿಮೆಯಿದ್ದು, ಇರುವ ಹಾಸ್ಟೇಲ್‍ಗಳಲ್ಲಿಯೂ ಪೌಷ್ಠಿಕ ಆಹಾರ ದೊರೆಯುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯದ ಅವಶ್ಯಕತೆಯಿದೆ. ದಾಂಡೇಲಿಯಲ್ಲಿಯೂ ಕೂಡಾ ವಿದ್ಯಾರ್ಥಿಗಳಿಗೆ ಹಲವು ಸಮಸ್ಯೆಗಳಿವೆ. ಅವಶ್ಯವಿರುವ ವಸತಿ ನಿಲಯಗಳು ಆಗಬೇಕಿದೆ. ಇನ್ನುಮುಂದೆ ಇಲ್ಲಿಯ ಶೈಕ್ಷಣಿಕ ಸಮಸ್ಯೆಗಳನ್ನು ಮುಮಂದಿಟ್ಟು ಹೋರಾಟ ನಡೆಸಿ ಸರಕಾರದ, ಜನಪ್ರತಿನಿದಿಗಳ ಗಮನ ಸೆಳೆಯಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಡಿ.ವೈ..ಎಪ್.ಐ.ನ ಜಿಲ್ಲಾ ಕಾರ್ಯದರ್ಶಿ ಡಿ. ಸ್ಯಾಮಸನ್, ಜನವಾದಿ ಮಹಿಲಾ ಸಂಘಟನೆಯ ಅಧ್ಯಕ್ಷೆ ರತ್ನದೀಪಾ ಎನ್.ಎಮ್. ಎಸ್.ಎಪ್.ಐ.ನ ಅಧ್ಯಕ್ಷ ರಾಯದ್ ಶೇಖ, ಕಾರ್ಯದರ್ಶಿ ಜ್ಯೋತಿ ಗಡಾದ್, ಉಪಾಧ್ಯಕ್ಷ ರವೀಂದ್ರ ಪಂಬೂರ, ನಿಖಿತಾ ಬಿದಾದಾ, ಮಧು ಕಾಂಬಳೆ, ಸಹ ಕಾರ್ಯದರ್ಶಿ ಅಕ್ಷತಾ ಎಮ್.ಬಿ, ಸುಶಾಂತ ಭಜಂತ್ರಿ ಮುಂತಾದವರಿದ್ದರು.

loading...

LEAVE A REPLY

Please enter your comment!
Please enter your name here